ಸರಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ಈ ದಿನ ನಿಮ್ಮ ಖಾತೆಗೆ ಜಮೆ ಆಗಲಿದೆ ಪಿಎಫ್‌ ಬಡ್ಡಿ ಹಣ

ಭಾರತದ ಪ್ರಸ್ತುತ ಹಣಕಾಸು ವರ್ಷ 2022-23ಕ್ಕೆ ಪಿಎಫ್‌ (EPF ) ಮೇಲೆ ಶೇ.8.15ರಷ್ಟು ಬಡ್ಡಿಯನ್ನು ಪಾವತಿಸಲು ಸರಕಾರ ಘೋಷಿಸಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ ಬಡ್ಡದರ ಏರಿಕೆಯಾಗಿದ್ದು,ಸದ್ಯದಲ್ಲೇ ಉದ್ಯೋಗಿಗಳ ಖಾತೆಗೆ ಪಿಎಫ್‌ ಬಡ್ಡಿ ಹಣ ಜಮೆಯಾಗಲಿದೆ.

ನವದೆಹಲಿ: ಶ್ರಾವಣ ಮಾಸ ಪ್ರಾರಂಭವಾಗುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಬರುತ್ತಿದೆ. ಈ ಹಬ್ಬದ ಸಂತಸವನ್ನು ಇನ್ನಷ್ಟು ಹೆಚ್ಚಿಸಲು ಸಲುವಾಗಿ ಇಪಿಎಫ್‌ಒ (The Employees’ Provident Fund Organisation ) ಬಿಗ್‌ ಅಪ್‌ಡೇಟ್‌ ನೀಡಿದೆ. ಇನ್ನು ಜನ್ಮಾಷ್ಟಮಿ ಮತ್ತು ನವರಾತ್ರಿಯಂತಹ ಹಬ್ಬಗಳು ಬರಲಿದ್ದು, ಕೆಲವೇ ದಿನಗಳಲ್ಲಿ ಸಿದ್ಧತೆಗಳು ಪ್ರಾರಂಭವಾಗಲಿವೆ.

ಮತ್ತೊಂದೆಡೆ, ಮುಂದಿನ ಹಬ್ಬಗಳು ಕಾರ್ಮಿಕ ಭವಿಷ್ಯ ನಿಧಿ ( ಪಿಎಫ್) ಯೋಜನೆಗೆ ಒಳಪಡುವ ಉದ್ಯೋಗಿಗಳಿಗೂ ಬಹಳ ಮುಖ್ಯ. ಇಂತಹ ಉದ್ಯೋಗಿಗಳಿಗಾಗಿಯೇ ಕೇಂದ್ರ ಸರಕಾರ ಪ್ರಮುಖ ಘೋಷಣೆಯೊಂದನ್ನು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಪಿಎಫ್ (EPFO) ಖಾತೆದಾರರ ಖಾತೆಗಳಿಗೆ ಬಡ್ಡಿಯನ್ನು ಉಡುಗೊರೆಯಾಗಿ ನೀಡಿದೆ.

EPFO Updates: Good news for government employees: PF interest money will be credited to your account today.
Image Credit Original Source

ಈ ಹಣಕಾಸು ವರ್ಷ 2022-23ಕ್ಕೆ ಶೇ.8.15ರಷ್ಟು ಬಡ್ಡಿಯನ್ನು ಪಾವತಿಸಲು ಸರಕಾರ ಘೋಷಿಸಿತ್ತು. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ಬಾರಿ ಹೆಚ್ಚಳವಾಗಿದೆ. ಸದ್ಯದಲ್ಲೇ ಉದ್ಯೋಗಿಗಳ ಖಾತೆಗೆ ಬಡ್ಡಿ ಜಮೆಯಾಗಲಿದೆ. ಶೀಘ್ರದಲ್ಲೇ ಬಡ್ಡಿ ಹಣ ಖಾತೆಗೆ ಬಂದರೆ, ಸೆಪ್ಟೆಂಬರ್‌ ತಿಂಗಳಿನಲ್ಲಿ ಪಿಎಫ್‌ ಉದ್ಯೋಗಿಗಳ ದೊಡ್ಡ ಕೊಡುಗೆ ದೊರೆಯಲಿದೆ.

