Karwar bus accident: ಶಾಪಿಂಗ್‌ ಗೆ ತೆರಳುತ್ತಿದ್ದ ವೇಳೆ ಬಸ್‌ ಢಿಕ್ಕಿ: ತಂದೆಯ ಕಣ್ಣೆದುರೇ ಕೊನೆಯುಸಿರೆಳೆದ ಮಗಳು

ಕಾರವಾರ: (Karwar bus accident) ಹೊಸ ವರ್ಷದ ಆಚರಣೆ ಮಾಡಲು ಶಾಪಿಂಗ್‌ ಗೆ ಅಪ್ಪ ಮಗಳಿಬ್ಬರು ಬೈಕ್‌ ನಲ್ಲಿ ತೆರಳಿದ್ದ ವೇಳೆ ಬಸ್‌ ಢಿಕ್ಕಿಯಾಗಿ ತಂದೆಯ ಎದುರಿಗೆ ಮಗಳು ಕೊನೆಯುಸಿರೆಳೆದ ಆಘಾತಕಾರಿ ಘಟನೆ ಕಾರವಾರದಲ್ಲಿ ನಡೆದಿದೆ. ಬೈಕ್‌ ಗೆ ಸೀಬರ್ಡ್‌ ಬಸ್‌ ಢಿಕ್ಕಿ ಹೊಡೆದ ಪರಿಣಾಮ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಲವಿಟಾ ಜಾರ್ಜ್‌ ಫೆರ್ನಾಂಡೀಸ್‌ (13 ವರ್ಷ) ದುರಂತವಾಗಿ ಸಾವಿಗೀಡಾದ ಬಾಲಕಿ. ಇನ್ನೂ ತಂದೆ ಜಾರ್ಜ್‌ ಫೆರ್ನಾಂಡೀಸ್‌(41 ವರ್ಷ) ಗೆ ಗಂಭೀರವಾದ ಗಾಯಗಳಾಗಿವೆ.

ಹೊಸ ವರ್ಷದ ಸಂಭ್ರಮಾಚರಣೆಗೆ ಬಟ್ಟೆ ಖರೀದಿ ಮಾಡುವ ಉದ್ದೇಶ ಹೊತ್ತ ತಂದೆ ಮಗಳಿಬ್ಬರು ಬೆಂಗಳೂರಿನಿಂದ ಕಾರವಾರಕ್ಕೆ ಬರುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದಿದ್ದ ಸೀಬರ್ಡ್‌ ಬಸ್‌ ಬೈಕ್‌ ಗೆ ಢಿಕ್ಕಿ (Karavara bus accident) ಹೊಡೆದಿದೆ. ಢಿಕ್ಕಿ ಹೊಡೆದ ಪರಿಣಾಮ ಬಾಲಕಿಯ ತಲೆ ರಸ್ತೆಗೆ ಬಡಿದು ಅತಿಯಾದ ರಕ್ತಸ್ರಾವವಾಗಿ ಸ್ಥಳದಲ್ಲೇ ಆಕೆ ಸಾವನ್ನಪ್ಪಿದ್ದಾಳೆ. ತಂದೆಗೂ ಕೂಡ ಘಟನೆಯಲ್ಲಿ ಗಂಭೀರವಾದ ಗಾಯಗಳಾಗಿದ್ದು, ಮಗಳ ಸಾವನ್ನು ಕಣ್ಣೆದುರೆ ನೋಡಿದ ತಂದೆಗೆ ಇನ್ನಷ್ಟು ಆಘಾತವಾಗಿದೆ.

ಇನ್ನೂ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೃತ ಬಾಲಕಿಯ ತಂದೆಯನ್ನು ಕಾರವಾರದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ನಡೆಯುತ್ತಿದ್ದಂತೆ ಸ್ಥಳೀಯರು ಬಸ್‌ ಅನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದಾರೆ. ಘಟನೆಯ ಸಂಬಂಧ ಕಾರವಾರ ನಗರ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Dehli crime news: 2 ನೇ ತರಗತಿ ವಿದ್ಯಾರ್ಥಿಯ ಖಾಸಗಿ ಭಾಗಕ್ಕೆ ನೈಲಾನ್‌ ದಾರ ಕಟ್ಟಿ ವಿಕೃತಿ ಮೆರೆದ ಸಹ ವಿದ್ಯಾರ್ಥಿಗಳು

ಇದನ್ನೂ ಓದಿ : Suicide at Live streaming: ಮದುವೆಗೆ ನಿರಾಕರಣೆ: ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ

ಇದನ್ನೂ ಓದಿ : 100 medical students fall sick : ವಿಷಾಹಾರ ಸೇವನೆ 100ಕ್ಕೂ ಅಧಿಕ ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ಥ

A shocking incident took place in Karwar when the father and daughter were going shopping on a bike to celebrate the New Year when a bus collided with the father and the daughter died.

Comments are closed.