Praveen Nettaru murder case: ಮತ್ತೋರ್ವ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್‌

ಮಂಗಳೂರು: (Praveen Nettaru murder case) ಬಿಜೆಪಿ ಮುಖಂಡ ಮಂಗಳೂರಿನ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತಂಡ ತನಿಖೆಗಿಳಿದಿದ್ದು, ಈ ವರೆಗೆ ಹಲವು ಆರೋಪಿಗಳನ್ನು ಬಂಧಿಸಿದೆ. ಇದೀಗ ಇನ್ನೋರ್ವ ಆರೋಪಿಯನ್ನು ಸಹ ಎನ್‌ಐಎ ಬೆಂಗಳೂರಿನಲ್ಲಿ ಬಂಧಿಸಿದ್ದು, ತನಿಖಾ ತಂಡ ತನಿಖೆಯನ್ನು ಇನ್ನಷ್ಟು ಬಲಗೊಳಿಸಿದೆ.

ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್‌ ನೆಟ್ಟಾರು ಅವರನ್ನು ಜುಲೈ ೨೬ ರಂದು ಬೆಳ್ಳಾರೆಯಲ್ಲಿರುವ ಅವರ ಕೋಳಿ ಅಂಗಡಿಯ ಬಳಿ ಬರ್ಬರವಾಗಿ ಹತ್ಯೆಗೈದು ಹಂತಕರು ಪರಾರಿಯಾಗಿದ್ದರು. ಈ ಹತ್ಯೆ ಪ್ರಕರಣವನ್ನು ಎನ್‌ಐಎ ವಹಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದೆ. ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸುವ ಉದ್ದೇಶದಿಂದ ಪಿಎಫ್‌ಐ ಅಲ್ಲಲ್ಲಿ ರಹಸ್ಯ ತಂಡಗಳನ್ನು ರಚಿಸಿತ್ತು. ಇನ್ನು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ(Praveen Nettaru murder case)ಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಸುಳ್ಯ ಟೌನ್ ಮತ್ತು ಬೆಳ್ಳಾರೆ ಗ್ರಾಮದಲ್ಲಿ ಪಿಎಫ್‌ಐ ಸದಸ್ಯರು ಮತ್ತು ಮುಖಂಡರ ಪಿತೂರಿ ಸಭೆಗಳನ್ನು ನಡೆಸಿದ್ದರು ಅನ್ನೋದು ತನಿಖೆಯಿಂದ ಬಯಲಾಗಿದೆ. ಅಲ್ಲದೇ ಸಭೆಯಲ್ಲಿ ಜಿಲ್ಲಾ ಸೇವಾ ತಂಡದ ಮುಖ್ಯಸ್ಥ ಮುಸ್ತಫಾ ಪೈಚಾರ್ ಅವರಿಗೆ ಹಿಂದೂ ಸಮಾಜದ ಯಾವ ವ್ಯಕ್ತಿಯನ್ನು ಟಾರ್ಗೆಟ್ ಮಾಡಬೇಕು ಎಂಬ ಕುರಿತು ಮಾಹಿತಿ ನೀಡುವಂತೆಯೂ ತಿಳಿಸಲಾಗಿತ್ತು.

ಸಭೆಯ ನಿರ್ಣಯದಂತೆ ನಾಲ್ವರನ್ನು ಗುರುತಿಸಲಾಗಿತ್ತು. ಜುಲೈ 2022 ರಲ್ಲಿ, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಸಮಿತಿಯ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನೇ ಟಾರ್ಗೆಟ್ ಮಾಡಲಾಗಿತ್ತು. ಅಲ್ಲದೇ ಸಾರ್ವಜನಿಕರಲ್ಲಿ ಭೀತಿಯನ್ನು ಹುಟ್ಟಿಸುವ ಸಲುವಾಗಿ ಪ್ರವೀಣ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಅನ್ನೋದು ಎನ್ಐಎ ತನಿಖೆಯಿಂದ ಬಯಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಭಾರತೀಯ ದಂಡನೆಯ ಸೆಕ್ಷನ್ 120B, 153A, 302 ಮತ್ತು 34 ರ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಕೋಡ್ ಮತ್ತು ಯುಎ (ಪಿ) ಕಾಯಿದೆ, 1967 ರ ಸೆಕ್ಷನ್ 16, 18 ಮತ್ತು 20, ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 25(1)(ಎ). ಪ್ರವೀಣ್ ಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಎನ್ಐಎ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು.

