LPG cylinder price :ಹೊಸ ವರ್ಷದ ಸಂಭ್ರಮದಲ್ಲಿರುವ ದೇಶದ ಜನತೆಗೆ ವರ್ಷದ ಮೊದಲ ದಿನವೇ ಬೆಲೆ ಇಳಿಕೆಯ ಗುಡ್ ನ್ಯೂಸ್ ಸಿಕ್ಕಿದೆ. 2021ರಲ್ಲಿ ದಿನನಿತ್ಯ ಬಳಕೆಯ ವಸ್ತುಗಳ ದರ ಏರಿಕೆಯಿಂದ ಕಂಗೆಟ್ಟಿದ್ದ ದೇಶದ ಜನತೆಗೆ ನ್ಯಾಷನಲ್ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ರಿಲೀಫ್ ನೀಡಿವೆ. ಇಂದಿನಿಂದ ಅನ್ವಯವಾಗುವಂತೆ 19 ಕೆಜಿ ತೂಕದ ಕಮರ್ಷಿಯಲ್ ಎಲ್ಪಿಸಿ ಸಿಲಿಂಡರ್ಗಳ ಬೆಲೆಯಲ್ಲಿ 102.50 ರೂಪಾಯಿ ಕಡಿತ ಮಾಡಲಾಗಿದೆ.
ಬೆಲೆ ಇಳಿಕೆಯ ಬಳಿಕ ದೆಹಲಿಯಲ್ಲಿ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳ ಬೆಲೆ 1998.50 ರೂಪಾಯಿ ಆಗಿದೆ. ಕಳೆದ ತಿಂಗಳು ಅಂದರೆ ಡಿಸೆಂಬರ್ 1ರಂದು 19 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ 100 ರೂಪಾಯಿ ಏರಿಕೆ ಮಾಡಲಾಗಿತ್ತು. ಇದಾದ ಬಳಿಕ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ಗಳ ಬೆಲೆ 2101 ರೂಪಾಯಿ ಆಗಿತ್ತು. ಇದೀಗ ಬೆಲೆ ಇಳಿಕೆ ಮಾಡಿರುವುದರಿಂದ ಜನಸಾಮನ್ಯರು ನಿರಾಳರಾಗಿದ್ದಾರೆ. ಅಲ್ಲದೇ ವಾಣಿಜ್ಯ ಸಿಲಿಂಡರ್ಗಳ ಬೆಲೆ ಇಳಿಕೆಯಿಂದ ಹೋಟೆಲ್, ರೆಸ್ಟಾರೆಂಟ್, ಟೀ ಸ್ಟಾಲ್ಗಳು ಬೀದಿ ಬದಿಯ ತಿಂಡಿ ತಿನಿಸು ಮಾರಾಟ ಅಂಗಡಿಗಳಿಗೆ ವರದಾನವಾದಂತಾಗಿದೆ.
ಇನ್ನು ಡಿಸೆಂಬರ್ಗೂ ಮುನ್ನ ಅಂದರೆ ನವೆಂಬರ್ 1ರಂದು 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ಗಳ ಬೆಲೆ 266 ರೂಪಾಯಿ ಏರಿಕೆ ಮಾಡುವ ಮೂಲಕ ಕಮರ್ಷಿಯಲ್ ಸಿಲಿಂಡರ್ಗಳ ಬೆಲೆ 2000.50 ರೂಪಾಯಿ ಮಾಡಲಾಗಿತ್ತು. ಆದರೆ ಇದೀಗ 1998 ರೂಪಾಯಿಗಳಿಗೆ ನಿಮಗೆ ಸಿಲಿಂಡರ್ ಸಿಗಲಿದೆ. ಆದರೆ 14.2 ಕೆಜಿ, 10 ಕೆಜಿ ಹಾಗೂ 5 ಕೆಜಿ ಕಾಂಪೋಸಿಟ್ ಸಿಲಿಂಡರ್ಗಳು ಸೇರಿದಂತೆ ದೇಶಿ ಸಿಲಿಂಡರ್ಗಳ ಬೆಲೆಯಲ್ಲಿ ಸದ್ಯ ಯಾವುದೇ ಇಳಿಕೆ ಕಂಡು ಬಂದಿಲ್ಲ.
ಭಾರತದ ಎಲ್ಲಾ ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯಗಳಲ್ಲಿ ಪ್ರತಿ ತಿಂಗಳು ಎಲ್ಪಿಜಿ ಸಿಲಿಂಡರ್ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ. ಅದರಂತೆ ಇಂದು ಸಹ ಎಲ್ಪಿಜಿ ಸಿಲಿಂಡರ್ಗಳ ದರ ಪರಿಷ್ಕರಣೆಯಾಗಿದ್ದು ಜನತೆಗೆ ಜಾಕ್ಪಾಟ್ ಹೊಡೆದಿದೆ.
ಇದನ್ನು ಓದಿ : Gujarat High Court : ದಂಪತಿ ನಡುವಿನ ಲೈಂಗಿಕ ಸಂಬಂಧದ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು
LPG cylinder price slashed by Rs 102.50 | Check revised rate