ನವದೆಹಲಿ : ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಈ ವಾರದ ಆರಂಭದಲ್ಲಿ ಹಾವು ಏಣಿ ಆಟವಾಡಿದೆ. ಆದರೆ ಇಂದು (ಮೇ 17) ಚಿನ್ನದ ಬೆಲೆಯಲ್ಲಿ ತುಸು ಇಳಿಕೆ ಕಂಡರೆ, ಸತತವಾಗಿ ಇಳಿಕೆ ಕಂಡಿದ್ದ (Gold and silver prices rise) ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದೆ. ಇತ್ತೀಚೆಗೆ ಹೆಚ್ಚಿನ ಜನರು ತಮ್ಮ ಆದಾಯದ ಸ್ವಲ್ಪ ಭಾಗವನ್ನು ಉತ್ತಮ ಭವಿಷ್ಯದ ನಿರ್ವಹಣೆಗಾಗಿ ಚಿನ್ನಾಭರಣಗಳ ಮೇಲೆ ಹೂಡಿಕೆ ಮಾಡುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ದಿನದಿಂದ ದಿನಕ್ಕೆ ಬದಲಾವಣೆ ಕಾಣುತ್ತಿದ್ದರಿಂದ ಅದರ ಮೇಲೆ ಹೂಡಿಕೆ ಮಾಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ.
ಕಳೆದ ವಾರ ಅಂದರೆ ಮೇ 5ರಂದು 100 ಗ್ರಾಮ್‌ಗೆ 7825 ರೂ. ಇದ್ದ ಬೆಳ್ಳಿ ಬೆಲೆ ಇದೀಗ 7510ರೂ. ಗೆ ಇಳಿದಿದೆ. ಹೀಗಾಗಿ ಕಳೆದ ಏಂಟು, ಹತ್ತು ದಿನದಲ್ಲಿ ಸುಮಾರು 345 ರೂ.ನಷ್ಟು ಬೆಳ್ಳಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಸದ್ಯ ಭಾರತದ ವಿವಿಧ ವಾಣಿಜ್ಯ ನಗರಗಳಲ್ಲಿ 10 ಗ್ರಾಮ್‌ನ 22 ಕ್ಯಾರೆಟ್ ಚಿನ್ನದ ಬೆಲೆ 56750 ರೂಪಾಯಿ ಇದೆ. 24 ಕ್ಯಾರೆಟ್‌ನ ಚಿನ್ನದ ಬೆಲೆ 61910 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7510 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 56800 ರೂಪಾಯಿ ಆಗಿದೆ. ಬೆಳ್ಳಿ ಬೆಲೆ 100 ಗ್ರಾಮ್‌ಗೆ 7880 ರೂಪಾಯಿ ಇದೆ. ಇನ್ನುಳಿದಂತೆ ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆಗಳನ್ನು ಈ ಕೆಳಗೆ ತಿಳಿಸಲಾಗಿದೆ.
ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿರುವ 22 ಕ್ಯಾರೆಟ್ ಚಿನ್ನದ ಬೆಲೆ (10ಗ್ರಾಮ್) ವಿವರ :
- ಬೆಂಗಳೂರು : ರೂ. 56800
- ಚೆನ್ನೈ : ರೂ. 57180
- ಮುಂಬೈ : ರೂ. 56750
- ದೆಹಲಿ : ರೂ. 56900
- ಕೋಲ್ಕತ್ತಾ : ರೂ. 56750
- ಕೇರಳ : ರೂ. 56750
- ಅಹ್ಮದಬಾದ್ : ರೂ. 56800
- ಜೈಪುರ : ರೂ. 56900
- ಲಕ್ನೋ : ರೂ. 56900
- ಭುವನೇಶ್ವರ್ : ರೂ. 56750
ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿ ಬೆಳ್ಳಿ ಬೆಲೆ (100ಗ್ರಾಮ್) ವಿವರ :
- ಬೆಂಗಳೂರು : ರೂ. 7880
- ಚೆನ್ನೈ : ರೂ. 7880
- ಮುಂಬೈ : ರೂ. 7510
- ದೆಹಲಿ : ರೂ. 7510
- ಕೋಲ್ಕತ್ತಾ : ರೂ. 7510
- ಕೇರಳ : ರೂ. 7880
- ಅಹ್ಮದಾಬಾದ್ : ರೂ. 7510
- ಜೈಪುರ : ರೂ. 7510
- ಲಕ್ನೋ : ರೂ. 7510
- ಭುವನೇಶ್ವರ್ : ರೂ. 7880
ಇದನ್ನೂ ಓದಿ : ದೇಶದ ವಿವಿಧ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿಯ ದರ
ಇನ್ನು ಅನ್ವಯವಾಗುವ ಎಲ್ಲಾ ತೆರಿಗೆಗಳು ಮತ್ತು ಶುಲ್ಕಗಳು ಸೇರಿದಂತೆ ನಿಜವಾದ ದರಗಳನ್ನು ಪಡೆಯಲು ಗ್ರಾಹಕರು ತಮ್ಮ ಸ್ಥಳೀಯ ಆಭರಣ ಅಂಗಡಿಗಳಿಗೆ ಭೇಟಿ ನೀಡಲು ಸಲಹೆ ನೀಡಲಾಗುತ್ತದೆ. ಗ್ರಾಹಕರು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಪಾವತಿಸಬೇಕಾದ ಅಂತಿಮ ಬೆಲೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಭಾರತದಲ್ಲಿ ಚಿನ್ನದ ಬೆಲೆಗಳು ಮಾರುಕಟ್ಟೆಯನ್ನು ಅವಲಂಬಿಸಿವೆ. ಬಾಷ್ಪಶೀಲ ನೀತಿಗಳು, ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಯುಎಸ್ ಡಾಲರ್ ಎದುರು ರೂಪಾಯಿಯ ಬಲ ಸೇರಿದಂತೆ ಹಲವಾರು ಅಂಶಗಳಿಂದ ಬೆಲೆಗಳನ್ನು ನಿರ್ಧರಿಸಲಾಗುತ್ತದೆ.
Gold and silver prices rise: Gold and silver prices rose slightly in Chiniwara town