ಭಾನುವಾರ, ಏಪ್ರಿಲ್ 27, 2025
HomebusinessUPI ಪಾವತಿಯಲ್ಲಿ ಬಾರೀ ಬದಲಾವಣೆ : ಮೋದಿ ಸರಕಾರದಿಂದ ಹೊಸ ರೂಲ್ಸ್‌ ಜಾರಿ

UPI ಪಾವತಿಯಲ್ಲಿ ಬಾರೀ ಬದಲಾವಣೆ : ಮೋದಿ ಸರಕಾರದಿಂದ ಹೊಸ ರೂಲ್ಸ್‌ ಜಾರಿ

- Advertisement -

Big Changes in UPI Payments : ಡಿಜಿಟಲ್‌ ಯುಗದಲ್ಲಿ ಯುಪಿಐ (UPI) ಪಾವತಿಯತ್ತ ಜನರು ಆಕರ್ಷಿತರಾಗಿದ್ದಾರೆ. ಜೊತೆ ಜೊತೆಗೆ ಸೈಬರ್‌ ಕಳ್ಳರ ಹಾವಳಿಯೂ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಕೇಂದ್ರದ ನರೇಂದ್ರ ಮೋದಿ (PM Narendra Modi)  ಅವರ ನೇತೃತ್ವದ ಸರಕಾರ ಯುಪಿಐ ಪಾವತಿಯನ್ನು ಇನ್ನಷ್ಟು ಸುರಕ್ಷಿತವಾಗಿಸಲು ಮುಂದಾಗಿದೆ. ಇದಕ್ಕಾಗಿ ಯುಪಿಐ ಪಾವತಿಯಲ್ಲಿ ಹಲವು ಬದಲಾವಣೆಗಳನ್ನು ತಂದಿದೆ.

big Changes in UPI Payments New rules implemented by Modi government
Image Credit to Original Source

ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ವಹಿವಾಟು ದಿನೇ ದಿನೇ ಏರಿಕೆಯಾಗುತ್ತಲೇ ಇದೆ. PhonePe, Google Pay, Paytm ಸೇರಿದಂತೆ ವಿವಿಧ ಪ್ಲ್ಯಾಟ್‌ ಫಾರ್ಮ್‌ಗಳ ಮೂಲಕ ಜನರು ಯುಪಿಐ ಪಾವತಿಯನ್ನು ಮಾಡುತ್ತಿದ್ದಾರೆ. ಯಾವುದೇ ಕಿರಿಕಿರಿ ಇಲ್ಲದೇ ಯುಪಿಐ ಮೂಲಕ ಯಾವುದೇ ಪಾವತಿಯನ್ನು ಮಾಡಲು ಹಾಗೂ ಸ್ವೀಕರಿಸಬಹುದಾಗಿದೆ.

ಭಾರತ ಸರಕಾರ ಯುಪಿಐ ಪಾವತಿ ಜನಪ್ರಿಯವಾಗುತ್ತಿರುವ ಹೊತ್ತಲ್ಲೇ ಹೊಸ ರೂಲ್ಸ್‌ ಜಾರಿ ಮಾಡಿದೆ. ಭಾರತದಲ್ಲಿ ಹೆಚ್ಚುತ್ತಿರುವ ಸೈಬರ್‌ ವಂಚನೆ ಪ್ರಕಣರಗಳನ್ನು ತಡೆಯುವ ಸಲುವಾಗಿ. ಕೇಂದ್ರ ಸರಕಾರ ಯುಪಿಐ ಪಾವತಿಗೆ ಕನಿಷ್ಠ ಸಮಯದ ಮಿತಿಯನ್ನು ಹೇರಲು ಯೋಜನೆಯನ್ನು ರೂಪಿಸಿದೆ.

ಇದನ್ನೂ ಓದಿ : ಬ್ಯಾಂಕ್‌ ಗ್ರಾಹಕರ ಗಮನಕ್ಕೆ : ಡಿಸೆಂಬರ್‌ನಲ್ಲಿ 18 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ

ಏನಿದು UPI ಕನಿಷ್ಠ ಸಮಯ ಮಿತಿ ?

ಡಿಜಿಟಲ್‌ ಪಾವತಿಯು ವೇಗವಾಗಿ ಬೆಳೆಯುತ್ತಿರುವ ಹೊತ್ತಲ್ಲೇ ಗ್ರಾಹಕರಿಗೆ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಯುಪಿಐ ಪಾವತಿ ನಗರ ಪ್ರದೇಶ ಮಾತ್ರವಲ್ಲದೇ ಗ್ರಾಮೀಣ ಭಾಗದಲ್ಲಿಯೂ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಡಿಜಿಟಲ್‌ ಪಾವತಿಯ ಜೊಗೆತೆ ಆನ್‌ಲೈನ್‌ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೇ ಕಾರಣದಿಂದಲೇ ಕೇಂದ್ರ ಸರಕಾರ ಕನಿಷ್ಠ ಸಮಯದ ಮಿತಿಯನ್ನು ಜಾರಿಗೊಳಿಸಲಿದೆ.

