Budget Session 2022: ಸಂಸತ್​ ಬಜೆಟ್​ ಅಧಿವೇಶನ ಆರಂಭ; ಇಲ್ಲಿದೆ ಫೆಬ್ರವರಿ 2ರಂದು ಮಂಡನೆಯಾಗಲಿರುವ ಬಜೆಟ್‌ನ ಕುತೂಹಲಕರ ಮಾಹಿತಿ

ನವದೆಹಲಿ: ಕೊರೊನಾ ಸಾಂಕ್ರಾಮಿಕ ದೇಶದಲ್ಲಿ ಕಾಣಿಸಿಕೊಂಡ ಬಳಿಕ ನಡೆಯುತ್ತಿರುವ ಸಂಸತ್​ನ ಆರನೇ ಅಧಿವೇಶನ (Budget Session 2022) ಸೋಮವಾರದಿಂದ ಆರಂಭವಾಗಲಿದೆ. ಬಜೆಟ್​ ಅಧಿವೇಶನದ ಮೊದಲ ಹಂತದ ಮೊದಲ ದಿನದ ಕಲಾಪವು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಉಭಯ ಸದನಗಳನ್ನು ಉದ್ದೇಶಿಸಿ ಮಾಡುವ ಭಾಷಣದೊಂದಿಗೆ ಆರಂಭವಾಗಲಿದೆ. ಮಧ್ಯಾಹ್ನ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ. ಮಂಗಳವಾರ 2022 ಮತ್ತು 23ನೇ ಸಾಲಿನ ಕೇಂದ್ರ ಆಯವ್ಯಯ (Budget 2022) ಮಂಡನೆ ಆಗಲಿದೆ.

ಕೃಷಿಕರ ಕಷ್ಟ, ಪೆಗಾಸಸ್​ ಸಾಫ್ಟ್‌​ವೇರ್​ ಬಳಸಿ ಬೇಹುಗಾರಿಕೆ, ಪೂರ್ವ ಲಡಾಖ್​ನಲ್ಲಿ ಚೀನಾ ಅತಿಕ್ರಮಣದ ವಿಷಯಗಳ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ರಣತಂತ್ರ ರೂಪಿಸಿವೆ.


ಕೋವಿಡ್​ ಕಾರಣ ಫೆಬ್ರವರಿ 2ರಿಂದ ರಾಜ್ಯಸಭೆಯು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ, ಲೋಕಸಭೆಯು ಮಧ್ಯಾಹ್ನದಿಂದ ರಾತ್ರಿಯವರೆಗೆ ಕಾರ್ಯನಿರ್ವಹಿಸಲಿವೆ. ಬುಧವಾರದಿಂದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಚರ್ಚೆ ನಡೆಯಲಿದ್ದು, ಫೆಬ್ರವರಿ 7ರಂದು ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಪ್ರತಿಕ್ರಿಯಿಸುವ ಸಾಧ್ಯತೆ ಇದೆ. ಬಜೆಟ್​ ಅಧಿವೇಶನದ ಮೊದಲ ಹಂತ ಫೆಬ್ರವರಿ 11ಕ್ಕೆ ಕೊನೆಯಾಗಲಿದ್ದು, ಎರಡನೇ ಹಂತದಲ್ಲಿ ಮಾರ್ಚ್​ 14ರಿಂದ ಏಪ್ರಿಲ್​ 8ರವರೆಗೆ ನಡೆಯಲಿದೆ. ಕೃಷಿಕರು ಎದುರಿಸುತ್ತಿರುವ ಸಂಕಷ್ಟ, ಪೆಗಾಸಸ್​ ಸಾಫ್ಟ್‌ವೇರ್​ ಬೇಹುಗಾರಿಕೆ, ಚೀನಾ ಅತಿಕ್ರಮಣದ ವಿಷಯಗಳನ್ನು ಇರಿಸಿಕೊಂಡು ಸರ್ಕಾರವನ್ನು ಹಣಿಯಲು ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ. ಪಂಚ ರಾಜ್ಯಗಳ ಚುನಾವಣೆ (ಫೆಬ್ರವರಿ 10ರಿಂದ ಮಾರ್ಚ್​ 7)ರವರೆಗೆ ನಡೆಯಲಿದ್ದು, ಇದರ ಮಧ್ಯೆ ಮತ್ತು ಮಾರ್ಚ್​ 10ರ ಲಿತಾಂಶದ ನಂತರ ನಡೆಯುತ್ತಿರುವ ಕಾರಣ ತೀವ್ರ ಕುತೂಹಲ ಕೆರಳಿಸಿದೆ.

ಒಟ್ಟಾರೆ ಬಜೆಟ್​ ಅಧಿವೇಶನದಲ್ಲಿ 29 ಕಲಾಪಗಳು ನಡೆಯಲಿದ್ದು, ಪ್ರತಿ ದಿನ ವಾಡಿಕೆಗಿಂತ ಒಂದು ತಾಸು ಕಡಿಮೆ ಕಾಲ ಉಭಯ ಸದನಗಳು ಕಾರ್ಯನಿರ್ವಹಿಸಲಿವೆ. ರಾಜ್ಯಸಭೆಯಲ್ಲಿ ಶೂನ್ಯವೇಳೆಯ ಕಲಾಪವನ್ನು 30 ನಿಮಿಷಗಳಿಗೆ ಸೀಮಿತ ಮಾಡಲಿದೆ. ಮೊದಲ ಹಂತದ ಅಧಿವೇಶನದಲ್ಲಿ 10 ಮತ್ತು ಎರಡನೇ ಹಂತದಲ್ಲಿ 19 ಕಲಾಪಗಳನ್ನು ನಿಗದಿ ಮಾಡಲಾಗಿದೆ. ಒಟ್ಟಾರೆ ಸುಮಾರು 80 ತಾಸು ಕಲಾಪ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, ರಾಜ್ಯಸಭೆಯ ಸಭಾಪತಿಗಳಾದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸಭಾನಾಯಕರ ಜತೆ ಸೋಮವಾರ ಸಂಜೆ ವರ್ಚುವಲ್​ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ: Central Budget 2022: ಕೇಂದ್ರ ಬಜೆಟ್‌ನಲ್ಲಿ ಔಷಧ ತಯಾರಿಕಾ ವಲಯದ ನಿರೀಕ್ಷೆಗಳೇನು?

ಇದನ್ನೂ ಓದಿ: Indian Smartphone OS: ಆಂಡ್ರಾಯ್ಡ್ ಹಾಗೂ ಐಓಎಸ್ ಗೆ ಪ್ರತಿಸ್ಪರ್ಧಿಯಾಗಿ ಭಾರತೀಯ ಒಎಸ್! ಮೇಡ್ ಇನ್ ಇಂಡಿಯಾ ತಂತ್ರಾಂಶ ತಯಾರಿಗೆ ಕೇಂದ್ರದ ಒಲವು

(Budget Session 2022 will starts from today know interesting facts and history)

Comments are closed.