ಸೋಮವಾರ, ಏಪ್ರಿಲ್ 28, 2025
HomebusinessChitra Ramkrishna Explainer: ಭಾರತದ ಅತಿ ದೊಡ್ಡ ಷೇರು ವಿನಿಮಯ ಕೇಂದ್ರ, ಹಿಮಾಲಯದ ಯೋಗಿ ಮತ್ತು...

Chitra Ramkrishna Explainer: ಭಾರತದ ಅತಿ ದೊಡ್ಡ ಷೇರು ವಿನಿಮಯ ಕೇಂದ್ರ, ಹಿಮಾಲಯದ ಯೋಗಿ ಮತ್ತು ಚಿತ್ರಾ ರಾಮಕೃಷ್ಣ; ಎತ್ತಣಿಂದೆತ್ತ ಸಂಬಂಧ?

- Advertisement -

Himalayan Yogi: ಚಿತ್ರಾ ರಾಮಕೃಷ್ಣ ಎಂಬ ಹೆಸರು ಸದ್ಯ ಭಾರತದಲ್ಲಿ ಅತ್ಯಂತ ಹೆಚ್ಚು ಚರ್ಚೆ- ವಿವಾದಕ್ಕೆ ಈಡಾಗಿರುವ ಹೆಸರು. ಹಾಗಾದರೆ ಅವರು ಯಾರು ಎಂಬ ಕುತೂಹಲದಲ್ಲಿ ಎಲ್ಲರೂ ಇರುತ್ತಾರೆ. ಹಿಮಾಲಯದ ಯೋಗಿಯೊಬ್ಬರ ಜೊತೆ ಅತ್ಯಂತ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡ ಗಂಭೀರ ಆರೋಪ ಚಿತ್ರಾ ರಾಮಕೃಷ್ಣ (Chitra Ramkrishna) ಅವರ ಮೇಲಿದೆ. ಅಂದಹಾಗೆ ಚಿತ್ರಾ ರಾಮಕೃಷ್ಣ ಭಾರತದ ಅತಿ ದೊಡ್ಡ ಷೇರು ವಿನಿಮಯ ಕೇಂದ್ರ ಎನ್‌ಎಸ್‌ಇ (NSE) ಮಾಜಿ ಎಂಡಿ ಮತ್ತು ಸಿಇಒ. ಹಿಮಾಲಯದ ಯೋಗಿಯೊಬ್ಬರಿಗೆ (Himalayan Yogi) ಷೇರು ವಿನಿಮಯ ಕೇಂದ್ರ ಎನ್‌ಎಸ್‌ಇ ಸಂಸ್ಥೆಯ ಗೌಪ್ಯ ಮಾಹಿತಿ ಹಂಚಿಕೊಂಡಿದ್ದಾಗಿ ಆರೋಪ ಕೇಳಿಬಂದಿದೆ. ವ್ಯವಹಾರ ಯೋಜನೆಗಳು, ಡಿವಿಡೆಂಡ್ ಸಿನಾರಿಯೊ ಮತ್ತು ಹಣಕಾಸು ಫಲಿತಾಂಶಗಳಿಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಲು ಹಿಮಾಲಯದ ಯೋಗಿಯೊಬ್ಬರ ಮಾರ್ಗದರ್ಶನ ಪಡೆದಿದ್ದಾಗಿ ಅವರ ಮೇಲೆ ಆರೋಪ ಕೇಳಿಬಂದಿದೆ (Chitra Ramkrishna). ಅಲ್ಲದೇ, ಅವರ ವಿರುದ್ಧ (Former NSE MD And CEO Chitra Ramkrishna) ತೆರಿಗೆ ವಂಚನೆ ಆರೋಪದಡಿ ಆದಾಯ ತೆರಿಗೆ ಇಲಾಖೆ ದಾಳಿ ಸಹ ನಡೆಸಿದೆ.

ಚಾರ್ಟರ್ಡ್ ಅಕೌಂಟೆಂಟ್ ಆಗಿರುವ 59 ವರ್ಷದ ಚಿತ್ರಾ ರಾಮಕೃಷ್ಣ ಅವರು 1991 ರಲ್ಲಿ NSE ಪ್ರಾರಂಭವಾದಾಗಿನಿಂದ ಅಲ್ಲಿಯ ನಾಯಕತ್ವದ ಮಟ್ಟದಲ್ಲಿಗುರುತಿಸಿಕೊಂಡಿದ್ದರು. ಹರ್ಷದ್ ಮೆಹ್ತಾ ಹಗರಣದಿಂದ ಬಿಎಸ್‌ಇಗೆ ಹೊಡೆತ ಬಿದ್ದ ಸಮಯದಲ್ಲಿ ಸ್ವಚ್ಛ ಮತ್ತು ಪಾರದರ್ಶಕ ವ್ಯಾಪಾರವನ್ನು ನಡೆಸಲು ಭಾರತೀಯ ಷೇರು ವಿನಿಮಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಮಿತಿಯ ಸದಸ್ಯರಾಗಿರೂ ಅವರು ಕಾರ್ಯನಿರ್ವಹಿಸಿದ್ದರು.

