LPG Gas Rate Reduced : ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆಯಲ್ಲಿ 115 ರೂ. ಇಳಿಕೆ

ನವದೆಹಲಿ :LPG Gas Rate Reduced : ಕಳೆದ ಹಲವು ತಿಂಗಳುಗಳಿಂದಲೂ ಏರಿಕೆಯನ್ನು ಕಾಣುತ್ತಲೇ ಸಾಗಿದ್ದ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಇದೀಗ ಕೊಂಚ ಇಳಿಕೆಯಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 115 ರೂ.ಗಳಷ್ಟು ಅಗ್ಗವಾಗಿದೆ. ಹೀಗಾಗಿ 19 ಕೆಜಿಯ ಇಂಡೇನ್ ಎಲ್‌ಪಿಜಿ ಸಿಲಿಂಡರ್‌ನ ಹೊಸ ಬೆಲೆ ಈಗ 1744 ರೂ. ಇಳಿಕೆಯಾಗಿದೆ. ಆದರೆ ದೇಶೀಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಹೊಸ ದರ ನವೆಂಬರ್‌ 1 ರಿಂದಲೇ ಜಾರಿಗೆ ಬರಲಿದೆ. 19 ಕೆಜಿಯ ಇಂಡೇನ್ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈ ಹಿಂದೆ 1859.5 ರೂ. ನಷ್ಟಿದ್ದು, ಇದೀಗ 1744 ರೂ. ಗೆ ಇಳಿಕೆಯಾಗಿದೆ. ಇನ್ನು ದೇಶದ ಪ್ರಮುಖ ನಗರಗಳಾದ ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1995.50 ರೂ.ನಷ್ಟಿದ್ದು, ಇದೀಗ 1846 ರೂ. ಗೆ ಇಳಿಕೆಯಾಗಿದೆ. ಮುಂಬೈನಲ್ಲಿ ಈ ಹಿಂದೆ 1844 ರೂ. ಇದ್ದು, ಇದೀಗ 1696 ರೂ. ಇಳಿಕೆಯಾಗಲಿದೆ. ಇನ್ನು ಚೆನ್ನೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗೆ 2009.50 ರೂ. ಪಾವತಿಸಬೇಕಾಗಿತ್ತು. ಆದ್ರೀಗ ಬೆಲೆ ಇಳಿಕೆಯಿಂದಾಗಿ 1893 ರೂ. ಗಳಿಗೆ ಇಳಿಕೆಯಾಗಲಿದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆಯಾಗಿದ್ದರೂ ಕೂಡ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಜುಲೈ 6 ರಿಂದ ಯಾವುದೇ ಬದಲಾವಣೆಯಾಗಿಲ್ಲ.

14.2 ಕೆಜಿ ಸಿಲಿಂಡರ್ ಬೆಲೆ ಎಷ್ಟು ?
ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಗಮನಿಸುವುದಾದ್ರೆ, ದೆಹಲಿಯಲ್ಲಿ 1053 ರೂ., ಕೋಲ್ಕತ್ತಾದಲ್ಲಿ 1079, ಚೆನ್ನೈನಲ್ಲಿ 1068.5 ಮತ್ತು ಮುಂಬೈನಲ್ಲಿ 1052 ರೂ.ಗೆ ಲಭ್ಯವಿದೆ. ಭಾರತದ ಗ್ಯಾಸ್ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸುತ್ತವೆ. ವಾಣಿಜ್ಯ ಸಿಲಿಂಡರ್‌ಗಳನ್ನು ಹೋಟೆಲ್‌ಗಳು, ಆಹಾರ ಅಂಗಡಿಗಳಲ್ಲಿ ಬಳಸಲಾಗುತ್ತದೆ. ಸತತ ಆರನೇ ತಿಂಗಳು ವಾಣಿಜ್ಯ ಅನಿಲದ ಬೆಲೆ ಇಳಿಕೆಯಾಗಿದೆ. ಅಕ್ಟೋಬರ್ 1 ರಂದು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 25.5 ರೂ ಕಡಿತಗೊಳಿಸಲಾಗಿತ್ತು.

ಅಕ್ಟೋಬರ್ 2022 ರ ಮೊದಲಾರ್ಧದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡಾ 22-26 ರಷ್ಟು ಏರಿಕೆಯಾಗಿದೆ. ಅಕ್ಟೋಬರ್ 1 ರಿಂದ 15, 2022 ರ ಅವಧಿಯಲ್ಲಿ ಪೆಟ್ರೋಲ್ ಮಾರಾಟದಲ್ಲಿಯೂ ಶೇಕಡಾ 22.7 ರಿಂದ 1.28 ಮಿಲಿಯನ್ ಟನ್‌ಗಳಿಗೆ ಏರಿಕೆ ಕಂಡಿದೆ.. ಅದೇ ಅವಧಿಯಲ್ಲಿ, 2021 ರಲ್ಲಿ 1.05 ಮಿಲಿಯನ್ ಟನ್‌ಗಳನ್ನು ಬಳಕೆ ಮಾಡಲಾಗಿದೆ.

ಇದನ್ನೂ ಓದಿ : LPG Subsidy : ಎಲ್‌ಪಿಜಿ ಸಬ್ಸಿಡಿ, ಹೊಸ ನಿಯಮ ಪ್ರಕಟಿಸಿದ ಸರಕಾರ

ಇದನ್ನೂ ಓದಿ : LPG cylinders ration shops : ಗುಡ್ ನ್ಯೂಸ್‌ : ಪಡಿತರ ಅಂಗಡಿಯಲ್ಲೇ ಸಿಗುತ್ತೆ LPG ಸಿಲಿಂಡರ್‌

Commercial LPG Gas Rate Reduced By Rs 115

Comments are closed.