Delhi Crime News : 5-ಸ್ಟಾರ್ ಹೋಟೆಲ್‌ನಲ್ಲಿ 2 ವರ್ಷ ತಂಗಿದ್ದ ವ್ಯಕ್ತಿ 58 ಲಕ್ಷರೂ. ಬಿಲ್ ಪಾವತಿಸದೆ ಎಸ್ಕೇಪ್

ನವದೆಹಲಿ: (Delhi Crime News) ಪಂಚತಾರಾ ಹೋಟೆಲ್‌ನಲ್ಲಿ ಅತಿಥಿಯೋರ್ವರು ಸುಮಾರು ಎರಡು ವರ್ಷಗಳ ಕಾಲ ವಾಸ್ತವ್ಯ ಹೂಡಿದಿದ್ದರು. ಹೋಟೆಲ್‌ಗೆ ಎರಡು ವರ್ಷದ ಒಟ್ಟು 58 ಲಕ್ಷ ರೂಪಾಯಿ ಹಣವನ್ನು ಪಾವತಿ ಮಾಡಬೇಕಾಗಿತ್ತು. ಆದ್ರೆ ಇದಕ್ಕಿದ್ದಂತೆಯೇ ವ್ಯಕ್ತಿ ಲಕ್ಷಾಂತರ ರೂಪಾಯಿ ಹಣ ಪಾವತಿಸದೇ ಎಸ್ಕೇಪ್‌ ಆಗಿದ್ದಾನೆ.

ಅಂಕುಶ್ ದತ್ತಾ ಎಂಬತಾನೇ ಹೋಟೆಲ್‌ಗೆ ವಂಚಿಸಿದಾತ. ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಬಳಿಯಲ್ಲಿರುವ ಏರೋಸಿಟಿಯಲ್ಲಿ ರೋಸೆಟ್ ಹೌಸ್ ಹೋಟೆಲ್‌ನಲ್ಲಿ ಲೆಕ್ಕಪತ್ರ ತಪಾಸಣೆಯ ವೇಳೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಎಫ್‌ಐಆರ್‌ನಲ್ಲಿ ಹೋಟೆಲ್‌ನ ಫ್ರಂಟ್ ಆಫೀಸ್ ವಿಭಾಗದ ಮುಖ್ಯಸ್ಥ ಪ್ರೇಮ್ ಪ್ರಕಾಶ್ ಅವರ ವಿರುದ್ದ ಆರೋಪ ಕೇಳಿಬಂದಿದೆ.

ಹೋಟೆಲ್‌ ನಲ್ಲಿ ಅತಿಥಿಯಾಗಿ ಅಂಕುಶ್‌ ದತ್ತಾ ಸುಮಾರು 603 ದಿನಗಳ ಕಾಲ ತಂಗಿದ್ದರು ಆದರೆ ಒಂದು ಪೈಸೆಯನ್ನೂ ಪಾವತಿಸದೆ ಚೆಕ್ ಔಟ್ ಮಾಡಿದ್ದಾರೆ. ಹೋಟೆಲ್‌ ಸಿಬ್ಬಂದಿಪ್ರೇಮ್‌ ಪ್ರಕಾಶ್‌ ಎಂಬವರು ಆಂತರಿಕ ಸಾಫ್ಟ್‌ವೇರ್‌ ಸಿಸ್ಟಮ್‌ ಅನ್ನು ತಮ್ಮ ಕುಶಲತೆಯಿಂದ ಡೇಟಾಗಳನ್ನು ತಪ್ಪಾಗಿ ನಮೋದಿಸಿದ್ದಾರೆ. ಅಲ್ಲದೇ ಅಂಕುಶ್‌ ದತ್ತಾ ಅವರಿಂದ ಹಣವನ್ನು ಹೋಟೆಲ್‌ ಸಿಬ್ಬಂದಿಗಳು ಪಡೆದುಕೊಂಡಿರಬಹುದು ಹೋಟೆಲ್‌ ಆಡಳಿತ ಮಂಡಳಿಯ ವಿನೋದ್ ಮಲ್ಹೋತ್ರಾ ಹೇಳಿದ್ದಾರೆ

