ಗೃಹಲಕ್ಷ್ಮೀ ಯೋಜನೆ ಬಾಕಿ ಮೊತ್ತ ಬಿಡುಗಡೆ : ನಿಮಗೂ ಬಂದಿದ್ಯಾ ಒಮ್ಮೆ ಚೆಕ್‌ ಮಾಡಿ

Gruha Lakshmi Scheme : ಕರ್ನಾಟಕ ಸರಕಾರ (Karnataka Government) ಮಹಿಳೆಯರಿಗೆ ಆರ್ಥಿಕ ಸಹಕಾರ ನೀಡುವ ಸಲುವಾಗಿ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಮಹಿಳೆಯರ ಬ್ಯಾಂಕ್‌ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿಯನ್ನು ವರ್ಗಾವಣೆ ಮಾಡಲಾಗುತ್ತಿದೆ

Gruha Lakshmi Scheme : ಕರ್ನಾಟಕ ಸರಕಾರ (Karnataka Government) ಮಹಿಳೆಯರಿಗೆ ಆರ್ಥಿಕ ಸಹಕಾರ ನೀಡುವ ಸಲುವಾಗಿ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಮಹಿಳೆಯರ ಬ್ಯಾಂಕ್‌ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿಯನ್ನು ವರ್ಗಾವಣೆ ಮಾಡಲಾಗುತ್ತಿದೆ. ಇದುವರೆಗೂ ಗೃಹಲಕ್ಷ್ಮೀ ಯೋಜನೆಯ ಹಣ ಸಿಗದೇ ಇರುವವರಿಗೆ ಸರಕಾರ ಇದೀಗ ಗುಡ್‌ನ್ಯೂಸ್‌ ಕೊಟ್ಟಿದೆ.

ಗೃಹಲಕ್ಷ್ಮೀ ಯೋಜನೆಯ ಮೂಲಕ ಈಗಾಗಲೇ ಒಟ್ಟು 3 ಕಂತುಗಳಲ್ಲಿ ಮಹಿಳೆಯರಿಗೆ ಪ್ರತೀ ತಿಂಗಳು 2000 ರೂಪಾಯಿಯಂತೆ ಇದುವರೆಗೆ ಒಟ್ಟು 6000 ರೂಪಾಯಿ ಹಣವನ್ನು ವರ್ಗಾವಣೆ ಮಾಡಿದೆ. ಆದರೂ ಸುಮಾರು 5 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಇದುವರೆಗೂ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗಿಲ್ಲ.

Gruha Lakshmi Scheme Balance fund Release Check once your Bank Account
Image Credit to Original Source

ರಾಜ್ಯದಲ್ಲಿನ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ದೊರಕಬೇಕು ಅನ್ನೋ ಕಾರಣಕ್ಕೆ ರಾಜ್ಯ ಸರಕಾರ ಹಲವು ಕ್ರಮ  ಕೈಗೊಂಡಿದೆ. ಆಧಾರ್‌ ಸೀಡಿಂಗ್‌ ಆಗದ ಕಾರಣಕ್ಕೆ ಈಗಾಗಲೇ ಬಹುತೇಕ ಮಹಿಳೆಯರ ಖಾತೆಗಳಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗಿಲ್ಲ. ಜೊತೆಗೆ ಕೆಲವೊಂದು ಮಹಿಳೆಯರ ಖಾತೆಯಲ್ಲಿ ತಾಂತ್ರಿಕ ಸಮಸ್ಯೆಯಿದೆ.

ಇದನ್ನೂ ಓದಿ :  11.5 ಕೋಟಿ ಪ್ಯಾನ್ ಕಾರ್ಡ್ ರದ್ದು : ನಿಮ್ಮ ಪ್ಯಾನ್ ಕಾರ್ಡ್ ಕೂಡ ರದ್ದಾಗಿದೆಯಾ ? ಯಾವುದಕ್ಕೂ ಒಮ್ಮೆ ಪರಿಶೀಲಿಸಿ

ತಾಂತ್ರಿಕ ಸಮಸ್ಯೆ, ಆಧಾರ್‌ ಸೀಡಿಂಗ್‌, ರೇಷನ್‌ ಕಾರ್ಡ್‌ ಜೊತೆಗೆ ಆಧಾರ್‌ ಲಿಂಕ್‌, ಬ್ಯಾಂಕ್‌ ಖಾತೆಯ ಜೊತೆಗೆ ಆಧಾರ್‌ ಲಿಂಕ್‌ ಮಾಡುವುದು, ರೇಷನ್‌ ಕಾರ್ಡ್‌ ತಿದ್ದುಪಡಿ ಸೇರಿದಂತೆ ಸರಕಾರ ಹಲವು ಬಾರಿ ಅವಕಾಶ ನೀಡಿದೆ. ಆದರೂ ಕೂಡ ಲಕ್ಷಾಂತರ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ತಲುಪಿಲ್ಲ.