ಯುಪಿಐ ಪಾವತಿಯಲ್ಲಿ ಹಣ ಪಾವತಿ ಹಾಗೂ ಸ್ವೀಕಾರ ಮಾಡುವವರ ನಡುವೆ ಇದುವರೆಗೆ ಯಾವುದೇ ಸಮಯದ ಮಿತಿ ಇರಲಿಲ್ಲ. ಆದ್ರೆ ಇನ್ಮುಂದೆ ಕನಿಷ್ಠ 4 ಗಂಟೆಗಳ ಮಿತಿಯನ್ನು ಹೇರಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಅದ್ರಲ್ಲೂ 2,000 ರೂಪಾಯಿಯಿಂದ ಅಧಿಕ ವಹಿವಾಟಿನ ಮೇಲೆ ಸಮಯದ ಮಿತಿ ಹೇರಿಕೆಯಾಗುವ ಸಾಧ್ಯತೆಯಿದೆ.

big Changes in UPI Payments New rules implemented by Modi government
Image Credit to Original Source

ಹಣವನ್ನು ಪಾವತಿ ಮಾಡಿದ ನಂತರ 4 ಗಂಟೆಗಳ ಕಾಲಾವಕಾಶವನ್ನು ನೀಡುವುದರಿಂದ ಯುಪಿಐ ವಂಚನೆಯನ್ನು ತಡೆಲು ಸಾಧ್ಯವಾಗುತ್ತದೆ. ಸದ್ಯ ಯಾವುದೇ ಕಾಲಾವಕಾಶವನ್ನು ನೀಡದೇ ಇರೋದ್ರಿಂದಾಗಿ ಪಾವತಿದಾರರು ಸುಲಭವಾಗಿ ಹಣವನ್ನು ಪಾವತಿ ಹಾಗೂ ಸ್ವೀಕಾರ ಮಾಡಬಹುದಾಗಿತ್ತು.

ಡಿಜಿಟಲ್ ಪಾವತಿ ವಿಧಾನಗಳಾದ ತಕ್ಷಣದ ಪಾವತಿ ಸೇವೆ (IMPS), ರಿಯಲ್-ಟೈಮ್ ಗ್ರಾಸ್ ಸೆಟಲ್‌ಮೆಂಟ್ (RTGS), ಮತ್ತು ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಗಳಲ್ಲಿ ಅಳವಡಿಸಲಾಗಿದೆ. ಅಸ್ತಿತ್ವದಲ್ಲಿರುವ ಬಳಕೆದಾರರು ಹೊಸ UPI ಖಾತೆಯನ್ನು ಸ್ಥಾಪಿಸಿದಾಗ ಮೊದಲ 24 ಗಂಟೆಗಳಲ್ಲಿ ಗರಿಷ್ಠ 5,000 ರೂ.ಗಳನ್ನು ಕಳುಹಿಸಲು ಅನುಮತಿಸಲಾಗಿದೆ.

ಇದನ್ನೂ ಓದಿ : ಕಿಸಾನ್‌ ವಿಕಾಸ ಪತ್ರ ಪಡೆಯುವುದು ಹೇಗೆ ? ಇದರ ಪ್ರಯೋಜನಗಳೇನು ?

ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್‌ಗಳ ವರ್ಗಾವಣೆಗೆ 50,000 ರೂಪಾಯಿಗಳನ್ನು 24 ಗಂಟೆಗಳ ಒಳಗೆ ವರ್ಗಾಯಿಸಬಹುದು. ಆದರೆ ಯೋಜನೆಗಳ ಪ್ರಕಾರ, ಹೊಸ ವ್ಯಕ್ತಿಗೆ ಪಾವತಿ ಮಾಡಲು ಯಾರಾದರೂ ಪ್ರಸ್ತಾಪಿಸಿದಾಗ ನಾಲ್ಕು ಗಂಟೆಗಳ ಕಾಲ ಮಿತಿಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಲಾಗುತ್ತದೆ.

ಡಿಜಿಟಲ್ ಪಾವತಿ ವಿಭಾಗದಲ್ಲಿ ಸಮಸ್ಯೆ ಸೃಷ್ಟಿಸಿದ್ರೂ ಕೂಡ, ಸೈಬರ್‌ ಅಪರಾಧ ತಡೆಯಲು ಉತ್ತಮ ಮಾರ್ಗವಾಗಿದೆ ಸೈಬರ್ ಅಪರಾಧಿಗಳು ಮತ್ತು ವಂಚಕರು UPI ವಹಿವಾಟಿನ ಲಾಭ ಪಡೆಯಲು ವಿಫಲರಾಗಬಹುದು ಎಂದು ಉಲ್ಲೇಖಿಸಲಾಗಿದೆ. ಕಳೆದ ಮಂಗಳವಾರ ಬ್ಯಾಂಕ್ ಅಧಿಕಾರಿಗಳ ಜೊತೆಗೆ ಈಗಾಗಲೇ ಸಭೆ ನಡೆಸಲಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಬಾಕಿ ಮೊತ್ತ ಬಿಡುಗಡೆ : ನಿಮಗೂ ಬಂದಿದ್ಯಾ ಒಮ್ಮೆ ಚೆಕ್‌ ಮಾಡಿ

ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ, ಅನುಮಾನಾಸ್ಪದ ವಹಿವಾಟುಗಳಲ್ಲಿ ಬಳಸಲಾದ 70 ಲಕ್ಷ ಮೊಬೈಲ್ ಸಂಖ್ಯೆಗಳನ್ನು ಅಮಾನತುಗೊಳಿಸಲಾಗಿದೆ. ಅನುಮಾನಾಸ್ಪದ ಮೊಬೈಲ್‌ ಸಂಖ್ಯೆಗಳ ಅಮಾನತು ಆನ್‌ಲೈನ್ ಪಾವತಿ ವಂಚನೆಯನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

big Changes in UPI Payments New rules implemented by Modi government

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular