Haryana earthquake: ಹರಿಯಾಣದಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆ ದಾಖಲು

ದೆಹಲಿ: (Haryana earthquake) ಹೊಸ ವರ್ಷದ ಮೊದಲ ದಿನವೇ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದೆ. ಬೆಳಿಗ್ಗೆ 1.19 ರ ಸುಮಾರಿಗೆ ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 3.8 ರ ತೀವ್ರತೆಯ ಭೂಕಂಪವು ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಸದ್ಯ ಭೂಕಂಪನದಲ್ಲಿ ಯಾವುದೇ ಹಾನಿಗಳು ಸಂಭವಿಸಿಲ್ಲ.

ಭಾನುವಾರ ಬೆಳಿಗ್ಗೆ 1.19 ರ ಸುಮಾರಿಗೆ ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 3.8 ರ ತೀವ್ರತೆಯ ಭೂಕಂಪವು (Haryana earthquake) ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಹರಿಯಾಣದ ಜಜ್ಜರ್ನಲ್ಲಿದ್ದು, ನೆಲದಿಂದ 5 ಕಿ.ಮೀ ಆಳದಲ್ಲಿ ಸಂಭವಿಸಿದೆ ” ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಹೇಳಿಕೆಯಲ್ಲಿ ತಿಳಿಸಿದೆ. ಸದ್ಯ ಯಾವುದೇ ಪ್ರಾಣಹಾನಿಯಾಗಲೀ ಸಂಭವಿಸಿಲ್ಲ ಎಂಧು ವರದಿಯಾಗಿವೆ.

2023 ನ್ನು ಸ್ವಾಗತಿಸುತ್ತಿದ್ದಂತೆ ದೆಹಲಿಯ ಜನರು ಭೂಕಂಪದ (Haryana earthquake) ಕುರಿತು ಟ್ವೀಟ್ ಮಾಡುವುದರೊಂದಿಗೆ ದೆಹಲಿ ಜನತೆಯ ಅಭಿಪ್ರಾಯವನ್ನು ಕೇಳಿದ್ದಾರೆ. ಅಲ್ಲದೇ ದೆಹಲಿಯ ಭೂಕಂಪನಕ್ಕೆ ಸಂಬಂಧಿಸಿದಂತೆ ಟ್ವಿಟರ್‌ ನಲ್ಲಿ ತಮಾಷೆಯ ಮೇಮ್‌ ಗಳು ಹರಡಿದೆ. ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನ ಸಂಭವಿಸಿದ್ದು, ಅತೀ ಶೀಘ್ರದಲ್ಲೇ ಅದು ಮೇಮ್‌ ಗಳಾಗಿ ಪರಿವರ್ತನೆಯನ್ನು ಹೊಂದಿವೆ.

https://twitter.com/sukoon1111/status/1609285279239790592?ref_src=twsrc%5Etfw%7Ctwcamp%5Etweetembed%7Ctwterm%5E1609285279239790592%7Ctwgr%5E93c6df6834db0ef2921f9efc23bb9d5b94b1cd7f%7Ctwcon%5Es1_&ref_url=https%3A%2F%2Fwww.indiatoday.in%2F

ಇದಕ್ಕೂ ಮೊದಲು ನವೆಂಬರ್ 12 ರಂದು ದೆಹಲಿ ಎನ್‌ಸಿಆರ್‌ನಾದ್ಯಂತ ಭೂಕಂಪನದ (Haryana earthquake) ಅನುಭವವಾಗಿತ್ತು. ನ್ಯಾಷನಲ್ ಸೆಂಟರ್ ಫಾರ್ ಸೆಸ್ಮಾಲಜಿ (NCS) ಪ್ರಕಾರ, ನವೆಂಬರ್ 12 ರ ಭೂಕಂಪದ 5.4 ತೀವ್ರತೆಯು ನೇಪಾಳದಲ್ಲಿ ಸುಮಾರು 7:57 ಗಂಟೆಗೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಇದು ಭೂಮಿಯಿಂದ 10 ಕಿ.ಮೀ ಆಳದಲ್ಲಿ ಸಂಭವಿಸಿತ್ತು.

ಇದನ್ನೂ ಓದಿ : ಹೊಸ ವರ್ಷದಂದು ಗ್ರಾಹಕರಿಗೆ ಬ್ಯಾಡ್‌ ನ್ಯೂಸ್ : ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ

ಇದನ್ನೂ ಓದಿ : Dehli fire accident: ಖಾಸಗಿ ನರ್ಸಿಂಗ್‌ ಹೋಮ್‌ ನಲ್ಲಿ ಅಗ್ನಿ ಅವಘಡದಲ್ಲಿ ಇಬ್ಬರು ಸಾವು

ಇದನ್ನೂ ಓದಿ : Calendar 2023: ಈ ವರ್ಷ ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳ ದಿನಗಳ ಪಟ್ಟಿ ಇಲ್ಲಿದೆ

ಇದನ್ನೂ ಓದಿ : Bank Holidays January 2023 : ಗ್ರಾಹಕರೇ ಗಮನಿಸಿ : ಜನವರಿ ತಿಂಗಳಲ್ಲಿ 15 ದಿನ ಬ್ಯಾಂಕ್‌ ರಜೆ

(Haryana earthquake) A magnitude 3.8 earthquake was recorded in and around the national capital around 1.19 am, the National Center for Seismology said.

Comments are closed.