ಭಾನುವಾರ, ಏಪ್ರಿಲ್ 27, 2025
HomebusinessBank Holidays January 2023 : ಗ್ರಾಹಕರೇ ಗಮನಿಸಿ : ಜನವರಿ ತಿಂಗಳಲ್ಲಿ 15 ದಿನ...

Bank Holidays January 2023 : ಗ್ರಾಹಕರೇ ಗಮನಿಸಿ : ಜನವರಿ ತಿಂಗಳಲ್ಲಿ 15 ದಿನ ಬ್ಯಾಂಕ್‌ ರಜೆ

- Advertisement -

ನವದೆಹಲಿ : ಹೊಸ ವರ್ಷದ ಹೊಸ್ತಿಲನಲ್ಲಿರುವ ದೇಶದ ಜನರು ಈಗಾಗಲೇ ಹೊಸ ಕ್ಯಾಲೆಂಡರ್‌ಗಳನ್ನು ಖರೀದಿ ಮಾಡಿರುತ್ತಾರೆ. ಹಾಗೆಯೇ ಜನವರಿ ತಿಂಗಳಲ್ಲಿ ಬ್ಯಾಂಕ್‌ ಗ್ರಾಹಕರು ವ್ಯವಹಾರಕ್ಕೆ ಹೋಗುವ ಮೊದಲು ರಜಾದಿನಗಳ ಮೇಲೆ (Bank Holidays January 2023) ಗಮನಹರಿಸಬೇಕಾಗಿದೆ. ಹೊಸ ವರ್ಷ ಆರಂಭದಲ್ಲೇ ಬ್ಯಾಂಕ್‌ಗೆ ಸಾಲು ಸಾಲು ರಜೆಗಳು ಇರುವುದ್ದರಿಂದ ಗ್ರಾಹಕರು ರಜಾದಿನಗಳನ್ನು ಪರಿಶೀಲಿಸಿಕೊಂಡು ವ್ಯವಹರಿಸಬೇಕಾಗಿದೆ.

ಈ ಕೆಲವು ಬ್ಯಾಂಕ್ ರಜಾದಿನಗಳು ಆಯಾ ಆಯಾ ರಾಜ್ಯಗಳಿಗೆ ಅನುಸಾರವಾಗಿ ನಿರ್ದಿಷ್ಟವಾಗಿರುತ್ತದೆ. ಜನವರಿ 2023 ರಲ್ಲಿ ದೇಶದಾದ್ಯಂತ ಬ್ಯಾಂಕುಗಳು 15 ದಿನಗಳವರೆಗೆ ಮುಚ್ಚಲ್ಪಟ್ಟಿರುತ್ತದೆ. ಇದರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳನ್ನು ಒಳಗೊಂಡಿರುತ್ತದೆ. ಪ್ರತಿ ತಿಂಗಳು ಮೊದಲ ಮತ್ತು ಮೂರನೇ ಶನಿವಾರದಂದು ಬ್ಯಾಂಕ್‌ಗಳು ತೆರೆದಿರುತ್ತವೆ. ಹಾಗಾಗಿ ಬ್ಯಾಂಕ್‌ ವ್ಯವಹಾರಕ್ಕೆ ಗ್ರಾಹಕರು ತೆರಳುವ ಮುನ್ನ ಈ ಕೆಳಗಿನ ರಜಾದಿನಗಳ ಮೇಲೆ ಗಮನಹರಿಸಬೇಕಾಗಿದೆ.

