ಚಿನ್ನ, ಬೆಳ್ಳಿ ಬೆಲೆ ಭಾರೀ ಇಳಿಕೆ : ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌

ಬೆಂಗಳೂರು : ಚಿನ್ನಾಭರಣ ಖರೀದಿದಾರರಿಗೆ ಗುಡ್‌ನ್ಯೂಸ್‌. ಇಂದು (ಮೇ 13) ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ (Gold and silver prices down)‌ ಕಂಡಿದೆ. ಕಳೆದ ವಾರದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಕಂಡಿದೆ. ಈ ವಾರದ ಆರಂಭದಿಂದಲೂ ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ಕಂಡಿದ್ದು, ಬೆಳ್ಳಿ ಮಾತ್ರ ತನ್ನ ಬೆಲೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಮದುವೆ ಸಮಾರಂಭಗಳ ಸೀಸನ್‌ ಆರಂಭಗೊಂಡಿದ್ದು, ಚಿನ್ನಾಭರಣಗಳ ಬೆಲೆಯಲ್ಲಿ ಹಾವು ಏಳಿ ಆಟ ನಡೆದಿದೆ. ಹೀಗಾಗಿ ಗ್ರಾಹಕರು ಚಿನ್ನಾಭರಣ ಖರೀದಿಗಾಗಿ ಸೂಕ್ತವಾದ ಸಮಯಕ್ಕಾಗಿ ಕಾಯುತ್ತಿದ್ದಾರೆ.

ಕಳೆದ ವಾರದಿಂದ ಮಾರುಕಟ್ಟೆಯಲ್ಲಿ ಬೆಳ್ಳಿ ದರವು ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಇಂದು ಮಾತ್ರ 10 ಗ್ರಾಮ್‌ಗೆ 26 ರೂ.ನಷ್ಟು ಬೆಲೆ ಇಳಿಕೆ ಕಂಡಿದೆ. ಇನ್ನು ಭಾರತದಲ್ಲಿ ಸದ್ಯ 10 ಗ್ರಾಮ್‌ನ 22 ಕ್ಯಾರೆಟ್‌ ಚಿನ್ನದ ಬೆಲೆ 56550 ರೂಪಾಯಿ ಇದೆ. 24 ಕ್ಯಾರೆಟ್‌ನ ಅಪರಂಜಿ ಚಿನ್ನದ ಬೆಲೆ 61690 ರೂಪಾಯಿ ಆಗಿದೆ. 100ಗ್ರಾಮ್‌ ಬೆಳ್ಳಿ ಬೆಲೆ 7500 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 56600 ರೂಪಾಯಿ ಆಗಿದೆ. ಬೆಳ್ಳಿ ಬೆಲೆ 100 ಗ್ರಾಮ್‌ಗೆ 7870 ರೂಪಾಯಿಯಲ್ಲಿ ಇದೆ.

ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿರುವ 22 ಕ್ಯಾರೆಟ್‌ ಚಿನ್ನದ ಬೆಲೆ (10ಗ್ರಾಮ್‌) ವಿವರ :

  • ಬೆಂಗಳೂರು : ರೂ. 56600
  • ಚೆನ್ನೈ : ರೂ. 57050
  • ಮುಂಬೈ : ರೂ. 56550
  • ದೆಹಲಿ : ರೂ. 56650
  • ಕೋಲ್ಕತ್ತಾ : ರೂ. 56550
  • ಕೇರಳ : ರೂ. 56550
  • ಅಹ್ಮದಬಾದ್‌ : ರೂ. 56600
  • ಜೈಪುರ : ರೂ. 56550
  • ಲಕ್ನೋ : ರೂ. 56550
  • ಭುವನೇಶ್ವರ್‌ : ರೂ. 56550

ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿ ಬೆಳ್ಳಿ ಬೆಲೆ (100ಗ್ರಾಮ್)‌ ವಿವರ :

  • ಬೆಂಗಳೂರು : ರೂ. 7870
  • ಚೆನ್ನೈ : ರೂ. 7870
  • ಮುಂಬೈ : ರೂ. 7500
  • ದೆಹಲಿ : ರೂ. 7500
  • ಕೋಲ್ಕತ್ತಾ : ರೂ. 7500
  • ಕೇರಳ : ರೂ. 7870
  • ಅಹ್ಮದಾಬಾದ್‌ : ರೂ. 7500
  • ಜೈಪುರ : ರೂ. 7500
  • ಲಕ್ನೋ : ರೂ. 7500
  • ಭುವನೇಶ್ವರ್‌ : ರೂ. 7870

ಇನ್ನು ಅನ್ವಯವಾಗುವ ಎಲ್ಲಾ ತೆರಿಗೆಗಳು ಮತ್ತು ಶುಲ್ಕಗಳು ಸೇರಿದಂತೆ ನಿಜವಾದ ದರಗಳನ್ನು ಪಡೆಯಲು ಗ್ರಾಹಕರು ತಮ್ಮ ಸ್ಥಳೀಯ ಆಭರಣ ಅಂಗಡಿಗಳಿಗೆ ಭೇಟಿ ನೀಡಲು ಸಲಹೆ ನೀಡಲಾಗುತ್ತದೆ. ಗ್ರಾಹಕರು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಪಾವತಿಸಬೇಕಾದ ಅಂತಿಮ ಬೆಲೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಭಾರತದಲ್ಲಿ ಚಿನ್ನದ ಬೆಲೆಗಳು ಮಾರುಕಟ್ಟೆಯನ್ನು ಅವಲಂಬಿಸಿವೆ. ಬಾಷ್ಪಶೀಲ ನೀತಿಗಳು, ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಯುಎಸ್ ಡಾಲರ್ ಎದುರು ರೂಪಾಯಿಯ ಬಲ ಸೇರಿದಂತೆ ಹಲವಾರು ಅಂಶಗಳಿಂದ ಬೆಲೆಗಳನ್ನು ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ : ಆಭರಣ ಪ್ರಿಯರ ಗಮನಕ್ಕೆ : ಪ್ರಮುಖ ನಗರಗಳಲ್ಲಿ ಎಷ್ಟಿದೆ ಇಂದಿನ ಚಿನ್ನ, ಬೆಳ್ಳಿ ದರ

ಇದನ್ನೂ ಓದಿ : Higher EPS Pension: ಹೆಚ್ಚಿನ ಪಿಂಚಣಿಗಾಗಿ ಇಪಿಎಫ್‌ಒ ಬಾಕಿ ಲೆಕ್ಕಾಚಾರ ಮಾಡುವುದು ಹೇಗೆ ?

ಇದನ್ನೂ ಓದಿ : SBI ಬ್ಯಾಂಕ್‌ ಖಾತೆಯನ್ನು ಇನ್ನೊಂದು ಶಾಖೆಗೆ ವರ್ಗಾಯಿಸಬೇಕೇ ? ಹಾಗಾದ್ರೆ ಹೀಗೆ ಮಾಡಿ

Gold and silver prices down: Gold and silver prices have come down heavily: Good news for jewelery lovers

Comments are closed.