Mangaluru Bomb Blast: ಶಂಕಿತನ ಗುರುತು ಪತ್ತೆ: ಅನುಮಾನ ಮೂಡಿಸಿದ ಆತನ ಹೇಳಿಕೆ

ಮಂಗಳೂರು: (Mangaluru Bomb Blast) ಮಂಗಳೂರು ನಗರದ ಆಟೋ ಸ್ಫೋಟ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಪೊಲೀಸರು ಪ್ರಯಾಣಿಕನ ಹೇಳಿಕೆಯನ್ನು ಪಡೆದುಕೊಂಡಿದ್ದು , ಆತನ ಹೇಳಿಕೆಗಳು ಅನುಮಾನವನ್ನು ಮೂಡಿಸುತ್ತಿವೆ. ಅಲ್ಲದೇ ಪೊಲೀಸರು ಶಂಕಿತನ ಗುರುತನ್ನು ಪತ್ತೆ ಹಚ್ಚಿದ್ದು, ಆತ ಹುಬ್ಬಳ್ಳಿ ಮೂಲದವನು ಎಂಬ ಮಾಹಿತಿಗಳು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ.

ಅನುಮಾನ ಮೂಡಿಸಿದ ಶಂಕಿತನ ಹೇಳಿಕೆ

ಮೇಲ್ನೋಟಕ್ಕೆ ಶಂಕಿತನು ಹುಬ್ಬಳ್ಳಿ ಮೂಲದವನು ಎಂಬ ಮಾಹಿತಿಗಳು ದೊರೆತ್ತಿದ್ದು, ಈತ ನಕಲಿ ಐಡಿ ಕಾರ್ಡ್‌ ಬಳಸಿ ಈ ಕೃತ್ಯ(Mangaluru Bomb Blast)ವನ್ನು ನಡೆಸಿದ್ದಾನೆ. ಈತ ಹಿಂದಿ ಭಾಷೆ ಮಾತನಾಡುತ್ತಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಆದ್ರೆ ಆಟೋ ಪ್ರಯಾಣಿಕನ ತನಿಖೆ ವೇಳೆ ಅಸ್ಪಷ್ಟ ಮಾಹಿತಿಗಳು ಸಿಕ್ಕಿದೆ. ಈತ ಪೊಲೀಸರ ಎದುರು ಗೊಂದಲಕಾರಿ ಹೇಳಿಕೆ ನೀಡುತ್ತಿದ್ದು, ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಹೇಳಿದ್ದು ಅಣ್ಣ ಬಾಬುರಾವ್ ಗೆ ಕರೆ ಮಾಡಿ ಅಂತ ನಂಬರ್ ನೀಡಿದ್ದ. ಆ ನಂಬರ್​ಗೆ ಕರೆ ಮಾಡಿದಾಗ “ಆತ ತನ್ನ ಸಂಬಂಧಿಕನೇ ಅಲ್ಲ, ಆತ ತನ್ನ ರೂಮ್ ನಲ್ಲಿದ್ದ, ಬೆಂಗಳೂರಿಗೆ ಹೋಗ್ತೇನೆಂದು ಹೋಗಿದ್ದ ಎಂದಿದ್ದಾನೆ. ಆತನ ಬಗ್ಗೆ ಬೇರೆ ಗೊತ್ತಿಲ್ಲ” ಎಂದು ಆತ ನೀಡಿದ್ದ ಮೊಬೈಲ್‌ ನಂಬರ್‌ ನ ಮಾಲಿಕ ಹೇಳಿದ್ದಾನೆ.

