ಸೋಮವಾರ, ಏಪ್ರಿಲ್ 28, 2025
Homebusinessಹೋಳಿ ಹಬ್ಬ 2023 : ಈ ಎಲ್ಲಾ ರಾಜ್ಯಗಳಲ್ಲಿ ಮಾರ್ಚ್ 8 ರಂದು ಬ್ಯಾಂಕ್‌ ಬಂದ್‌

ಹೋಳಿ ಹಬ್ಬ 2023 : ಈ ಎಲ್ಲಾ ರಾಜ್ಯಗಳಲ್ಲಿ ಮಾರ್ಚ್ 8 ರಂದು ಬ್ಯಾಂಕ್‌ ಬಂದ್‌

- Advertisement -

ನವದೆಹಲಿ : ದೇಶದಾದ್ಯಂತ ಈ ಬಾರೀ ಹೋಳಿ ಹೊಸ ಮೆರುಗನ್ನು ತರಲು ಸಜ್ಜಾಗಿದೆ. ಹೀಗಾಗಿ ಆರ್‌ಬಿಐ ಬ್ಯಾಂಕ್ ರಜಾದಿನಗಳ ಪಟ್ಟಿಯ ಪ್ರಕಾರ, ಹೋಳಿ 2023 ರಂದು ಮಾರ್ಚ್ 8 ರಂದು ಬ್ಯಾಂಕ್‌ಗಳು (Bank Holidays March 2023) ಮುಚ್ಚಲ್ಪಡುತ್ತವೆ. ಅಷ್ಟೇ ಅಲ್ಲದೇ, ಮಾರ್ಚ್ 7, 2023 ರಂದು (ಮಂಗಳವಾರ) ಹೋಲಿಕಾ ದಹನ್ ಸಂದರ್ಭದಲ್ಲಿ ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ಶಾಖೆಗಳು ಮುಚ್ಚಲ್ಪಡುತ್ತವೆ.

ಬ್ಯಾಂಕ್ ರಜಾದಿನಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ ಭಿನ್ನವಾಗಿರುತ್ತವೆ. ಆದ್ದರಿಂದ, ಬ್ಯಾಂಕ್ ಗ್ರಾಹಕರು ತಮ್ಮ ರಾಜ್ಯದಲ್ಲಿ ಯಾವ ದಿನ ಬ್ಯಾಂಕ್‌ಗಳನ್ನು ಮುಚ್ಚಲಾಗಿದೆ ಎಂಬುದನ್ನು ಪರಿಶೀಲಿಸಬೇಕಾಗಿದೆ. ಅದಕ್ಕೆ ಅನುಗುಣವಾಗಿ ತಮ್ಮ ಬ್ಯಾಂಕಿಂಗ್ ಚಟುವಟಿಕೆಗಳನ್ನು ಯೋಜಿಸಬೇಕು. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಬ್ಯಾಂಕುಗಳು ತೆರೆದಿರುತ್ತವೆ. ಆದರೆ, ಎರಡನೇ ಮತ್ತು ನಾಲ್ಕನೇ ಶನಿವಾರದಂದು ಮುಚ್ಚಲಾಗುತ್ತದೆ.

  • ಮಾರ್ಚ್ 7, 2023 ರಂದು (ಮಂಗಳವಾರ), ಹೋಲಿಕಾ ದಹನ್ ಸಂದರ್ಭದಲ್ಲಿ ಕೆಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಬ್ಯಾಂಕ್‌ಗಳನ್ನು ಮುಚ್ಚುವ ನಗರಗಳಲ್ಲಿ ಬೇಲಾಪುರ್, ಡೆಹ್ರಾಡೂನ್, ಗುವಾಹಟಿ, ಹೈದರಾಬಾದ್ – ತೆಲಂಗಾಣ, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ಪಣಜಿ, ರಾಂಚಿ ಮತ್ತು ಶ್ರೀನಗರ ಪ್ರದೇಶಗಳು ಸೇರಿವೆ.
  • ಮಾರ್ಚ್ 8, 2023 ರಂದು (ಬುಧವಾರ), ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಡೆಹ್ರಾಡೂನ್ ಮತ್ತು ಗ್ಯಾಂಗ್ಟಾಕ್ ಸೇರಿದಂತೆ ಕೆಲವು ನಗರಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಹೋಳಿ ಹಬ್ಬಕ್ಕೆ ಬ್ಯಾಂಕ್‌ಗಳು ಬಂದ್ ಆಗಲಿವೆ.
  • ಮಾರ್ಚ್ 9, 2023 ರಂದು, ಹೋಳಿ/ಯೋಸಾಂಗ್‌ನ ಎರಡನೇ ದಿನದಂದು ಬಿಹಾರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಮಾರ್ಚ್ 2023 ರಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ :

