ನವದೆಹಲಿ : ದೇಶಾದ್ಯಂತ ಆಧಾರ್ ಕಾರ್ಡ್ ಹೊಂದಿರುವ ಜನರಿಗೆ ಸಿಹಿಸುದ್ದಿಯೊಂದು (Factcheck) ಲಭ್ಯವಾಗಿದೆ. ನಿಮ್ಮ ಬಳಿ ಆಧಾರ್ ಕಾರ್ಡ್ ಹೊಂದಿದ್ದರೆ, ಸರಕಾರದ ವತಿಯಿಂದ 4,78,000 ರೂಪಾಯಿ ಸಾಲ ದೊರೆಯಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸರಕಾರದ ಯಾವುದೇ ಪ್ರಯೋಜನವನ್ನು ಪಡೆಯಬೇಕಾದ್ರೆ ಆಧಾರ್ ಕಾರ್ಡ್ ಕಡ್ಡಾಯ. ಹೀಗಿರುವಾಗ ಕೇಂದ್ರ ಸರಕಾರ ಆಧಾರ್ ಕಾರ್ಡ್ ಪಡೆದು ಸಾಲ ನೀಡುತ್ತಿದ್ಯಾ ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಸುದ್ದಿಯ ಅಸಲಿಯತ್ತೇನು ಅನ್ನುವುದನ್ನು ಪಿಐಬಿ (PIB) ಬಯಲು ಮಾಡಿದೆ.
ಪಿಐಬಿ ಟ್ವೀಟ್‌ನ ಮಾಹಿತಿ ವಿವರ :
ಪಿಐಬಿ (PIB) ಸತ್ಯಾಸತ್ಯತೆಯನ್ನು ತಪಾಸಣೆಯ ಮೂಲಕ ಅದರ ಸತ್ಯಾಂಶವನ್ನು ಪತ್ತೆಹಚ್ಚಿದೆ. ಈ ಬಗ್ಗೆ ಪಿಐಬಿ ತನ್ನ ಅಧಿಕೃತ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ. ಈ ವೈರಲ್ ಸಂದೇಶದ ಸತ್ಯವನ್ನು ಖಚಿತಪಡಿಸಿದ ನಂತರ, ಪಿಐಬಿ ಈ ಪೋಸ್ಟ್ ಸಂಪೂರ್ಣವಾಗಿ ನಕಲಿ ಎಂದು ಹೇಳಿದೆ.
Factcheck : ಸಾಲ ಸೌಲಭ್ಯ ಸುಳ್ಳು ಸುದ್ದಿಯ ವಿವರ :
ಅಂತಹ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ನಡೆಸುತ್ತಿಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತನ್ನ ತನಿಖೆಯಲ್ಲಿ ಪತ್ತೆಹಚ್ಚಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಹೇಳಿದೆ. ಇದರ ಜೊತೆಯಲಿ ಇಂತಹ ವೈರಲ್ ಪೋಸ್ಟ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸುವಂತೆ ದೇಶದ ಜನತೆಗೆ ತಿಳಿಸಿದ್ದಾರೆ.
ಇದನ್ನೂ ಓದಿ : Blue Aadhaar Card : ಆಧಾರ್ ಕಾರ್ಡ್ ಗೊತ್ತು : ಆದರೆ ನೀಲಿ ಆಧಾರ್ ಕಾರ್ಡ್ ಬಗ್ಗೆ ನಿಮಗೆ ಗೊತ್ತಾ ?
ಇದನ್ನೂ ಓದಿ : Aadhaar-PAN Linking : ಆಧಾರ್ ಕಾರ್ಡ್ ಜೊತೆ ಪ್ಯಾನ್ ಲಿಂಕ್ : ಮತ್ತೆ 3 ತಿಂಗಳ ಅವಕಾಶ, ತಪ್ಪಿದ್ರೆ ಬಾರೀ ದಂಡ
ಸತ್ಯವನ್ನು ಪರಿಶೀಲಿಸುವ ಪ್ರಕ್ರಿಯೆ :
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅನೇಕ ಬಾರಿ ತಪ್ಪು ಸುದ್ದಿಗಳು ವೈರಲ್ ಆಗಲು ಪ್ರಾರಂಭಿಸುತ್ತವೆ. ದೇಶದ ಜನತೆಯ ಸಾಮಾಜಿಕ ಮಾಧ್ಯಮ ಖಾತೆ ಅಥವಾ WhatsApp ನಲ್ಲಿ ಬರುವ ಯಾವುದೇ ಸುದ್ದಿಗಳ ಬಗ್ಗೆ ನಿಮಗೆ ಸಂದೇಹವಿದ್ದರೆ, ನೀವು ಪಿಐಬಿ (PIB) ಮೂಲಕ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು. ಇದಕ್ಕಾಗಿ, ನೀವು ಅಧಿಕೃತ ಲಿಂಕ್ ಆದ https://factcheck.pib.gov.in/ ಗೆ ಭೇಟಿ ನೀಡಬೇಕು. ಇದಲ್ಲವಾದರೆ ನೀವು WhatsApp ಸಂಖ್ಯೆ 8799711259 ಅಥವಾ ಇಮೇಲ್ ಐಡಿ pibfactcheck@gmail.com ಗೆ ಮಾಹಿತಿಯನ್ನು ಕಳುಹಿಸಬಹುದು.
Factcheck : Rs 4 lakh for Aadhaar card holders. Debt: What is legitimate?