Shraddha letter: ಕೊನೆಗೂ ಹೇಳಿದಂತೆ ಮಾಡಿಯೇ ಬಿಟ್ಟ ಅಫ್ತಾಬ್; 2 ವರ್ಷಗಳ ಹಿಂದೆಯೇ ಪತ್ರದಲ್ಲಿ ಅಫ್ತಾಬ್ ಕ್ರೂರತೆಯನ್ನು ಬಿಚ್ಚಿಟ್ಟಿದ್ದ ಶೃದ್ಧಾ

ಮುಂಬೈ; Shraddha letter: ತನ್ನ ಲಿವ್ ಇನ್ ಸಂಗಾತಿ ಅಫ್ತಾಬ್ ಎಂಬ ಕ್ರೂರಿಯಿಂದ 6 ತಿಂಗಳ ಹಿಂದೆ ಭಯಾನಕವಾಗಿ ಕೊಲೆಗೀಡಾಗಿದ್ದ ಶೃದ್ಧಾ ವಾಕರ್ ಪ್ರಕರಣದಲ್ಲಿ ಬಗೆದಷ್ಟು ಮಾಹಿತಿಗಳು ಲಭ್ಯವಾಗುತ್ತಿವೆ. ಸದ್ಯ 2020ರಲ್ಲಿ ಶೃದ್ಧಾ ಬರೆದ ಪತ್ರವೊಂದು ಪೊಲೀಸರಿಗೆ ಸಿಕ್ಕಿದ್ದು, ಆ ಪತ್ರದಲ್ಲಿ ಆಕೆ ಉಲ್ಲೇಖಿಸಿದ ಅಂಶಗಳು ಅಫ್ತಾಬ್ ನ ಮತ್ತಷ್ಟು ಕ್ರೂರತೆಯನ್ನು ಬಿಚ್ಚಿಡುತ್ತಿವೆ.

ಇದನ್ನೂ ಓದಿ: Rohit Sharma fitness: ಬೊಜ್ಜು ಕರಗಿಸಲು ಮುಂದಾದ್ರಾ ಹಿಟ್‌ಮ್ಯಾನ್..? ಜಿಮ್‌ನಲ್ಲಿ ರೋಹಿತ್ ಶರ್ಮಾ ಭರ್ಜರಿ ವರ್ಕೌಟ್

ಅಫ್ತಾಬ್ ನನ್ನನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಶೃದ್ಧಾ ವಾಕರ್ 2020ರಲ್ಲೇ ಪೊಲೀಸರಿಗೆ ದೂರು ನೀಡಿದ್ದ ಕುರಿತಾಗಿ ಮಾಹಿತಿ ಲಭ್ಯವಾಗಿದೆ. ಈ ಪತ್ರವನ್ನು ಶೃದ್ಧಾ ಅಫ್ತಾಬ್ ನಿಂದ ಹಲ್ಲೆಗೊಳಗಾದ ಸಂದರ್ಭದಲ್ಲಿ ಬರೆದಿದ್ದರು ಎನ್ನಲಾಗಿದೆ. 2020ರಲ್ಲಿ ಶೃದ್ಧಾ ಮಹಾರಾಷ್ಟ್ರದ ವಸೈನಲ್ಲಿ ಇದ್ದರು. ಆಗ ಆಕೆಯ ಮೇಲೆ ಅಫ್ತಾಬ್ ಹಲ್ಲೆ ನಡೆಸಿದ್ದ. ಅಂದು ಶೃದ್ಧಾಳ ಜೊತೆ ಪೊಲೀಸರಿಗೆ ದೂರು ನೀಡಲು ತುಲಿಂಜ್ ಠಾಣೆಗೆ ಹೋಗಿದ್ದ ಶೃದ್ಧಾಳ ನೆರೆಮನೆಯವರು ಇದೀಗ ಶೃದ್ಧಾ ಬರೆದ ಪತ್ರವನ್ನು ಮಹಾರಾಷ್ಟ್ರ ಪೊಲೀಸರಿಗೆ ನೀಡಿದ್ದಾರೆ. ಅದನ್ನು ಪರಿಶೀಲಸಿದ ಪೊಲೀಸರು 2020ರ ನ.23ರಂದು ಶೃದ್ಧಾಳೇ ಬರೆದ ಪತ್ರ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ.

