GST Annual Return Filing Deadline Till Feb 28: 2022ರ ಆರಂಭದಲ್ಲಿ ಸಂತಸದ ಸುದ್ದಿ; ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್ ಸಲ್ಲಿಸಲು ಅವಧಿ ಮುಂದೂಡಿಕೆ

ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್ ಸಲ್ಲಿಸಲು ನೀಡಿದ್ದ ಗಡುವನ್ನು 2022ರ ಫೆಬ್ರುವರಿ 28ರ ವರೆಗೆ ಕೇಂದ್ರ ಸರ್ಕಾರ (GST Annual Return Filing Deadline Till Feb 28) ವಿಸ್ತರಿಸಿದೆ. ಉದ್ದಿಮೆದಾರರ ವಾರ್ಷಿಕ ವಹಿವಾಟು ಮೊತ್ತವು 2 ಕೋಟಿ ರೂಪಾಯಿಗಿಂತ ಹೆಚ್ಚಿದ್ದರೆ ಅಂಥವರು ವಾರ್ಷಿಕ ರಿಟರ್ನ್ಸ್ (GST Annual Return) ‘ಜಿಎಸ್‌ಟಿಆರ್-9’ ಅನ್ನು ಕಡ್ಡಾಯವಾಗಿ ಸಲ್ಲಿಸಬೇಕು. ವಾರ್ಷಿಕ ವಹಿವಾಟು 5 ಕೋಟಿ ರೂಪಾಯಿಗಿಂತ ಹೆಚ್ಚಿದ್ದರೆ ಅಂಥವರು ‘ಜಿಎಸ್‌ಟಿಆರ್‌–9ಸಿ ಸಲ್ಲಿಸಬೇಕಿದೆ.

ಈ ಹಿಂದೆ 2020–21ನೇ ವಿತ್ತ ವರ್ಷದ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ ಎಂದು ಸರ್ಕಾರ ಹೇಳಿತ್ತು. ಇದೀಗ ಗಡುವು ವಿಸ್ತರಿಸಿರುವ ಬಗ್ಗೆ ‘ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸಸ್ ಆ್ಯಂಡ್ ಕಸ್ಟಮ್ಸ್’ಈಕುರಿತು ಅಧಿಕೃತವಾಗೊ ಘೋಷಣೆ ಮಾಡಿದೆ.

ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್​ಟಿ ಸಮಿತಿಯು ನಡೆಸಲಿರುವ ಸಭೆಯು ಇಂದು (ಡಿಸೆಂಬರ್ 31) ಶುಕ್ರವಾರ ದೆಹಲಿಯಲ್ಲಿ ನಿಗದಿ ಆಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ದರಗಳ ಬಗ್ಗೆ ರಾಜ್ಯ ಸಚಿವರ ಸಮಿತಿಯು ಮಾಡಿದ ಶಿಫಾರಸುಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ನಾಳೆ ಅಂದರೆ ಜನವರಿ 1 2022ರಿಂದ ದೇಶದಲ್ಲಿ ಜವಳಿ ಉತ್ಪನ್ನಗಳ ಮೇಲಿನ ಹೆಚ್ಚಿನ ತೆರಿಗೆ ದರವನ್ನು ದೇಶದ ವಿವಿಧ ರಾಜ್ಯಗಳು ವಿರೋಧಿಸಿವೆ. ಅಲ್ಲದೇ ಜವಳಿ ಉತ್ಪನ್ನಗಳ ಮೇಲಿನ ದರ ಏರಿಕೆಯನ್ನು ತಡೆಹಿಡಿಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವ ಸಭೆಯಲ್ಲಿ, ಗುಜರಾತ್, ಪಶ್ಚಿಮ ಬಂಗಾಳ, ದೆಹಲಿ, ರಾಜಸ್ಥಾನ ಮತ್ತು ತಮಿಳುನಾಡು ಮೊದಲಾದ ರಾಜ್ಯಗಳು ಜವಳಿ ಮೇಲಿನ ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್‌ಟಿ ದರವನ್ನು ಜನವರಿ 1, 2022 ರಿಂದ ಜಾರಿಗೆ ಬರುವಂತೆ ಸದ್ಯಕ್ಕೆ ಇರುವ ಶೇಕಡಾ 5ರಿಂದ ಶೇ 12ಕ್ಕೆ ಹೆಚ್ಚಿಸುವ ನಿರ್ಧಾರಕ್ಕೆ ಸಮ್ಮತಿ ಸೂಚಿಸಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.  

ಪ್ರಮುಖ ಖಾದ್ಯ ತೈಲ ಕಂಪೆನಿಗಳು ಉತ್ಪನ್ನಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು (ಎಂಆರ್‌ಪಿ) ರೂ. 30ರಿಂದ ರೂ. 40ರಷ್ಟು ಕಡಿತಗೊಳಿಸಿವೆ ಎಂದು ಈನಡುವೆ ವರದಿಯಾಗಿದೆ.

ಇದನ್ನೂ ಓದಿ: 2022 Horoscope: ನಿಮ್ಮ 2022ರ ಭವಿಷ್ಯ ತಿಳಿದುಕೊಳ್ಳಿ, ಹೊಸವರ್ಷಕ್ಕೆ ಹೊಸ ಹುಮ್ಮಸ್ಸಿನಿಂದ ಪದಾರ್ಪಣೆ ಮಾಡಿ

(FY21 GST Annual Return Filing Deadline Till Feb 28 Government Extends)

Comments are closed.