ನವದೆಹಲಿ : ಕಳೆದ ಕೆಲವು ದಿನಗಳಿಂದ ತೈಲ ಬೆಲೆ ಏರಿಕೆ ವಾಹನ ಸವಾರರ ತಲೆನೋವಿಗೆ ಕಾರಣವಾಗಿದೆ. ಇದೀಗ ಮತ್ತೆ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಭಾರತದ ತೈಲ ಮಾರುಕಟ್ಟೆಯಲ್ಲಿಯೂ ಇಂಧನ ಬೆಲೆಗಳು ಏರಿಕೆಯಾಗಿದೆ.
ಪೆಟ್ರೋಲ್ ಪ್ರತಿ ಲೀಟರ್‌ಗೆ 19 ರಿಂದ 25 ಪೈಸೆಗಳಷ್ಟು ದುಬಾರಿಯಾಗಿದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 24 ರಿಂದ 27 ಪೈಸೆ ಹೆಚ್ಚಳವಾಗಿದೆ. ಇಂಧನ ಬೆಲೆಗಳು ಭಾರತದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿವೆ. ಒಂದು ಲೀಟರ್ ಪೆಟ್ರೋಲ್ 107.47 ರೂ. ತಲುಪಿದ್ದ ನಂತರ ಇತ್ತೀಚಿನ ಬೆಲೆ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಪೆಟ್ರೋಲ್ ಚಿಲ್ಲರೆ ಬೆಲೆ ಪ್ರತಿ ಲೀಟರ್‌ಗೆ 101.39 ರೂ.ಗೆ ಇಳಿದಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ ಜುಲೈ 17 ರ ನಂತರ ಪೆಟ್ರೋಲ್ ಬೆಲೆಯಲ್ಲಿ ಮೊದಲ ಹೆಚ್ಚಳವಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 101.87 ರೂ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಪ್ರತಿ ಲೀಟರ್ ಗೆ 99.15 ರೂ. ಇದೆ.
ಡೀಸೆಲ್ ಬೆಲೆ ಮಂಗಳವಾರ ಏರಿಕೆ ಕಂಡಿದ್ದು, ಕಳೆದ ವಾರದಿಂದ ನಾಲ್ಕನೇ ಬಾರಿ ದರ ಹೆಚ್ಚಳವಾಗಿದೆ. ಇತ್ತೀಚಿನ ಪರಿಷ್ಕರಣೆಯೊಂದಿಗೆ, ಮಹಾರಾಷ್ಟ್ರದ ರಾಜಧಾನಿಯಲ್ಲಿ ಒಂದು ಲೀಟರ್ ಡೀಸೆಲ್ ಬೆಲೆ 97.21 ರೂ. ದೆಹಲಿಯಲ್ಲಿ 89.57 ರೂ., ಕೊಲ್ಕತ್ತಾದಲ್ಲಿ 92.67 ರೂ. ಮತ್ತು ಚೆನ್ನೈನಲ್ಲಿ ಪ್ರತಿ ಲೀಟರ್‌ಗೆ 94.17 ರೂ. ಇದೆ.
ಇದನ್ನೂ ಓದಿ : ಮುಂದಿನ ತಿಂಗಳಿಂದ ಬದಲಾಗಲಿವೆ ಈ ನಿಯಮ : ಚೆಕ್‌ಬುಕ್, ಪಿಂಚಣಿ, ಡೆಬಿಟ್ ಕಾರ್ಡ್ ನಿಯಮ ಅರಿತುಕೊಳ್ಳಿ
ಇದನ್ನೂ ಓದಿ : ಇಳಿಕೆಯಾಗಲಿದೆ ಅಡುಗೆ ಎಣ್ಣೆಯ ಬೆಲೆ : ಕೇಂದ್ರ ಮಾಡಿದೆ ಮಾಸ್ಟರ್ ಫ್ಲ್ಯಾನ್
( Petrol, diesel Prices Hike in India, Check revised Rate In Your City )