ಇಂದಿನಿಂದ ಈ ವಾರ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳು (Bank Holiday)ಮುಚ್ಚಲ್ಪಡುತ್ತವೆ. ನವೆಂಬರ್ 8 ರಂದು ಗುರುನಾನಕ್ ಜಯಂತಿಯಂದು ಹಲವು ರಾಜ್ಯಗಳು ಬ್ಯಾಂಕ್ ರಜಾದಿನ ಘೋಷಿಸಿವೆ. ಗುರುನಾನಕ್ ರಜೆಯ ಜೊತೆಗೆ ಕನಕದಾಸ ಜಯಂತಿ ಸೇರಿದಂತೆ ಒಟ್ಟು ನಾಲ್ಕು ದಿನಗಳ ಕಾಲ ಬ್ಯಾಂಕ್ ಬಂದ್ ಆಗಲಿದೆ.
ಈ ವಾರದ ಬ್ಯಾಂಕ್ ರಜಾದಿನದ (Bank Holiday ) ಸಂಪೂರ್ಣ ಮಾಹಿತಿ ಇಲ್ಲಿದೆ :
- ನವೆಂಬರ್ 8 (ಮಂಗಳವಾರ) : ಗುರು ನಾನಕ್ ಜಯಂತಿ, ಕಾರ್ತಿಕ ಪೂರ್ಣಿಮೆ, ಮತ್ತು ರಹಸ್ ಪೂರ್ಣಿಮೆ
- ಐಜ್ವಾಲ್, ಬೇಲಾಪುರ್, ಭುವನೇಶ್ವರ್, ಭೋಪಾಲ್, ಡೆಹ್ರಾಡೂನ್, ಚಂಡೀಗಢ, ಹೈದರಾಬಾದ್, ಜಮ್ಮು, ಕಾನ್ಪುರ, ಜೈಪುರ, ಕೋಲ್ಕತ್ತಾ, ಲಕ್ನೋ, ನಾಗ್ಪುರ, ನವದೆಹಲಿ, ಮುಂಬೈ, ರಾಯ್ಪುರ, ಶಿಮ್ಲಾ, ರಾಂಚಿ ಮತ್ತು ಶ್ರೀನಗರದಲ್ಲಿ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತದೆ.
- ನವೆಂಬರ್ 8 (ಮಂಗಳವಾರ) : ಗುರು ನಾನಕ್ ಜಯಂತಿ, ಕಾರ್ತಿಕ ಪೂರ್ಣಿಮೆ, ಮತ್ತು ರಹಸ್ ಪೂರ್ಣಿಮೆ
- ನವೆಂಬರ್ 11 (ಶುಕ್ರವಾರ) : ಕನಕದಾಸ ಜಯಂತಿ/ವಂಗಲ ಉತ್ಸವ
- ಶಿಲ್ಲಾಂಗ್ ಮತ್ತು ಬೆಂಗಳೂರಿನಲ್ಲಿರುವ ಬ್ಯಾಂಕುಗಳು ಮುಚ್ಚಲ್ಪಡುತ್ತವೆ
- ನವೆಂಬರ್ 12: ಎರಡನೇ ಶನಿವಾರ
- ನವೆಂಬರ್ 13: ಭಾನುವಾರ
ನವೆಂಬರ್ ತಿಂಗಳಿಗೆ ಒಟ್ಟು 10 ರಜೆಗಳಿವೆ. ಇದು ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು, ಹಾಗೆಯೇ ತಿಂಗಳ ಪ್ರತಿ ಭಾನುವಾರದ ರಜೆಯನ್ನು ಒಳಗೊಂಡಿದೆ. ಬ್ಯಾಂಕ್-ಸಂಬಂಧಿತ ಕೆಲಸವನ್ನು ಮಾಡುವುದಿದ್ದರೆ, ಜನರು ತಮ್ಮ ರಾಜ್ಯಗಳಲ್ಲಿ ರಜಾದಿನವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕೆಂದು ಸಲಹೆ ನೀಡಲಾಗಿದೆ. ಮೇಘಾಲಯದಲ್ಲಿ ನವೆಂಬರ್ 23 ರಂದು (ಬುಧವಾರ) ಸೆಂಗ್ ಕುಟ್ಸ್ನೆಮ್ ಅಥವಾ ಸೆಂಗ್ ಕುಟ್ ಸ್ನೆಮ್ ಸಂದರ್ಭದಲ್ಲಿ ಕೂಡ ಬ್ಯಾಂಕುಗಳು ರಜಾದಿನದಲ್ಲಿರುತ್ತದೆ.
ಇದನ್ನೂ ಓದಿ : Drinik Virus : ಬ್ಯಾಂಕ್ ಗ್ರಾಹಕರೇ ಎಚ್ಚರ! ಇದು ನಿಮ್ಮ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯಬಹುದು
ಇದನ್ನೂ ಓದಿ : Reliance Industries : ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕರಾಗಿ ಕುಂದಾಪುರದ ಕೆವಿ ಕಾಮತ್ ನೇಮಕ
ಇದನ್ನೂ ಓದಿ : Bank Holidays : ದೇಶದಲ್ಲಿ 21 ದಿನ, ಕರ್ನಾಟಕದಲ್ಲಿ 11 ದಿನ ಬ್ಯಾಂಕ್ ರಜೆ
ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ರಜಾದಿನಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಿದೆ. ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್‌ಮೆಂಟ್ ರಜಾದಿನ ಎಂದು ವರ್ಗಿಕರಿಸಲಾಗಿದೆ. ಎಲ್ಲಾ ಬ್ಯಾಂಕ್‌ಗಳು ಗಣರಾಜ್ಯೋತ್ಸವ, ಗಾಂಧಿ ಜಯಂತಿಯನ್ನು ಆಚರಿಸಿದರೆ, ಕೆಲವು ಬ್ಯಾಂಕ್‌ಗಳು ಪ್ರಾದೇಶಿಕ ಹಬ್ಬಗಳು ಮತ್ತು ರಜಾದಿನಗಳನ್ನು ಒಳಗೊಂಡಿರುತ್ತದೆ. ಅದರ ಜೊತೆಯಲಿ ಪ್ರಾದೇಶಿಕ ಬ್ಯಾಂಕ್ ರಜಾದಿನಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಲ್ಪಡುತ್ತದೆ
Bank Holiday: Bank will close 4 days in this week from tomorrow