ಕೇರಳದಲ್ಲಿ 108, ಕರ್ನಾಟಕದಲ್ಲಿ 101 : ಗಡಿಭಾಗದಲ್ಲಿ ಪೆಟ್ರೋಲ್ ಗೆ ಮುಗಿಬಿದ್ದ ಕೇರಳದ ವಾಹನ ಸವಾರರು

ಮಂಗಳೂರು : ದಿನದಿಂದ ದಿನಕ್ಕೆ ಏರಿಕೆಯಾಗ್ತಿರೋ ಅಡುಗೆ ಅನಿಲ್, ಪೆಟ್ರೋಲ್, ಡಿಸೇಲ್ ಮಧ್ಯಮವರ್ಗದ (Diesel – Petrol Price in Karnataka) ಜನರ ನಿದ್ದೆಗೆಡಿಸಿವೆ. ಸದ್ಯ ಅಡಿಗೆ ಅನಿಲ ಸಾವಿರದ ಗಡಿ ದಾಟಿದ್ದರೇ‌, ಪೆಟ್ರೋಲ್ ಕೂಡ ನೂರರ ಗಡಿ ದಾಟಿ ಮುನ್ನುಗ್ಗುತ್ತಿದೆ. ಹೀಗಾಗಿ ವಾಹನ ಸವಾರರು ಒಂದು ರೂಪಾಯಿ ಕಡಿಮೆ‌ಗೆ ಪೆಟ್ರೋಲ್ , ಡಿಸೇಲ್ ಸಿಕ್ಕರೂ ಮುಗಿಬೀಳುವ ಸ್ಥಿತಿ ಇದ್ದು, ಕೇರಳ-ಕರ್ನಾಟಕ ಗಡಿಭಾಗ ಇಂತಹ ದೃಶ್ಯಕ್ಕೆ ಸಾಕ್ಷಿಯಾಗಿದೆ.

ಕರ್ನಾಟಕದಲ್ಲೂ ಪೆಟ್ರೋಲ್ ದರ ಲೀಟರ್ ಗೆ ನೂರರ ಗಡಿ ದಾಟಿದೆ. ಇದಕ್ಕೆ ಪ್ರತಿಸ್ಪರ್ಧಿ ಎಂಬಂತೆ ಪಕ್ಕದ ರಾಜ್ಯ ಕೇರಳದಲ್ಲೂ ಪೆಟ್ರೋಲ್ ಬೆಲೆ ಗಗನಕ್ಕೆ ಏರಿದೆ. ಹೀಗಾಗಿ ಕೇರಳಿಗರು ಪೆಟ್ರೋಲ್‌ನಲ್ಲಿ ಪುಡಿಗಾಸು ಉಳಿಸಲು ಕರ್ನಾಟಕದ ಗಡಿ ಭಾಗದ ಪೆಟ್ರೋಲ್ ಬಂಕ್ ಗಳಿಗೆ ಮುಗಿಬೀಳುತ್ತಿದ್ದಾರೆ. ಕರ್ನಾಟಕಕ್ಕಿಂದ ಒಂದು ಹೆಜ್ಜೆ ಮುಂದೇ ಹೋಗಿರುವ ಕೇರಳ ಸರ್ಕಾರ, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಮತ್ತೆ ಎರಡು ರೂಪಾಯಿ ಸೆಸ್ ಹೇರಿ ಆದೇಶ ಹೊರಡಿಸಿದೆ. ಕೇರಳದಲ್ಲೀಗ ಪೆಟ್ರೋಲ್ ಬೆಲೆ ಲೀಟರ್ ಗೆ 108.48ರೂಪಾಯಿ

ಆದರೆ ಕರ್ನಾಟಕದಲ್ಲಿ ಕೇರಳಕ್ಕಿಂತ‌ ಕಡಿಮೆ ಅಂದ್ರೇ 101 ರೂಪಾಯಿ ಚಿಲ್ಲರೆಗೆ ಪೆಟ್ರೋಲ್‌ಮಾರಾಟವಾಗುತ್ತಿದೆ. ಸದ್ಯ ಮಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.48ರೂಪಾಯಿ ಇದೆ. ಕೇರಳಕ್ಕಿಂತ ಏಳು ರೂಪಾಯಿ ಅಗ್ಗ ದರದಲ್ಲಿ ದೊರೆಯುವ ರಾಜ್ಯದ ಪೆಟ್ರೋಲ್ ಗಾಗಿ ಕೇರಳಿಗರು ಮುಗಿಬಿದ್ದಿದ್ದಾರೆ. ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕೇರಳ ಸರ್ಕಾರ. ತನ್ನ ಬೊಕ್ಕಸದ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸೆಸ್ ದರ ಜಾಸ್ತಿ ಮಾಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ : ಪ್ಯಾನ್ – ಆಧಾರ್ ಲಿಂಕ್‌ : ಇನ್ನುಂದೆ ಈ ಉಳಿತಾಯ ಯೋಜನೆಗಳಿಗೆ ಕಡ್ಡಾಯ

ಪ್ರವಾಸಿಗರ ಸ್ವರ್ಗ ಎನ್ನಿಸಿಕೊಂಡಿರೋ ಕೇರಳದಲ್ಲಿ ಪೆಟ್ರೋಲ್ ಬೆಲೆ-108.49ರೂಪಾಯಿ, ಡಿಸೇಲ್ ದರ 97.40ರೂಪಾಯಿ ಇದೆ. ಕೇರಳದಲ್ಲಿ ತೈಲ ದರ ಏರಿಕೆ ಹಿನ್ನಲೆಯಲ್ಲಿ ಗಡಿಭಾಗದಲ್ಲಿ ಪೆಟ್ರೋಲ್ ಬಂಕ್ ಗಳಿಗೆ ಸುಗ್ಗಿ ಕಾಲ ಬಂದಂತಾಗಿದ್ದು, ಕೇರಳ ಸರಕಾರದ ವಾಹನಗಳು ಸೇರಿದಂತೆ ಕೇರಳ ನೋಂದಾಯಿತ ವಾಹನ ಸವಾರರು ಗಡಿ ಭಾಗದ ಪೆಟ್ರೋಲ್‌ ಬಂಕ್ ಗಳ ಎದುರು ಇಂಧನ ತುಂಬಿಕೊಳ್ಳಲು ಕ್ಯೂ ನಿಲ್ಲುತ್ತಿದ್ದಾರೆ. ಇದರಿಂದ ಗಡಿಭಾಗದ ಪೆಟ್ರೋಲ್‌ ಬಂಕ್‌ಗಳಿಗೆ ಭರ್ಜರಿ ಆದಾಯ ಗಳಿಕೆಯಾಗುತ್ತಿದೆ. ಕರ್ನಾಟಕದಲ್ಲಿ ಸದ್ಯ 101 ರಿಂದ 4 ರೂಪಾಯಿ ಗಡಿಯಲ್ಲಿ ಪೆಟ್ರೋಲ್ ಮಾರಾಟವಾಗ್ತಿದೆ.

Diesel – Petrol Price in Karnataka : 108 in Kerala, 101 in Karnataka : Motorists of Kerala ran out of petrol at the border

Comments are closed.