ಶೃದ್ಧಾ ಬರೆದ ಪತ್ರದಲ್ಲಿ ಉಲ್ಲೇಖಗೊಂಡಿರುವ ಅಂಶಗಳೇನು..?
ಕಳೆದ 6 ತಿಂಗಳಿಂದಲೂ ಅಫ್ತಾಬ್ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದು, ಪೊಲೀಸರ ಬಳಿ ಹೋದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡುತ್ತಿದ್ದಾನೆ. ಹೀಗಾಗಿ ಠಾಣೆಗೆ ಹೋಗಿ ದೂರು ನೀಡಲು ಸಾಧ್ಯವಾಗಿಲ್ಲ. ಅಫ್ತಾಬ್ ಈಗ ಮಹಾರಾಷ್ಟ್ರದ ವಿಜಯ ವಿಹಾರ ಕಾಂಪ್ಲೆಕ್ಸ್ ನ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದಾನೆ. ನಿರಂತರವಾಗಿ ನನ್ನನ್ನು ನಿಂದಿಸುತ್ತ, ಹೊಡೆಯುತ್ತಿದ್ದಾನೆ. ಇಂದು (2020ರ ನ.23) ಕೂಡಾ ನನ್ನನ್ನು ಉಸಿರುಗಟ್ಟಿಸಲು ಪ್ರಯತ್ನಿಸಿದ. ಮಾತೆತ್ತಿದ್ದರೆ ಕೊಲ್ಲುತ್ತೇನೆ, ತುಂಡುತುಂಡಾಗಿ ಕತ್ತರಿಸುತ್ತೇನೆ ಎಂದು ಬೆದರಿಕೆಯೊಡ್ಡುತ್ತಾನೆ.

ಆತ ತನಗೆ ಥಳಿಸುತ್ತಾನೆ. ಕೊಲ್ಲಲೂ ಹಿಂಜರಿಯುವುದಿಲ್ಲ. ಈ ವಿಚಾರ ಅಫ್ತಾಬ್ ನ ಹೆತ್ತವರಿಗೂ ಗೊತ್ತಿದೆ. ನಾವಿಬ್ಬರೂ ಒಟ್ಟಿಗೆ ವಾಸ ಮಾಡುತ್ತಿರುವ ವಿಚಾರವೂ ಅವರಿಗೆ ತಿಳಿದಿದೆ. ವಾರಾಂತ್ಯದಲ್ಲಿ ನಾವಿದ್ದಲ್ಲಿಗೆ ಅವರು ಬಂದು ಹೋಗುತ್ತಿರುತ್ತಾರೆ. ಅಫ್ತಾಬ್ ಮತ್ತು ನಾನು ಮದುವೆ ಆಗುವವರೆಗೂ ಅವನೊಂದಿಗೆ ಇರಲು ನಾನು ನಿರ್ಧರಿಸಿದ್ದೆ. ಆದರೆ ಇನ್ನು ಮುಂದೆ ನಾನು ಆತನೊಂದಿಗೆ ಇರುವುದಿಲ್ಲ. ಈಗಾಗಲೇ ನನಗೆ ಆತ ಹಲವು ಬಾರಿ ಕೊಲೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಅವನಿಂದ ತನಗೆ ಏನೇ ಅಪಾಯ ಎದುರಾದರೂ ಈ ಪತ್ರವನ್ನೇ ದೂರು ಎಂದು ಪರಿಗಣಿಸಬೇಕು’ ಎಂದು 2 ವರ್ಷಗಳ ಹಿಂದೆ ಶೃದ್ಧಾ ಪತ್ರದಲ್ಲಿ ಬರೆದಿದ್ದಾರೆ.

ಸದ್ಯ ಈ ಪತ್ರದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಪೊಲೀಸರು ತುಲಿಂಜ್ ಠಾಣಾ ಪೊಲೀಸರು 2 ವರ್ಷಗಳ ಹಿಂದೆ ಅಫ್ತಾಬ್ ವಿರುದ್ಧ ಕ್ರಮ ಕೈಗೊಂಡಿದ್ದಾರಾ ಎಂಬುದನ್ನು ಪರಿಶೀಲಿಸುತ್ತಿದ್ದಾರೆ ಅಲ್ಲದೇ ಅಫ್ತಾಬ್ ಪೊಲೀಸರ ಹೇಳಿಕೆಗಳನ್ನೂ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Pandya on Samson : “ಇದು ನನ್ನ ತಂಡ, ನನ್ನ ನಿರ್ಧಾರ.. ಸ್ಯಾಮ್ಸನ್’ಗೆ ಸಿಗದ ಚಾನ್ಸ್, ಕ್ಯಾಪ್ಟನ್ ಪಾಂಡ್ಯ ಖಡಕ್ ಉತ್ತರ

Shraddha letter: Aftab finally did as he was told. 2 years ago Shraddha had revealed Aftab’s brutality in a letter

Comments are closed.