ಮೈಸೂರಿನಲ್ಲಿ ಸಿಂಗಲ್‌ ರೂಮ್‌ ಬಾಡಿಗೆ ಪಡೆದಿದ್ದ ಪ್ರೇಮ್‌ ರಾಜ್‌

ಶಂಕಿತ ಪ್ರೇಮ್‌ ರಾಜ್‌ ಮೈಸೂರಿನಲ್ಲಿ ಸಿಂಗಲ್‌ ರೂಮ್‌ ಒಂದನ್ನು ಬಾಡಿಗೆಗೆ ಪಡೆದಿದ್ದ. ಲೋಕನಾಯಕ ನಗರದ ಹತ್ತನೇ ಕ್ರಾಸ್‌ನಲ್ಲಿ ಮನೆಯನ್ನು ಬಾಡಿಗೆಗೆ ಪಡೆದಿದ್ದು, ಹುಬ್ಬಳ್ಳಿಯ ವಿಳಾಸ ನೀಡಿ ಆತ ಅಗ್ರಿಮೆಂಟ್‌ ಮಾಡಿಸಿಕೊಂಡಿದ್ದ ಎನ್ನಲಾಗಿದೆ.

ಬಾಂಬ್‌ ತಯಾರಿಕೆಗೆ ಬಳಸುವ ವಸ್ತುಗಳು ರೂಮಿನಲ್ಲಿ ಪತ್ತೆ

ಇನ್ನೂ ಮೈಸೂರಿನಲ್ಲಿದ್ದ ಆತನ ರೂಮಿನಲ್ಲಿ ಬಾಂಬ್‌ ತಯಾರಿಕೆಗೆ ಬೇಕಾದ ವಸ್ತುಗಳು ಪತ್ತೆಯಾಗಿದ್ದು, ಸರ್ಕ್ಯೂಟ್‌ ಬೋರ್ಡ್‌, ವುಡನ್‌ ಪೌಡರ್‌, ಆತನ ಮೊಬೈಲ್‌, ಬ್ಯಾಟರಿ, ಎರಡು ನಕಲಿ ಆಧಾರ್‌ ಕಾರ್ಡ್‌, ನಕಲಿ ಪಾನ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಹಾಗೂ ಮಲ್ಟಿ ಮೀಟರ್‌ ಗಳು ಪತ್ತೆಯಾಗಿವೆ. ಇವುಗಳ ಜೊತೆಯಲ್ಲೇ ಒಂದು ಕುಕ್ಕರ್‌ ಕೂಡ ಪತ್ತೆಯಾಗಿದೆ. ಅದರಲ್ಲೇ ಆತ ಬಾಂಬ್‌ ಗಳನ್ನು ಸಾಗಿಸುತ್ತಿದ್ದ ಎನ್ನುವ ಅನುಮಾನ ಮೂಡುತ್ತಿದೆ.

ಅಸಲಿ ವ್ಯಕ್ತಿ ಪ್ರೇಮ್‌ ರಾಜ್‌ ತುಮಕೂರಿನಲ್ಲಿ ಪತ್ತೆ

ಇನ್ನೂ ಅಸಲಿ ವ್ಯಕ್ತಿ ಪ್ರೇಮ್‌ ರಾಜ್‌ ತುಮಕೂರಿನಲ್ಲಿ ಪತ್ತೆಯಾಗಿದ್ದು, ಈತ ಹುಬ್ಬಳ್ಳಿಯ ಕೇಶವಾಪುರ ಮೂಲದವನಾಗಿದ್ದಾನೆ. ಆತ ರೈಲ್ವೇ ಇಲಾಖೆಯಲ್ಲಿ ಟ್ರ್ಯಾಕ್‌ ಮ್ಯಾನ್‌ ಕೆಲಸ ಮಾಡಿಕೊಂಡಿದ್ದಾನೆ. ಅಸಲಿ ಪ್ರೇಮ್‌ ರಾಜ್‌ನನ್ನು ಪೊಲೀಸರು ವಿಚಾರಣೆ ನಡೆಸಿದ ವೇಳೆಯಲ್ಲಿ ಪ್ರೇಮ್‌ ರಾಜ್‌, ” ನಾನು 2019 ರಿಂದಲೂ ಇಲ್ಲೀಯೇ ಕೆಲಸ ಮಾಡುತ್ತಿದ್ದೆ. ನಿನ್ನೆ ಕೂಡ ಇಲ್ಲಿಯೇ ಇದ್ದೆ. ರಾತ್ರಿ ವೇಳೆ ಪೊಲೀಸರು ಕರೆ ಮಾಡಿದ್ದಾರೆ. ನಂತರ ಮಂಗಳೂರು ಪೊಲೀಸ್‌ ಅಧಿಕಾರಿಗಳು ಕರೆ ಮಾಡಿದ್ದಾರೆ. ಅವರು ಕರೆ ಮಾಡಿದ ಬಳಿಕವೇ ನನಗೆ ವಿಷಯ ತಿಳಿದಿದ್ದು. ಈ ಹಿಂದೆ ದಾರವಾಡಕ್ಕೆ ಹೋದಾಗ ನನ್ನ ಆಧಾರ್‌ ಕಾರ್ಡ್‌ ಅನ್ನು ಕಳೆದುಕೊಂಡಿದ್ದೆ. ನಾನು ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ. ನಿಯತ್ತಾಗಿಯೇ ದುಡಿದು ತಿನ್ನುತ್ತಿದ್ದೇನೆ . ನೀವು ಯಾವುದೇ ರೀತಿಯ ತನಿಖೆಗೆ ಕರೆದರೂ ನಾನು ಬರಲು ಸಿದ್ದವಾಗಿದ್ದೇನೆ” ಎಂದು ಹೆಳಿದ್ದಾನೆ.