  • ಮಾರ್ಚ್ 03 : ಚಾಪ್ಚಾರ್ ಕುಟ್ (ಐಜ್ವಾಲ್, ಮಿಜೋರಾಂ)
  • ಮಾರ್ಚ್ 05 : ಭಾನುವಾರ ಬ್ಯಾಂಕ್‌ಗಳು ಮುಚ್ಚಿರುತ್ತವೆ.
  • ಮಾರ್ಚ್ 07 : ಹೋಳಿ/ಹೋಳಿ (ಎರಡನೇ ದಿನ)/ಹೋಲಿಕಾ ದಹನ್/ಧುಲಾಂಡಿ/ಡೋಲ್ ಜಾತ್ರೆ (ಬೇಲಾಪುರ್, ಡೆಹ್ರಾಡೂನ್, ಗುವಾಹಟಿ, ಹೈದರಾಬಾದ್ – ತೆಲಂಗಾಣ, ಜೈಪುರ, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ಪಣಜಿ, ರಾಂಚಿ ಮತ್ತು ಶ್ರೀನಗರ ಪ್ರದೇಶಗಳು)
  • ಮಾರ್ಚ್ 8 : ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಡೆಹ್ರಾಡೂನ್ ಮತ್ತು ಗ್ಯಾಂಗ್ಟಾಕ್ ಸೇರಿದಂತೆ ಕೆಲವು ನಗರಗಳಲ್ಲಿ ಬ್ಯಾಂಕ್ ರಜೆ.
  • ಮಾರ್ಚ್ 09 : ಹೋಳಿ (ಪಾಟ್ನಾ)
  • ಮಾರ್ಚ್ 11 : ಎರಡನೇ ಶನಿವಾರ
  • ಮಾರ್ಚ್ 12 : ಭಾನುವಾರ ಬ್ಯಾಂಕ್‌ಗಳು ಮುಚ್ಚಿರುತ್ತವೆ
  • ಮಾರ್ಚ್ 19 : ಭಾನುವಾರದಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ
  • ಮಾರ್ಚ್ 22 : ಬೇಲಾಪುರ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಮುಂಬೈ, ನಾಗ್ಪುರ, ಪಣಜಿ ಮತ್ತು ಪಾಟ್ನಾ ಸೇರಿದಂತೆ ಕೆಲವು ನಗರಗಳಲ್ಲಿ ಬ್ಯಾಂಕ್ ರಜೆ.
  • ಮಾರ್ಚ್ 25 : ನಾಲ್ಕನೇ ಶನಿವಾರ
  • ಮಾರ್ಚ್ 26 : ಭಾನುವಾರ ಬ್ಯಾಂಕುಗಳು ಮುಚ್ಚಿರುತ್ತವೆ
  • ಮಾರ್ಚ್ 30 : ಅಹಮದಾಬಾದ್, ಭೋಪಾಲ್, ಭುವನೇಶ್ವರ, ಚಂಡೀಗಢ, ಪಾಟ್ನಾ, ಲಕ್ನೋ, ಮುಂಬೈ ಮತ್ತು ನಾಗ್ಪುರ ಸೇರಿದಂತೆ ಕೆಲವು ನಗರಗಳಲ್ಲಿ ಬ್ಯಾಂಕ್ ರಜೆ.

ಇದನ್ನೂ ಓದಿ : ಬ್ಯಾಂಕ್‌ ಗ್ರಾಹಕರ ಗಮನಕ್ಕೆ : ಮಾರ್ಚ್ ತಿಂಗಳಲ್ಲಿ 12 ದಿನ ಬ್ಯಾಂಕ್‌ ರಜೆ

ಇದನ್ನೂ ಓದಿ : ಈ ವರ್ಗದವರಿಗೆ ಪ್ಯಾನ್-ಆಧಾರ್ ಲಿಂಕ್ ಕಡ್ಡಾಯ ಇಲ್ಲ ! ಹಾಗಾದರೆ ಯಾರಿಗೆ ಕಡ್ಡಾಯ ಗೊತ್ತಾ ?

ಇದನ್ನೂ ಓದಿ : ಆನ್‌ಲೈನ್ ಬ್ಯಾಂಕ್ ಖಾತೆಯನ್ನು ತೆರೆಯುವುದು ಹೇಗೆ ? ಹಂತ – ಹಂತ ಮಾರ್ಗದರ್ಶಿಗಾಗಿ ಇಲ್ಲಿ ಕ್ಲಿಕ್ಕಿಸಿ

Bank Holidays March 2023 : Holi Festival 2023 : Bank Bandh on March 8 in all these states

RELATED ARTICLES

Most Popular