ಅತಿಥಿ ಅಂಕುಶ್ ದತ್ತಾ ಅವರು ಪ್ರೇಮ್ ಪ್ರಕಾಶ್ ಸೇರಿದಂತೆ ಕೆಲವು ತಿಳಿದಿರುವ ಮತ್ತು ಅಪರಿಚಿತ ಹೋಟೆಲ್ ಸಿಬ್ಬಂದಿಯೊಂದಿಗೆ ಸೇರಿ ಕ್ರಿಮಿನಲ್ ಪಿತೂರಿಯನ್ನು ರೂಪಿಸಿದ್ದಾರೆ. ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದಲೇ ದುಷ್ಕೃತ್ಯವೆಸಗಿದ್ದಾರ ಎಂದು ಎಫ್‌ಐಆರ್‌ನಲ್ಲಿ ನಮೋದಿಸಲಾಗಿದೆ. ಅಂಕುಶ್‌ ದತ್ತಾ ಅವರು ಮೇ 30, 2019 ರಂದು ಚೆಕ್ ಇನ್ ಮಾಡಿ ಒಂದು ರಾತ್ರಿ ಕೊಠಡಿಯನ್ನು ಕಾಯ್ದಿರಿಸಿದ್ದಾರೆ. ಅವರು ಮೇ 31 ರಂದು ಮರುದಿನ ಚೆಕ್ ಔಟ್ ಮಾಡಬೇಕಿತ್ತು ಆದರೆ ಅವರು ತಮ್ಮ ವಾಸ್ತವ್ಯವನ್ನು ಜನವರಿ 22, 2021 ರವರೆಗೆ ವಿಸ್ತರಿಸುತ್ತಲೇ ಇದ್ದರು.

ಸಾಮಾನ್ಯವಾಗಿ ಹೋಟೆಲ್ ಗಳ ನಿಯಮದ ಪ್ರಕಾರ, ಅತಿಥಿಯು ವಾಸ್ತವ್ಯ ಹೂಡಿ ಬಾಕಿ ಇರುವ ಬಾಕಿಯು 72 ಗಂಟೆಗಳನ್ನು ಮೀರಿದರೆ, ಅವರ ಮಾಹಿತಿಗಾಗಿ ಮತ್ತು ಸೂಚನೆಗಾಗಿ ಸಿಇಒ ಮತ್ತು ಹಣಕಾಸು ನಿಯಂತ್ರಕರ ಗಮನಕ್ಕೆ ತರಬೇಕು. ಆದರೆ ಪ್ರೇಮ್‌ ಪ್ರಕಾಶ್ ಅವರು ಹೋಟೆಲ್‌ನ ಸಿಇಒ ಮತ್ತು ಎಫ್‌ಸಿಗೆ ದತ್ತಾ ಅವರ ಬಾಕಿಯನ್ನು ಕಳುಹಿಸಲಿಲ್ಲ. ಎಫ್‌ಐಆರ್ ಪ್ರಕಾರ, ಪ್ರಕಾಶ್ ಅವರು ಮೇ 30, 2019 ರಿಂದ ಅಕ್ಟೋಬರ್ 25, 2019 ರವರೆಗೆ ಯಾವುದೇ ಬಾಕಿ ಪಾವತಿ ವರದಿಯನ್ನು ಮಾಡಿಲ್ಲ. ಅವರು ಅಕ್ಟೋಬರ್ 25 ರ ನಂತರ ಬಾಕಿ ಪಾವತಿ ವರದಿಯನ್ನು ರಚಿಸಿದಾಗಲೂ, ಇತರ ಸಂಬಂಧವಿಲ್ಲದ ಅತಿಥಿಗಳ ಬಾಕಿಯಿರುವ ಬಿಲ್‌ಗಳನ್ನು ಒಂದಾಗಿ ಸೇರಿಸಿ ಅದನ್ನು ನಕಲಿ ಮಾಡಿದ್ದಾರೆ. ದತ್ತಾ ಅವರ ಬಾಕಿ ಇರುವ ಬಾಕಿಗಳನ್ನು ಮರೆಮಾಚುವ ಉದ್ದೇಶದಿಂದಲೇ ಹೀಗೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ : TV actor Prajwal : ಬಾರ್‌ನಲ್ಲಿ ಕಿರಿಕ್‌ : ಅಮೃತವರ್ಷಿಣಿ ಧಾರಾವಾಹಿ ನಟನ ವಿರುದ್ದ ಎಫ್‌ಐಆರ್‌ ದಾಖಲು

ಇನ್ನು ಅಂಕುಶ್‌ ದತ್ತಾ 10 ಲಕ್ಷ, 7 ಲಕ್ಷ ಮತ್ತು 20 ಲಕ್ಷ ರೂ.ಗಳ ಮೂರು ಚೆಕ್‌ಗಳನ್ನು ಪಾವತಿ ಮಾಡಿದ್ದರು. ಆದರೆ ಮೂರು ಚೆಕ್‌ಗಳು ಕೂಡ ಬೌನ್ಸ್‌ ಆಗಿತ್ತು. ಈ ವಿಚಾರವನ್ನೂ ಕೂಡ ಪ್ರೇಮ್‌ ಪ್ರಕಾಶ್‌ ಹೋಟೆಲ್‌ ಆಡಳಿತ ಮಂಡಳಿಯ ಗಮನಕ್ಕೆ ತಂದಿರಲಿಲ್ಲ ಎಂದು ಹೋಟೆಲ್‌ ಆಡಳಿತ ಮಂಡಳಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Delhi Crime News : 58 lakhs for a person staying in a 5-star hotel for 2 years. Escape without paying the bill

Comments are closed.