ಉಚಿತ ಬಸ್‌ ಪ್ರಯಾಣ : ಶಕ್ತಿಯೋಜನೆಯಡಿ ಮಹಿಳೆಯರು ಸ್ಮಾರ್ಟ್‌ ಕಾರ್ಡ್‌ ಮಾಡಿಸದಿದ್ರೆ ಉಚಿತ ಪ್ರಯಾಣ ರದ್ದು

ಐದು ಗ್ಯಾರಂಟಿ ಯೋಜನೆಗಳಲ್ಲಿ ಸದ್ಯ ಯುವನಿಧಿ ಯೋಜನೆಯೊಂದು ಜಾರಿಗೊಳಿಸಲು ಬಾಕಿ ಇದ್ದು, ಈ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಲಿದೆ ಎಂದಿದ್ದಾರೆ. ಆದರೆ ಈಗ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊದಲ ಯೋಜನೆ (Shakti Scheme) ಬಗ್ಗೆ ಮಹತ್ತರ ಹೇಳಿಕೆಯನ್ನು ನೀಡಲಾಗಿದೆ.

ಬೆಂಗಳೂರು : ಕಳೆದ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ತರುವುದಾಗಿ ಕಾಂಗ್ರೆಸ್‌ ಪಕ್ಷ ಹೇಳಿದೆ. ಅದರಂತೆ ಕಾಂಗ್ರೆಸ್‌ ಪಕ್ಷ ಅತೀ ಹೆಚ್ಚು ಮತ ಗಳಿಕೆ ಪಡೆಯುವ ಮೂಲಕ ರಾಜ್ಯದಲ್ಲಿ ಅಧಿಕಾರವನ್ನು ಪಡೆದಿದೆ. ಕಾಂಗ್ರೆಸ್‌ ಸರಕಾರ (Karnataka Congress Govt) ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಜಾರಿ ತಂದಿದೆ.

ಐದು ಗ್ಯಾರಂಟಿ ಯೋಜನೆಗಳಲ್ಲಿ ಸದ್ಯ ಯುವನಿಧಿ ಯೋಜನೆಯೊಂದು ಜಾರಿಗೊಳಿಸಲು ಬಾಕಿ ಇದ್ದು, ಈ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಲಿದೆ ಎಂದಿದ್ದಾರೆ. ಆದರೆ ಈಗ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊದಲ ಯೋಜನೆ (Shakti Scheme) ಬಗ್ಗೆ ಮಹತ್ತರ ಹೇಳಿಕೆಯನ್ನು ನೀಡಲಾಗಿದೆ.

Free bus travel: Under Shakti Yojana, free travel will be canceled if women do not have smart card
Image Credit To Original Source

ರಾಜ್ಯದಲ್ಲಿ ಶಕ್ತಿ ಯೋಜನೆಯನ್ನು (Karnataka Govt Shakti Yojana) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಜೂನ್‌ 11ರಂದು ಚಾಲನೆ ನೀಡುವ ಮೂಲಕ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣವನ್ನು ಘೋಷಿಸಿದ್ದರು. ಈ ಯೋಜನೆಯ ಚಾಲನೆಯ ದಿನದಿಂದ ರಾಜ್ಯದ ಮಹಿಳೆಯರು ರಾಜ್ಯದ ಎಲ್ಲೆಡೆ ಉಚಿತವಾಗಿ ಪ್ರಯಾಣ ಮಾಡುವ ಮೂಲಕ ಯೋಜನೆಯ ಲಾಭವನ್ನು ಪಡೆದಿದ್ದಾರೆ. ಈ ಯೋಜನೆಯ ಲಾಭವನ್ನು ಪಡೆಯುವ ಸಲುವಾಗಿ ಮಹಿಳೆಯರು ಯಾವುದೇ ಶುಲ್ಕವನ್ನು ಪಾವತಿಸಿದೇ ಆಧಾರ್‌ ಕಾರ್ಡ್‌ ಅಂತಹ ಗುರುತಿನ ಚೀಟಿಯನ್ನು ಬಳಸಿಕೊಂಡು ಉಚಿತ ಬಸ್‌ ಪ್ರಯಾಣದ ಲಾಭವನ್ನು ಸಿಎಂ ಸಿದ್ದರಾಮಯ್ಯ ಸರಕಾರ ಕಲ್ಪಿಸಿಕೊಟ್ಟಿದೆ.

ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿರುತ್ತದೆ. ಸದ್ಯ ಈ ಯೋಜನೆಯ ಕುರಿತು ಸರಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸರಕಾರದ ಈ ನಿರ್ಧಾರದ ಪ್ರಕಾರ, ಇಲ್ಲಿಯವರೆಗೂ ಮಹಿಳೆಯರು ಬಸ್‌ನಲ್ಲಿ ಪ್ರಯಾಣಿಸುವಾಗ ಆಧಾರ್‌ ಕಾರ್ಡ್‌ ನೀಡುತ್ತಿದ್ದು, ಇನ್ನು ಮುಂದೆ ಆಧಾರ್‌ ಕಾರ್ಡ್‌ (Aadhaar Card) ನೀಡುವ ಅಗತ್ಯವಿಲ್ಲ ಎನ್ನಲಾಗಿದೆ. ಇದೀಗ ರಾಜ್ಯ ಸರಕಾರವುನ ಶಕ್ತಿ ಯೋಜನೆಯಲ್ಲಿ (Shakti Yojana) ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

Free bus travel: Under Shakti Yojana, free travel will be canceled if women do not have smart card
Image Credit To Original Source

ಇದನ್ನೂ ಓದಿ : ಲಿಂಗಾಯಿತರ ಮುನಿಸು ತಣಿಸಲು ಅಖಾಡಕ್ಕಿಳಿದ ಬಿ.ಎಸ್.ಯಡಿಯೂರಪ್ಪ : ಕೊನೆಗೂ ಎಚ್ಚೆತ್ತ ಬಿಜೆಪಿ

ರಾಜ್ಯದಲ್ಲಿ ಉಚಿತ ಬಸ್‌ ಪ್ರಯಾಣ ಮಾಡುವ ಮಹಿಳೆಯರು ಶಕ್ತಿ ಸ್ಮಾರ್ಟ್‌ ಕಾರ್ಡ್‌ (Shakti Smart Card) ಪಡೆಯಬೇಕು ಎಂದು ಘೋಷಿಸಲಾಗಿದೆ. ಸರಕಾರ ಈ ಯೋಜನೆಯಡಿ ಸ್ಮಾರ್ಟ್‌ ಕಾರ್ಡ್‌ ನೀಡುವ ಬಗ್ಗೆ ಸಾಕಷ್ಟು ಯೋಚಿಸಿ ನಿರ್ಧಾರ ಕೈಗೊಂಡಿದೆ. ಆದರೆ ಈ ಸ್ಮಾರ್ಟ್‌ ಕಾರ್ಡ್‌ ಪಡೆಯಲು ಮಹಿಳಾ ಫಲಾನುಭವಿಗಲು ಅಲ್ಪ ಪ್ರಮಾಣದ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ : ಬೆಂಗಳೂರಲ್ಲಿ 2 ತಿಂಗಳಲ್ಲಿ 3,200 ಡೆಂಗ್ಯೂ ಪ್ರಕರಣ : ಎಚ್ಚರಿಕೆ ಕೊಟ್ಟ ಆರೋಗ್ಯ ಸಚಿವ, ಏನಿದರ ಲಕ್ಷ್ಮಣ

ಮಹಿಳೆಯರು ಶಕ್ತಿ ಸ್ಮಾರ್ಟ್‌ ಕಾರ್ಡ್‌ಗಾಗಿ (Shakti Smart Card) 14.16 ರೂ. ಗಳನ್ನು ಪಾವತಿಸಬೇಕಾಗುತ್ತದೆ. ಇದಕ್ಕಾಗಿ ಅರ್ಜಿಗಳನ್ನು ಶೀಘ್ರದಲ್ಲೇ ಸರಕಾರ ಬಿಡುಗಡೆ ಮಾಡಲಾಗುತ್ತದೆ. ಇದರ ನೋಂದಾಣಿಗಾಗಿ ಮಹಿಳೆಯರು ಹತ್ತಿರದ ಕರ್ನಾಟಕ ಒನ್, ಬಾಪೂಜಿ ಕೇಂದ್ರ, ಬೆಂಗಳೂರು ಒನ್‌ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಶಕ್ತಿ ಸ್ಮಾರ್ಟ್‌ ಕಾರ್ಡ್‌ ಅನ್ನು ಪಡೆಯಬಹುದಾಗಿದೆ.

Free bus travel: Under Shakti Yojana, free travel will be canceled if women do not have smart card

Comments are closed.