ಜನವರಿ 2023 ರಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ:

  • 1 ಜನವರಿ : ಭಾನುವಾರ (ಹೊಸ ವರ್ಷದ ದಿನದ ಕಾರಣ ಜನವರಿ 1 ರಂದು ಬ್ಯಾಂಕ್‌ಗಳು ಮುಚ್ಚಿರುತ್ತವೆ)
  • 2 ಜನವರಿ : ಹೊಸ ವರ್ಷಾಚರಣೆಯ ಕಾರಣ ಐಜ್ವಾಲ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
  • 3 ಜನವರಿ : ಇಮೊಯಿನು ಇರಾಟ್ಪಾ (Imoinu Iratpa) ಕಾರಣದಿಂದಾಗಿ ಇಂಫಾಲ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
  • 4 ಜನವರಿ : ಗಾನ್-ನ್ಗೈ ಕಾರಣ ಇಂಫಾಲ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
  • 8 ಜನವರಿ : ಭಾನುವಾರ
  • 12 ಜನವರಿ : ಸ್ವಾಮಿ ವಿವೇಕಾನಂದರ ಜನ್ಮದಿನದ ಕಾರಣ ಕೋಲ್ಕತ್ತಾದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
  • 14 ಜನವರಿ : ಎರಡನೇ ಶನಿವಾರ
  • 15 ಜನವರಿ : ಭಾನುವಾರ
  • 16 ಜನವರಿ : ತಿರುವಳ್ಳುವರ್ ದಿನದ ಕಾರಣ ಚೆನ್ನೈನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
  • 17 ಜನವರಿ : ಉಜವರ್ ತಿರುನಾಳ್ ಕಾರಣ ಚೆನ್ನೈನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
  • 22 ಜನವರಿ : ಭಾನುವಾರ
  • 23 ಜನವರಿ : ನೇತಾಜಿಯವರ ಜನ್ಮದಿನದ ಕಾರಣ ಕೋಲ್ಕತ್ತಾದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
  • 26 ಜನವರಿ : ಗಣರಾಜ್ಯೋತ್ಸವದ ಕಾರಣ ದೇಶದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
  • 28 ಜನವರಿ : ನಾಲ್ಕನೇ ಶನಿವಾರ
  • 29 ಜನವರಿ : ಭಾನುವಾರ

ಇದನ್ನೂ ಓದಿ : Aadhaar Card Update : ಆಧಾರ್‌ ಸುರಕ್ಷಿತೆಗಾಗಿ ಬಯೋಮೆಟ್ರಿಕ್ ಲಾಕಿಂಗ್ ಸಲಹೆ ನೀಡಿದ ಯುಐಡಿಎಐ

ಇದನ್ನೂ ಓದಿ : Post Office Scheme: ಅಂಚೆ ಕಚೇರಿ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಹೊಸ ವರ್ಷಕ್ಕೆ ಬಂಪರ್ ಗಿಫ್ಟ್ !

ಇದನ್ನೂ ಓದಿ : LPG Subsidy Hike : ಗ್ರಾಹಕರಿಗೆ ಗುಡ್‌ ನ್ಯೂಸ್‌ : ಎಲ್‌ಪಿಜಿ ಸಬ್ಸಿಡಿ ಹಣದಲ್ಲಿ ಏರಿಕೆ

ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ರಜಾದಿನಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಿದೆ. ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್‌ಮೆಂಟ್ ರಜಾದಿನ ಎಂದು ವರ್ಗಿಕರಿಸಲಾಗಿದೆ. ಎಲ್ಲಾ ಬ್ಯಾಂಕ್‌ಗಳು ರಾಷ್ಟ್ರೀಯ ಹಬ್ಬಗಳನ್ನು ಆಚರಿಸಿದರೆ, ಕೆಲವು ಬ್ಯಾಂಕ್‌ಗಳು ಪ್ರಾದೇಶಿಕ ಹಬ್ಬಗಳು ಮತ್ತು ರಜಾದಿನಗಳನ್ನು ಒಳಗೊಂಡಿರುತ್ತದೆ. ಅದರ ಜೊತೆಯಲಿ ಪ್ರಾದೇಶಿಕ ಬ್ಯಾಂಕ್ ರಜಾದಿನಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಲ್ಪಡುತ್ತದೆ.

Bank Holidays January 2023: Customers note: 15 days bank holiday in the month of January

RELATED ARTICLES

Most Popular