ವಿಜಯಪುರ : ಪ್ರವಾಸೋದ್ಯಮ ಇಲಾಖೆ ವತಿಯಿಂದ (Department of Tourism) ಪ್ರವಾಸಿ ಟ್ಯಾಕ್ಸಿ ಖರೀದಿಗೆ ಸಹಾಯಧನ ಒದಗಿಸುವ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಪ್ರವಾಸಿ ಟ್ಯಾಕ್ಸಿ ಖರೀದಿಸಲು ತಗುಲುವ ಒಟ್ಟು ವೆಚ್ಚದಲ್ಲಿ ಗರಿಷ್ಠ ರೂ. 2ಲಕ್ಷಗಳ ಸಹಾಯಧನವನ್ನು ಸರಕಾರವೇ ನೀಡುತ್ತದೆ. ಶೇ. ೫ ರಷ್ಟೂ ಹಣವನ್ನು ಟ್ಯಾಕ್ಸಿ ಮಾಲೀಕ ಭರಿಸಬೇಕಿದೆ. ಹಾಗೆ ಉಳಿದ ಮೊತ್ತವನ್ನು ರಾಷ್ಟ್ರೀಕೃತ ವಾಣಿಜ್ಯ ಅಥವಾ ಸಹಕಾರಿ ಬ್ಯಾಂಕುಗಳ ಮೂಲಕ ಸಾಲವನ್ನು ಫಲಾನುಭವಿ ಪಡೆದುಕೊಳ್ಳಬುದಾಗಿದೆ. ವಿಜಯಪುರ ನಾಗರಿಕರೂ ಸಹ ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.
ಈ ಸಹಾಯಧನಕ್ಕಾಗಿ ಅಭ್ಯರ್ಥಿಗಳ ಆಯ್ಕೆಯನ್ನು ವಯಸ್ಸು, ಹಾಗೂ ಎಸ್.ಎಸ್. ಎಲ್.ಸಿ ಯಲ್ಲಿ ಪಡೆದ ಫಲಿತಾಂಶದ ಶೇಕಡವಾರು ಅಂಕವನ್ನು ಏರಿಕೆಯಿಂದ ಇಳಿಕ ಕ್ರಮದಲ್ಲಿ ಸಿದ್ಧಪಡಿಸಿದ ಗರಿಷ್ಠ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. 2013-14ನೇ ಸಾಲಿನಿಂದ 2017-18ನೇ ಸಾಲಿನಲ್ಲಿ ಹಿಂಬಾಕಿ ಉಳಿದ ಎಸ್.ಸಿ.ಪಿ – ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿಯ 12, ಪರಿಶಿಷ್ಟ ಪಂಗಡ 5, ಸಾಮಾನ್ಯ ಯೋಜನೆಯಡಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ 12 ಯುವಕ ಯುವತಿಯರಿಗೆ ಸಹಾಯಧನ ಒದಗಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ : Shabrimala Yatre : ಶಬರಿಮಲೆ ಯಾತ್ರಿಕರಿಗಾಗಿ ಕೊಟ್ಟಾಯಂ ರೈಲು ನಿಲ್ದಾಣದಲ್ಲಿ ಪ್ರಾರಂಭವಾದ ‘ಶಬರಿಮಲೆ ಯಾತ್ರಿಕ ಕೇಂದ್ರ’
ಇದನ್ನೂ ಓದಿ : Winter Tour : ಚಳಿಗಾಲದಲ್ಲಿ ಪ್ರವಾಸಕ್ಕೆ ಹೋಗಬೇಕಾ? ಈ ಸ್ಥಳಗಳಿಗೆ ಖಂಡಿತ ಭೇಟಿ ಕೊಡಿ
ಇದನ್ನೂ ಓದಿ : Char Dham Yatra : ಚಾರ್ ಧಾಮ್ ಯಾತ್ರೆಯ ಕೊನೆಯ ಹಂತ: ಚಳಿಗಾಲಕ್ಕೆ ಮುಚ್ಚುತ್ತಿರುವ ದೇಗುಲಗಳು
ಈ ಸಹಾಯಧನಕ್ಕಾಗಿ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಬ್ಲಾಕ್ – 1 ಪ್ರವಾಸಿ ಪ್ಲಾಜಾ, ಜಿಲ್ಲ ಕ್ರೀಡಾಂಗಣ ಎದುರುಗಡೆ ಇಂಡಿ ರಸ್ತೆ ವಿಜಯಪುರ ಕಛೇರಿಯಿಂದ ಪಡೆದುಕೊಳ್ಳಬಹುದಾಗಿದೆ. ಭರ್ತಿ ಮಾಡಿದ ಅರ್ಜಿ ನಮೂನೆ ಜೊತೆ ಅಗತ್ಯ ದಾಖಲೆಗಳೊಂದಿಗೆ ಈ ವಿಳಾಸದ ಕಛೇರಿಗೆ ಡಿಸೆಂಬರ್ 21ರ ಮೊದಲು ಅರ್ಜಿ ಸಲ್ಲಿಸಬೇಕಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ 08352-250359 ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Department of Tourism: 2 lakh subsidy from the government for the purchase of taxis: What to do to get the facility