ಈಗಾಗಲೇ ಕೇಂದ್ರ ಸರಕಾರವು ಪಿಎಫ್‌ ಬಡ್ಡಿ ಹಣವನ್ನು ನಿರ್ಧಿಷ್ಟ ದಿನಾಂಕದಂದು ವರ್ಗಾಯಿಸುವ ಕುರಿತು ಯಾವುದೇ ಘೋಷಣೆಯನ್ನು ಮಾಡದಿದ್ದರೂ ಕೂಡ ಶೀಘ್ರದಲ್ಲಿಯೇ ಆಯಾಯ ಖಾತೆದಾರರ ಖಾತೆಗಳಿಗೆ ಜಮೆ ಆಗಲಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ನಿಮ್ಮ ಖಾತೆಗಳಿಗೆ ಎಷ್ಟು ಬಡ್ಡಿಯ ಹಣವನ್ನು ವರ್ಗಾಯಿಸಲಾಗುತ್ತದೆ ಅನ್ನೋ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ಮಾಹಿತಿಯನ್ನು ಓದಲೇ ಬೇಕು. ಇದನ್ನೂ ಓದಿ : ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ವಾ ? ಹಾಗಾದ್ರೆ ಈ ಸಮಸ್ಯೆ ಗ್ಯಾರಂಟಿ ! 

ನಿಮ್ಮ ಪಿಎಫ್‌ ಖಾತೆಗೆ ಎಷ್ಟು ಹಣ ವರ್ಗಾವಣೆ ಆಗಿದೆ ?

ಕಾರ್ಮಿಕರ ಭವಿಷ್ಯನಿಧಿ ಸೌಲಭ್ಯವನ್ನು ಹೊಂದಿರುವ ನೌಕರರ ಖಾತೆಗೆ ಎಷ್ಟು ಬಡ್ಡಿ ಮೊತ್ತ ಜಮೆಯಾಗುತ್ತದೆ ಎಂದು ತಿಳಿಯಲು ನೀವು ಎಲ್ಲಿಯೂ ಹುಡುಕಬೇಕಾಗಿಲ್ಲ. ಸುಲಭವಾಗಿಯೇ ಲೆಕ್ಕಾಚಾರ ಹಾಕಬಹುದಾಗಿದೆ. ಒಂದೊಮ್ಮೆ ನಿಮ್ಮ ಪಿಎಫ್ ಖಾತೆಯಲ್ಲಿ 5 ಲಕ್ಷ ರೂಪಾಯಿ ಇದ್ದರೆ, ಶೇಕಡಾ 8.15 ಬಡ್ಡಿ ದರದಂತೆ ನಿಮಗೆ ಸುಮಾರು 42,000 ರೂಪಾಯಿ ಹಣವನ್ನು ಠೇವಣಿ ಮಾಡಲಾಗುತ್ತದೆ.  ಇದನ್ನೂ ಓದಿ : ಆಧಾರ್ ಕಾರ್ಡ್ ಬಳಕೆದಾರರೇ ಎಚ್ಚರ : ಆಧಾರ್ ಮೂಲಕ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಬಹುದೇ ?   

EPFO Updates: Good news for government employees: PF interest money will be credited to your account today.
Image Credit Original Source

ಒಂದೊಮ್ಮೆ ನಿಮ್ಮ ಖಾತೆಗೆ 6 ಲಕ್ಷ ರೂ. ಜಮಾ ಮಾಡಿದರೆ ಸುಮಾರು 50,000 ಬಡ್ಡಿ ಜಮೆಯಾಗುತ್ತದೆ. ಇಷ್ಟೇ ಅಲ್ಲ, ನಿಮ್ಮ ಪಿಎಫ್ ಖಾತೆಯಲ್ಲಿ 7 ಲಕ್ಷ ರೂ.ಗಳನ್ನು ಜಮಾ ಮಾಡಿದರೆ, 58,000 ರೂ.ಗಳನ್ನು ಬಡ್ಡಿಯಾಗಿ ಜಮಾ ಮಾಡಲು ಸಾಧ್ಯವಿದೆ ಎಂದು ಪರಿಗಣಿಸಲಾಗಿದೆ. ಬಡ್ಡಿ ಹಣದ ಲೆಕ್ಕಾಚಾರವನ್ನು ಮಾಡಲು ನೀವು ಇಪಿಎಫ್‌ಒ ಅಧಿಕೃತ ವೆಬ್‌ಸೈಟ್‌ ಅಥವಾ ಉಮಾಂಗ್‌ ಆಪ್ಲಿಕೇಷನ್‌ ಬಳಕೆ ಮಾಡಬಹುದಾಗಿದೆ.

EPFO Updates: Good news for government employees: PF interest money will be credited to your account today.

 

Comments are closed.