ದೀಪಾವಳಿ ಹಬ್ಬಕ್ಕೆ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಭರ್ಜರಿ ಇಳಿಕೆ ಕಂಡ ಬಂಗಾರ

ಬೆಂಗಳೂರು : ದೀಪಾವಳಿ ಹಬ್ಬದ ಸಮಯದಲ್ಲೇ ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಆಭರಣ ದರ 10 ಗ್ರಾಂಗೆ 1,500 ರೂಪಾಯಿ ಇಳಿಕೆ ಕಂಡಿದ್ದು, ಈ ಮೂಲಕ ಚಿನ್ನದ ಬೆಲೆ 47,100 ರೂ. ಇದೆ.

ಕಳೆದ ವಾರ ಎರಡು ಬಾರಿ ಇಳಿಕೆ ಕಂಡಿದ್ದ ಚಿನ್ನದ ದರ ನಾಲ್ಕು ಬಾರಿ ಏರಿಕೆ ಕಂಡಿತ್ತು. ಬರೋಬ್ಬರಿ 870 ರೂ.ಗಳಿಗೆ ಚಿನ್ನದ ದರ ಏರಿಕೆ ಕಂಡಂತಾಗಿತ್ತು. ಆದರೆ ಮಂಗಳವಾರ ಒಂದೇ ದಿನ ಆಭರಣ ದರ 10 ಗ್ರಾಂ ಗೆ 1,500 ರೂ. ಇಳಿಕೆ ಕಂಡಿದೆ.

ಶುದ್ದ ಚಿನ್ನದ ದರ 10 ಗ್ರಾಂ ಗೆ 1,640 ರೂ. ಇಳಿಕೆ ಕಂಡಿದ್ದು, ಈ ಮೂಲಕ 51,380 ರೂ. ತಲುಪಿದೆ.
ಇನ್ನು ಬೆಳ್ಳಿ ಬೆಲೆ ಕಳೆದ ವಾರ ಏಇಕೆ ಕಂಡಿದ್ದು, ಕೆಜಿ ಬೆಳ್ಳಿ ಬೆಲೆ 5,300 ರೂ. ಆಗಿದೆ. ಈ ಮೂಲಕ ಬೆಲೆ ಕೆಜಿಗೆ 65,400 ರೂ. ಆಗಿದೆ.

Comments are closed.