ಇದನ್ನೂ ಓದಿ : Mangaluru Auto Blast: ಚಲಿಸುತ್ತಿದ್ದ ಆಟೋ ಸ್ಫೋಟ ಅನಿರೀಕ್ಷಿತವಲ್ಲ,ಇದೋಂದು ಭಯೋತ್ಪಾದಕ ಕೃತ್ಯ: ಡಿಜಿಪಿ ಪ್ರವೀಣ್‌ ಸೂದ್‌

ಇದನ್ನೂ ಓದಿ : ಆಟೋ ನಿಗೂಢ ಸ್ಪೋಟ ಪ್ರಕರಣ : ಮಂಗಳೂರಿಗೆ NIA ತಂಡ, ಸ್ಪೋಟಕ್ಕಿದ್ಯಾ ಉಗ್ರರ ನಂಟು

ಸಿ.ಎಂ ಬೊಮ್ಮಾಯಿ ಅವರು ಮಂಗಳೂರಿಗೆ ಬಂದ ವೇಳೆಯೆ ಬಾಂಬ್‌ ಸ್ಪೋಟ

ಶನಿವಾರ ಸಿ.ಎಂ ಬೊಮ್ಮಾಯಿ ಅವರು ಮಂಗಳೂರಿಗೆ ಬಂದಿದ್ದರು. ಅವರು ಬರುವ ವಿಚಾರ ತಿಳಿದೇ ಭಯೋತ್ಪಾದಕರು ಈ ಕೃತ್ಯವೆಸಗಿರಬಹುದು ಎಂಬ ಅನುಮಾನಗಳು ಕೂಡ ಬರತ್ತಿದೆ. ಪಂಪ್‌ ವೆಲ್‌ ನ ಬಸ್‌ ಸ್ಟ್ಯಾಂಡ್‌ ನ ಸ್ಫೋಟಕ್ಕೆ ಸಂಚು ರೂಪಿಸಿರಬಹುದು ಎಂಬ ಅನುಮಾನಗಳು ಹೆಚ್ಚಾಗಿವೆ. ಬಸ್‌ ಸ್ಟ್ಯಾಂಡ್‌ ನಲ್ಲಿ ಬಾಂಬ್‌ ಟೈಮರ್‌ ಇಟ್ಟು ಸ್ಫೋಟಗೊಳಿಸುವ ಹುನ್ನಾರವನ್ನು ಹಾಕಿರಬಹುದು ಎನ್ನಲಾಗುತ್ತಿದೆ.

(Mangaluru Bomb Blast) The auto blast case of Mangaluru city is taking a turn for the moment. The police have obtained the statement of the passenger and his statements are raising suspicion. Also, the police have discovered the identity of the suspect and it seems that he is a native of Hubli.

Comments are closed.