Adipurush movie: ಚಿತ್ರತಂಡದ ‘ಆ’ ಎಡವಟ್ಟಿನಿಂದ ‘ಆದಿಪುರುಷ್’ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ

Adipurush movie: ಬಾಹುಬಲಿ ಬಳಿಕ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಆದಿಪುರುಷ್ (Adipurush) ಚಿತ್ರವನ್ನು ಎದುರು ನೋಡುತ್ತಿರುವ ಅಭಿಮಾನಿಗಳು ಆ ಚಿತ್ರತಂಡ ಮಾಡಿರುವ ಎಡವಟ್ಟಿನಿಂದ ನಿರಾಸೆಗೊಳ್ಳುವಂತಾಗಿದೆ. ಹೀಗಾಗಿ ಜನವರಿಯಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾದ ಡೇಟ್ ಮುಂದೂಡಲಾಗಿದೆ.

ಇದನ್ನೂ ಓದಿ: Bank Holiday : ಬ್ಯಾಂಕ್‌ ಕೆಲಸವಿದ್ದರೆ ಇವತ್ತೆ ಮುಗಿಸಿಕೊಳ್ಳಿ, ನಾಳೆಯಿಂದ 4 ದಿನ ಬ್ಯಾಂಕ್‌ ರಜೆ

ರಾಮಾಯಣದ ಕಥೆಯನ್ನಾಧರಿಸಿ ಸಿನಿಮಾ ಮಾಡಲಾಗಿದೆ. ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೂನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ರಾವಣನಾಗಿ ಸೈಫ್ ಅಲಿಖಾನ್ ಬಣ್ಣ ಹಚ್ಚಿದ್ದಾರೆ. ಸದ್ಯ ಈ ಚಿತ್ರ ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡಲಾಗಿದೆ. ಈ ಸಿನಿಮಾದ ಟೀಸರ್ ನೋಡಿ ಜನರು ಕಳಪೆ ಗ್ರಾಫಿಕ್ಸ್ ಎಂದು ಟೀಕೆ ಮಾಡಿದ್ದರು. ಅಷ್ಟೆ ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಆದಿಪುರುಷ್ ಸಿನಿಮಾದ ಪೋಸ್ಟರ್, ಟೀಸರ್ ಹಿಗ್ಗಾಮುಗ್ಗಾ ಟ್ರೋಲ್ ಆಗಿತ್ತು. ಹೀಗಾಗಿ ಚಿತ್ರತಂಡವು ಜೂನ್ 16ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದೆ.

ಅಕ್ಟೋಬರ್ 2ರಂದು ಚಿತ್ರತಂಡ ಟೀಸರ್ ರಿಲೀಸ್ ಮಾಡಿತ್ತು. ಇದನ್ನು ಕಂಡ ಜನರು ಕಳಪೆ ಗ್ರಾಫಿಕ್ಸ್ ಅಂತ ಟ್ರೋಲ್ ಮಾಡಿದ್ದರು. ಬಾಹುಬಲಿ ಬಳಿಕ ಪ್ರಭಾಸ್ ಅವರ ಸಿನಿಮಾಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಆದಿಪುರುಷ್ ಟೀಸರ್ ಬಹಳಷ್ಟು ಬೇಸರ ತರಿಸಿತ್ತು. ಹೀಗಾಗಿ ಚಿತ್ರತಂಡ ಸಿನಿಮಾದಲ್ಲಿ ಬದಲಾವಣೆ ತರಲು ಯೋಚಿಸಿ ರಿಲೀಸ್ ಡೇಟ್ ಮುಂದಕ್ಕೆ ಹಾಕಿದೆ. ಈ ಕುರಿತು ಚಿತ್ರನಿರ್ದೇಶಕ ಓಂ ರಾವತ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

ನಿರ್ದೇಶಕ ಓಂ ರಾವತ್ ಹೇಳಿದ್ದೇನು..?
‘ಆದಿಪುರುಷ್ ಒಂದು ಸಿನಿಮಾ ಅಲ್ಲ. ರಾಮನ ಬಗ್ಗೆ ಇರುವ ಭಕ್ತಿ-ಸಂಸ್ಕøತಿ. ಇತಿಹಾಸದ ಬಗೆಗಿರುವ ಬದ್ಧತೆಯನ್ನು ಈ ಚಿತ್ರ ಪ್ರತಿನಿಧಿಸುತ್ತದೆ. ಪ್ರೇಕ್ಷಕರಿಗೆ ಸಂಪೂರ್ಣ ದೃಶ್ಯವೈಭವವನ್ನು ನೀಡಲು ಚಿತ್ರತಂಡಕ್ಕೆ ಇನ್ನಷ್ಟು ಸಮಯ ಬೇಕಾಗಿದೆ. ಹೀಗಾಗಿ ಈ ಸಿನಿಮಾವನ್ನು 2023ರ ಜೂನ್ 16ರಂದು ರಿಲೀಸ್ ಮಾಡಲಾಗುತ್ತದೆ. ಭಾರತವು ಹೆಮ್ಮೆಪಡುವಂಥ ಸಿನಿಮಾ ಮಾಡುವ ಪಣತೊಟ್ಟಿದ್ದೇವೆ. ನಾವು ಮುಂದುವರಿಯಲು ನಿಮ್ಮ ಪ್ರೀತಿ, ಬೆಂಬಲ ನಮ್ಮ ಮೇಲಿರಲಿ’ ಎಂದು ನಿರ್ದೇಶಕ ಓಂ ರಾವತ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Ramya Come Back : 10 ವರ್ಷಗಳ ಬಳಿಕ ಡಾಲಿಗೆ ಜೊತೆಯಾಗಿದ್ದೇಕೆ ರಮ್ಯ ! ಇಲ್ಲಿದೆ ಎಕ್ಸಕ್ಲೂಸಿವ್ ಡಿಟೇಲ್ಸ್

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮುಂದಿನ ಜನವರಿಯಲ್ಲಿ ಆದಿಪುರುಷ್ ತೆರೆ ಕಾಣಬೇಕಿತ್ತು. ಆದರೆ ಕಳಪೆ ಗ್ರಾಫಿಕ್ಸ್ ನಿಂದಾಗಿ ಚಿತ್ರ ರಿಲೀಸ್ ಡೇಟ್ ಮುಂದೂಡಲಾಗಿದೆ. ಹೀಗಾಗಿ ತೆರೆ ಮೇಲೆ ರಾಮನ ಅವತಾರದಲ್ಲಿ ಪ್ರಭಾಸ್ ಅವರನ್ನು ಕಾಣಲು ಅಭಿಮಾನಿಗಳು ಮುಂದಿನ ಜೂನ್ ವರೆಗೆ ಕಾಯಲೇಬೇಕಾಗಿದೆ.

Adipurush movie: Prabhas starrer Adipurush movie delayed by 5 months; gets a new release date

Comments are closed.