new COVID cases : ದೇಶದಲ್ಲಿ ಮತ್ತೆ 22,500 ಕೋವಿಡ್​ ಹೊಸ ಪ್ರಕರಣ ವರದಿ

new COVID cases :ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 22, 775 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 406 ಮಂದಿ ಕೋವಿಡ್​ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 3,42,75,312 ಆಗಿದೆ. ಅಲ್ಲದೇ ಕಳೆದ 24 ಗಂಟೆಗಳಲ್ಲಿ 8949 ಮಂದಿ ಕೋವಿಡ್​ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ರಿಕವರಿ ರೇಟ್​ 98.32 ಪ್ರತಿಶತವಾಗಿದ್ದು 2020ರ ಮಾರ್ಚ್​ ಬಳಿಕ ಇದೇ ಅತ್ಯಧಿಕ ರಿಕವರಿ ರೇಟ್​ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.


ಇತ್ತ ಓಮಿಕ್ರಾನ್​ ರೂಪಾಂತರಿಯ ಪ್ರಕರಣದಲ್ಲಿಯೂ ಏರಿಕೆ ಕಂಡುಬಂದಿದೆ. ದೇಶದಲ್ಲಿ ಒಟ್ಟು 1431 ಓಮಿಕ್ರಾನ್​ ಪ್ರಕರಣಗಳು ವರದಿಯಾದಂತಾಗಿದೆ. ಓಮಿಕ್ರಾನ್​ ರೂಪಾಂತರಿಯು ದೇಶದ 23 ರಾಜ್ಯಗಳಿಗೆ ವ್ಯಾಪಿಸಿದ್ದು ಇದರಲ್ಲಿ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 454 ಪ್ರಕರಣ ಹಾಗೂ ದೆಹಲಿಯಲ್ಲಿ 351 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿವೆ.


ಇನ್ನು ದೇಶದಲ್ಲಿ ಪ್ರಸ್ತುತ 1,04,781 ಸಕ್ರಿಯ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ರಾಷ್ಟ್ರೀಯ ಲಸಿಕಾ ಅಭಿಯಾನದ ಅಡಿಯಲ್ಲಿ 145.16 ಕೋಟಿ ಲಸಿಕೆಯ ಡೋಸ್​ಗಳನ್ನು ನೀಡಲಾಗಿದೆ.
ದೇಶದಲ್ಲಿ ಒಟ್ಟು 4,81,486 ಮಂದಿ ಕೊರೊನಾದಿಂದಾಗಿ ಸಾವಿಗೀಡಾದಂತಾಗಿದೆ. ಡಿಸೆಂಬರ್​ 31ರವರೆಗೆ 67,89,89,110 ಸ್ಯಾಂಪಲ್​ಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಐಸಿಎಂಆರ್​ ಹೇಳಿದೆ. ಇದರಲ್ಲಿ ಒಂದು ದಿನದಲ್ಲಿ 11,10,855 ಸ್ಯಾಂಪಲ್​​ಗಳನ್ನು ಪರೀಕ್ಷೆ ಮಾಡಲಾಗಿದೆ.


ಈ ನಡುವೆ ಕೇರಳದಲ್ಲಿ ಅತೀ ಹೆಚ್ಚು ಅಂದರೆ 2676 ಕೋವಿಡ್ ಪ್ರಕರಣಗಳು ಶುಕ್ರವಾರ ವರದಿಯಾಗಿದೆ. ಹಾಗೂ ಕೇರಳವೊಂದೇ ಕಳೆದ 24 ಗಂಟೆಗಳಲ್ಲಿ 353 ಕೋವಿಡ್​ ಸಾವುಗಳನ್ನು ವರದಿ ಮಾಡಿದೆ.

Over 22,500 new COVID cases, 406 fatalities in last 24 hours; active cases rise to 1 lakh

ಇದನ್ನು ಓದಿ : Maharashtra Lockdown : ಓಮಿಕ್ರಾನ್‌ ಆರ್ಭಟ ಮುಂಬೈನಲ್ಲಿ15 ದಿನ ಕಠಿಣ ನಿರ್ಬಂಧ, ಸಂಜೆ 5 ರಿಂದ ಬೆಳಿಗ್ಗೆ 5 ರವರೆಗೆ ಎಲ್ಲವೂ ಬಂದ್‌

ಇದನ್ನೂ ಓದಿ : Gujarat High Court : ದಂಪತಿ ನಡುವಿನ ಲೈಂಗಿಕ ಸಂಬಂಧದ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು​

Comments are closed.