ಇದನ್ನೂ ಓದಿ : ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 30,000 ರೂ. : ಗೃಹಲಕ್ಷ್ಮೀ ಬೆನ್ನಲ್ಲೇ ಧನಶ್ರೀ ಯೋಜನೆಗೂ ಅರ್ಜಿ ಸಲ್ಲಿಸಿ

ಇದೀಗ ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆಯ ಹಣ ದೊರಕದೇ ಇರುವ ಗೃಹಿಣಿಯರ ಖಾತೆಯ ಬದಲು ಎರಡನೇ ಹಿರಿಯ ಸದಸ್ಯನ ಖಾತೆಗೆ (ಗಂಡನ ಖಾತೆ) ಹಣ ವರ್ಗಾವಣೆ ಮಾಡಲು ಯೋಜನೆ ರೂಪಿಸಿದೆ. ಒಂದೊಮ್ಮೆ ಗಂಡ ಇಲ್ಲದೇ ಇದ್ರೆ ಮನೆಯ ಎರಡನೇ ಹಿರಿಯ ಸದಸ್ಯರ ಖಾತೆಗೆ ಹಣ ಜಮೆ ಆಗಲಿದೆ.

Gruha Lakshmi Scheme Balance fund Release Check once your Bank Account
Image Credit to Original Source

ಜೊತೆಗೆ ಅಂಗನವಾಡಿ ಸಿಬ್ಬಂದಿಗಳನ್ನು ಬಳಸಿಕೊಂಡು ತಾಂತ್ರಿಕ ಸಮಸ್ಯೆ ಪರಿಹರಿಸುವ ಜೊತೆಗೆ ಗೃಹಲಕ್ಷ್ಮೀ ಯೋಜನೆಯ ಲಾಭ ಸಿಗದೇ ಇರುವವರ ಮನೆ ಬಾಗಿಲಿಗೆ ಬಂದು ಸಮಸ್ಯೆ ಇತ್ಯರ್ಥ ಪಡಿಸುವ ಕಾರ್ಯಕ್ಕೆ ಮುಂದಾಗಿದೆ. ಒಂದೊಮ್ಮೆ ಇದುವರೆಗೆ ಗೃಹಲಕ್ಷ್ಮೀ ಯೋಜನೆಯ ಹಣ ದೊರಕದೇ ಇರುವವರಿಗೆ ಒಟ್ಟಿಗೆ 6000 ರೂಪಾಯಿ ದೊರಕಲಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಹಣ ಪಡೆಯುವುದು ಇನ್ನಷ್ಟು ಸುಲಭ : ಗೃಹಿಣಿಯರಿಗೆ ಗುಡ್‌ನ್ಯೂಸ್‌ ಜಾರಿಯಾಯ್ತು ಹೊಸ ರೂಲ್ಸ್‌

ಪ್ರತೀ ತಿಂಗಳು ಮೊದಲ ಅಥವಾ ಎರಡನೇ ವಾರದಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಸರಕಾರ ವರ್ಗಾವಣೆ ಮಾಡುತ್ತಿದೆ. ನಿಮಗೆ ಒಂದೊಮ್ಮೆ ಹಣ ಜಮೆ ಆಗಿರುವ ಕುರಿತ ಎಸ್‌ಎಂಎಸ್‌ ಬಾರದೇ ಇದ್ದಲ್ಲಿ ನೀವು ನೇರವಾಗಿ ಬ್ಯಾಂಕ್‌ ಖಾತೆಗೆ ಭೇಟಿ ನೀಡುವ ಮೂಲಕ ಹಣ ಜಮೆ ಆಗಿದೆಯಾ ಇಲ್ಲವೇ ಅಂತಾ ಪರಿಶೀಲಿಸಿಕೊಳ್ಳುವುದು ಉತ್ತಮ.

Gruha Lakshmi Scheme Balance fund Release: Check once your Bank Account

Comments are closed.