ಸುಳ್ಯ ಪಟ್ಟಣದ ಮಹಮ್ಮದ್ ಶಿಯಾಬ್, ಸುಳ್ಯ ತಾಲೂಕಿನ ಅಬ್ದುಲ್ ಬಶೀರ್, ಪಾಲ್ತಾಡಿಯ ರಿಯಾಝ್, ಸುಳ್ಯ ತಾಲೂಕಿನ ಮುಸ್ತಫಾ ಪೈಚಾರ್, ನೆಕ್ಕಿಲಾಡಿಯ ಮಸೂದ್ ಕೆ.ಎ, ಬಂಟ್ವಾಳದ ಕೊಡಾಜೆ ಮೊಹಮ್ಮದ್ ಶೆರೀಫ್, ಬೆಳ್ಳಾರೆಯ ಅಬೂಬಕ್ಕರ್ ಸಿದ್ದಿಕ್, ಸುಳ್ಯ ತಾಲೂಕಿನ ಇಸ್ಮಾಯಿಲ್ ಕೆ. ಬೆಳ್ಳಾರೆ ಗ್ರಾಮ, ಬೆಳ್ಳಾರೆ ಗ್ರಾಮದ ಕೆ ಮಹಮ್ಮದ್ ಇಕ್ಬಾಲ್, ಮಂಗಳಂತಿಯ ಶಹೀದ್ ಎಂ, ಬೆಳ್ಳಾರೆಯ ಮಹಮ್ಮದ್ ಶಫೀಕ್, ಸುಳ್ಯದ ಉಮ್ಮರ್ ಫಾರೂಕ್ ಎಂಆರ್, ಮಸಿದಿಯ ಅಬ್ದುಲ್ ಕಬೀರ್, ನೆಲ್ಲೂರುಕೆಮರಾಜೆ ಗ್ರಾಮದ ಮುಹಮ್ಮದ್ ಇಬ್ರಾಹಿಂ ಶಾ, ನಾವೂರಿನ ಸೈನುಲ್ ಅಬಿದ್ ವೈ, ಶೇಖ್ ಸದ್ದಾಂ ಹುಸೇನ್ ಗ್ರಾಮದ ಶೇಖ್ ಸದ್ದಾಂ ಹುಸೇನ್ , ಸವಣೂರಿನ ಝಕಿಯಾರ್ ಎ, ಬೆಳ್ಳಾರೆ ಗ್ರಾಮದ ಎನ್ ಅಬ್ದುಲ್ ಹಾರಿಸ್ ಮತ್ತು ಮಡಿಕೇರಿಯ ತುಫೈಲ್ ಎಂ.ಎಚ್. ಸೇರಿದಂತೆ 20 ಮಂದಿಯ ವಿರುದ್ದ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿತ್ತು.

ಇದನ್ನೂ ಓದಿ : ಹೃದಯದ ಆರೋಗ್ಯಕ್ಕೆ ಯೋಗ :ಹೃದಯಾಘಾತ ತಡೆಯುತ್ತದೆ 7 ಶಕ್ತಿಯುತ ಆಸನಗಳು

ಉಳಿದಂತೆ ಆರೋಪಿಗಳಾದ ಮುಸ್ತಫಾ ಪೈಚಾರ್, ಮಸೂದ್ ಕೆಎ, ಕೊಡಾಜೆ ಮೊಹಮ್ಮದ್ ಶೆರೀಫ್, ಅಬೂಬಕ್ಕರ್ ಸಿದ್ದಿಕ್, ಉಮ್ಮರ್ ಫಾರೂಕ್ ಎಂಆರ್ ಮತ್ತು ತುಫೈಲ್ ಎಂಎಚ್ ಪರಾರಿಯಾಗಿದ್ದು, ಅವರ ಕುರಿತು ಮಾಹಿತಿ ನೀಡಿದವರಿಗೆ ತಲಾ ೫ ಲಕ್ಷ ರೂಪಾಯಿ ನಗದು ಬಹುಮಾನವನ್ನು ಎನ್ಐಎ ಘೋಷಣೆ ಮಾಡಲಾಗಿತ್ತು. ಇದೀಗ ಅದೇ ಪ್ರವೀಣ್‌ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇನ್ನೋರ್ವ ಆರೋಪಿ ಎನ್‌ಐಎ ಬಲೆಗೆ ಬಿದ್ದಿದ್ದು, ಆರೋಪಿಯನ್ನು ಬಂಧಿಸುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ.

Praveen Nettaru murder case: Another accused arrested in Bangalore

Comments are closed.