ನವದೆಹಲಿ : ಹೊಸವರ್ಷದ ಆಚರಣೆಯಲ್ಲಿ ಇರುವ ದೇಶದ ಜನತೆಗೆ ಬ್ಯಾಡ್ ನ್ಯೂಸ್ ಕಾದಿದೆ. ತೈಲ ಮಾರುಕಟ್ಟೆ ಕಂಪನಿಗಳು (OMC) ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯನ್ನು ಹೆಚ್ಚಿಸುವ ಮೂಲಕ 2023 ರ ಹೊಸ ವರ್ಷದ ಮೊದಲ ದಿನದಂದು ಗ್ರಾಹಕರಿಗೆ (Commercial LPG Gas Price Hike) ದೊಡ್ಡ ಶಾಕ್ ನೀಡಿದೆ. ಹೊಸ ವರ್ಷದ ಹೊಸ ಹುರುಪಿನಲ್ಲಿ ಇರುವ ಜನರು ನಿಮ್ಮ ನಗರದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳಕೊಂಡಿರುವ ದರಗಳನ್ನು ಪರಿಶೀಲಿಸಬೇಕಾಗಿದೆ. ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 25 ರೂ.ವರೆಗೆ ಹೆಚ್ಚಿಸಿದ್ದಾರೆ.
ಆದರೂ, ಗೃಹಬಳಕೆಯ ಸಿಲಿಂಡರ್‌ಗಳ ದರಗಳಲ್ಲಿ ಯಾವ ಬದಲಾವಣೆಗಳು ಆಗಿರುವುದಿಲ್ಲ. ಹಾಗಾಗಿ ಎಲ್‌ಪಿಜಿ ಗೃಹ ಬಳಕೆಯ ಸಿಲಿಂಡರ್‌ಗಳು ತಮ್ಮ ಪ್ರಸ್ತುತ ಬೆಲೆಗೆ ಮಾರಾಟ ಮಾಡುತ್ತಿದೆ. ತೈಲ ಮಾರುಕಟ್ಟೆ ಕಂಪನಿಗಳು (OMC)ಗಳು ಜನವರಿ 1, 2023 ರಿಂದ ವಾಣಿಜ್ಯ ಸಿಲಿಂಡರ್ ದರಗಳನ್ನು 25 ರೂ.ವರೆಗೆ ಹೆಚ್ಚಿಸುವ ಮೂಲಕ ಅವುಗಳ ಬೆಲೆಯಲ್ಲಿ ಬದಲಾವಣೆಯನ್ನು ಹೊಂದಿದೆ. ಇದ್ದರಿಂದಾಗಿ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಇತ್ಯಾದಿಗಳಲ್ಲಿ ಊಟ ಹಾಗೂ ತಿನಿಸುಗಳ ಬೆಲೆ ದುಬಾರಿಯಾಗಲಿದೆ.
ತೈಲ ಮಾರುಕಟ್ಟೆ ಕಂಪನಿಗಳು (OMC)ಗಳು ಕಳೆದ ಬಾರಿ ಜುಲೈ 6 2022 ರಲ್ಲಿ ದೇಶೀಯ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಇದನ್ನು ಸಂಚಿತವಾಗಿ ರೂ 153.5 ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ನಾಲ್ಕು ಬಾರಿ ಬೆಲೆ ಏರಿಕೆ ಆಗಿರುತ್ತದೆ. ತೈಲ ಮಾರುಕಟ್ಟೆ ಕಂಪನಿಗಳು (OMC)ಗಳು ಮೊದಲು ಮಾರ್ಚ್ 2022 ರಲ್ಲಿ ರೂ 50 ಅನ್ನು ಹೆಚ್ಚಿಸಿದ್ದು, ನಂತರ ಅದು ಮತ್ತೆ ರೂ 50 ಮತ್ತು ರೂ 3.50 ಅನ್ನು ಮೇ ತಿಂಗಳಲ್ಲಿ ಹೆಚ್ಚಿಸಿದೆ. ಅಂತಿಮವಾಗಿ, ಕಳೆದ ವರ್ಷ ಜುಲೈನಲ್ಲಿ ದೇಶೀಯ ಸಿಲಿಂಡರ್ ಬೆಲೆಯನ್ನು 50 ರೂ. ಏರಿಕೆ ಮಾಡಿದೆ.
ಆದರೂ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಬದಲಾಗದೆ ಇರುವುದರಿಂದ ಇದು ಸಾಮಾನ್ಯರ ಬಜೆಟ್‌ನ ಮೇಲೆ ಪರಿಣಾಮ ಬೀರುವುದಿಲ್ಲ. ಇದು ಹೆಚ್ಚಾಗಿ ದೊಡ್ಡ ವಾಣಿಜ್ಯ ನಗರಗಳಲ್ಲಿ ಏರಿಕೆ ಕಂಡಿರುತ್ತದೆ. ದೊಡ್ಡ ನಗರಗಳಲ್ಲಿ ಇತ್ತೀಚಿನ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಹಾಗೂ ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗಳ ದರಗಳನ್ನು ಈ ಕೆಳಗೆ ತಿಳಿಸಲಾಗಿದೆ.
ನಾಲ್ಕು ಮಹಾನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್ ದರ :
- ದೆಹಲಿ – ರೂ. 1768
- ಮುಂಬೈ – ರೂ. 1721
- ಕೋಲ್ಕತ್ತಾ – ರೂ. 1870
- ಚೆನ್ನೈ – ರೂ. 1917
ಇದನ್ನೂ ಓದಿ : ಮನೆ ಬಾಡಿಗೆ ಮೇಲೆ ಜಿಎಸ್‌ಟಿ ಇಲ್ಲ : ಇಂದಿನಿಂದ ಹೊಸ ರೂಲ್ಸ್
ಇದನ್ನೂ ಓದಿ : Bank Holidays January 2023 : ಗ್ರಾಹಕರೇ ಗಮನಿಸಿ : ಜನವರಿ ತಿಂಗಳಲ್ಲಿ 15 ದಿನ ಬ್ಯಾಂಕ್ ರಜೆ
ಇದನ್ನೂ ಓದಿ : Aadhaar Card Update : ಆಧಾರ್ ಸುರಕ್ಷಿತೆಗಾಗಿ ಬಯೋಮೆಟ್ರಿಕ್ ಲಾಕಿಂಗ್ ಸಲಹೆ ನೀಡಿದ ಯುಐಡಿಎಐ
ನಾಲ್ಕು ಮಹಾನಗರಗಳಲ್ಲಿ ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ದರ :
- ದೆಹಲಿ – 1053 ರೂ.
- ಮುಂಬೈ – 1052.5 ರೂ.
- ಕೋಲ್ಕತ್ತಾ – 1079 ರೂ.
- ಚೆನ್ನೈ – 1068.5 ರೂ.
Commercial LPG Gas Price Hike : Bad news for consumers on New Year: LPG gas cylinder price hike