ನವದೆಹಲಿ : ಅತ್ಯಂತ ಕಡಿಮೆ ದರದಲ್ಲಿ ಸರಕುಗಳನ್ನು ಮಾರಾಟ ಮಾಡುವ ಮೂಲಕ ಡಿಮಾರ್ಟ್ ಪ್ರಖ್ಯಾತಿ ಪಡೆದಿದೆ. ದೇಶದ ಪ್ರಮುಖ ರೀಟೇಲ್ ಕಂಪನಿ ಡಿಮಾರ್ಟ್ ಮಾಲೀಕ ರಾಧಾಕಿಶನ್ ದಮಾನಿ ವಿಶ್ವದ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಮುಂಬೈನ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ರಾಧಾಕಿಶನ್ ದಮಾನಿ ವಿಶ್ವದ ನೂರು ಶ್ರೀಮಂತರ ಪಟ್ಟಿಯಲ್ಲಿ 98ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಳೆದ ವರ್ಷ 16.5 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ವಿಶ್ವದ 117ನೇ ಶ್ರೀಮಂತರಾಗಿದ್ದರು. ಆದರೆ ಈ ಬಾರಿ ತಮ್ಮ ಸಂಪತ್ತನ್ನು19.2 ಬಿಲಿಯನ್ ಅಮೆರಿಕನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವೃದ್ದಿಸಿಕೊಂಡಿದ್ದಾರೆ. ಕಳೆದ ಬಾರಿಗೆ ಹೋಲಿದ್ರೆ ಈ ಬಾರಿ ಶೇ. 29ರಷ್ಟು ಸಂಪತ್ತು ಹೆಚ್ಚಳವಾಗಿದೆ.
ವಿಶ್ವದ ಶ್ರೀಮಂತ 100ರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ, ಅಜೀಂ ಪ್ರೇಮ್ ಜಿ, ಗೌತಮ್ ಅದಾನಿ, ಶಿವ ನಡಾರ್, ಗೌತಮ್ ಅದಾನಿ, ಲಕ್ಷ್ಮೀ ಮಿತ್ತಲ್ ಅವರು ಕೂಡ ಸ್ಥಾನ ಪಡೆದುಕೊಂಡಿದ್ದಾರೆ.ಭಾರತದಲ್ಲಿ ಡಿಮಾರ್ಟ್ ಸುಮಾರು 200ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಕಡಿಮೆ ಬೆಲೆಯ ವಸ್ತುಗಳ ಮಾರಾಟದ ಮೂಲಕ ಬಹು ಪ್ರಖ್ಯಾತಿಯನ್ನು ಪಡೆದುಕೊಂಡಿದೆ.