ರಾಮಕೃಷ್ಣ ಮತ್ತು ಎನ್‌ಎಸ್‌ಇಯಲ್ಲಿ ಅವರ ಪೂರ್ವವರ್ತಿ ರವಿ ನಾರಾಯಣ್ ಅವರನ್ನು ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಐಡಿಬಿಐ) ಅದರ ಆಗಿನ ಅಧ್ಯಕ್ಷ ಎಸ್ ಎಸ್ ನಾಡಕರ್ಣಿ ಆಯ್ಕೆ ಮಾಡಿದರು, ಅವರು ನಂತರ ಸೆಬಿ ಅಧ್ಯಕ್ಷರಾದರು. ಪ್ರಾಸಂಗಿಕವಾಗಿ, 1985 ರಲ್ಲಿ ಐಡಿಬಿಐನ ಪ್ರಾಜೆಕ್ಟ್ ಫೈನಾನ್ಸ್ ವಿಭಾಗದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಚಿತ್ರಾ ರಾಮಕೃಷ್ಣ, ಎನ್‌ಎಸ್‌ಇಗೆ ಸೇರುವ ಮೊದಲು ಸ್ವಲ್ಪ ಸಮಯದವರೆಗೆ ಮಾರುಕಟ್ಟೆ ನಿಯಂತ್ರಕ ಸೆಬಿಯಲ್ಲಿ ಕೆಲಸ ಮಾಡಿದರು.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಎನ್‌ಎಸ್‌ಇಯ ಮೊದಲ ವ್ಯವಸ್ಥಾಪಕ ನಿರ್ದೇಶಕ ಆರ್‌ಎಚ್ ಪಾಟೀಲ್, ನರೇನ್ ಮತ್ತು ರಾಮಕೃಷ್ಣ ಅವರು ಎನ್‌ಎಸ್‌ಇ ಸ್ಥಾಪಿಸಿದ ಪ್ರಮುಖ ತಂಡದ ಭಾಗವಾಗಿದ್ದರು. ನರೇನ್ ಅವರ ಅಧಿಕಾರಾವಧಿಯು ಮುಗಿದ ನಂತರ ಚಿತ್ರಾ ರಾಮಕೃಷ್ಣ ಏಪ್ರಿಲ್ 1, 2013 ರಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ NSE ಮಂಡಳಿಯಿಂದ ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಹುದ್ದೆಗೆ ಆಯ್ಕೆಯಾಗಿದ್ದರು.

ಎನ್‌ಎಸ್‌ಇಯ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರ “ಆಧ್ಯಾತ್ಮಿಕ ಗುರು” ಚಿತ್ರಾ ರಾಮಕೃಷ್ಣ ಅವರ ಕೇಶವಿನ್ಯಾಸದಲ್ಲಿ ಆಸಕ್ತಿ ವಹಿಸಿದ್ದರಂತೆ, ಅವರೊಂದಿಗೆ ಹಾಡುಗಳನ್ನು ಹಂಚಿಕೊಂಡಿದ್ದರಂತೆ ಎಂದು ಕೆಲವು ಆಂಗ್ಲ ಸುದ್ದಿತಾಣಗಳು ವರದಿ ಮಾಡಿವೆ. ಆದರೆ ಈ ವರದಿಗಳನ್ನು ಅಲ್ಲಗಳೆದಿರುವ ಚಿತ್ರಾ ರಾಮಕೃಷ್ಣ, “ತಮ್ಮ ಆಧ್ಯಾತ್ಮಿಕ ಗುರು, “ಸಿದ್ಧ-ಪುರುಷ” ಅಥವಾ “ಪರಮಹಂಸ” ಅವರು ಭೌತಿಕ ವ್ಯಕ್ತಿತ್ವವನ್ನು ಹೊಂದಿಲ್ಲ ಎಂದು ಸೆಬಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚಿತ್ರಾ ರಾಮಕೃಷ್ಣ ಸೆಬಿಗೆ ತಿಳಿಸಿರುವಂತೆ ಅವರ ಆಧ್ಯಾತ್ಮಿಕ ಗುರು ಹಿಮಾಲಯ ಶ್ರೇಣಿಗಳಲ್ಲಿ ವಾಸಿಸುತ್ತಿದ್ದಾರೆ. ಒಂದೇ ಕಡೆ ವಾದ ನೆಲೆಯನ್ನು ಹೊಂದಿಲ್ಲ. 20 ವರ್ಷಗಳ ಕಾಲ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳ ಬಗ್ಗೆ ಚಿತ್ರಾ ರಾಮಕೃಷ್ಣ ಅವರಿಂದ ಮಾರ್ಗದರ್ಶನ ಪಡೆದುಕೊಂಡಿದ್ದಾರೆ.

ಸದ್ಯ ಚಿತ್ರಾ ರಾಮಕೃಷ್ಣ ಮತ್ತು ಅವರ ಹಿಮಾಲಯದ ಆಧ್ಯಾತ್ಮಿಕ ಗುರು ಸಂಚಲನ ಮೂಡಿಸಿರುವ ವಿಷಯ. ಈ ವಿದ್ಯಮಾನದ ಬೆಳವಣಿಗೆಗಳನ್ನು ತಿಳಿಯಲು ತಪ್ಪದೇ ನ್ಯೂಸ್‌ನೆಕ್ಸ್ಟ್‌ಲೈವ್ ಕನ್ನಡ ಓದುತ್ತಿರಿ, ಮರೆಯಬೇಡಿ.

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1

(Chitra Ramkrishna Profile IT Raid NSE MD Himalayan Yogi)

RELATED ARTICLES

Most Popular