ಜೂನ್‌ 4ಕ್ಕೆ ಮುಂಗಾರು ಮಳೆ ಆಗಮನ : ಮಳೆ ವಿಳಂಭಕ್ಕೆ ಹವಾಮಾನ ವರದಿ ಹೇಳುವುದೇನು ?

ಬೆಂಗಳೂರು : ರಾಜ್ಯದಲ್ಲಿ ವಾಡಿಕೆಯಂತೆ ಮುಂಗಾರುಮಳೆ (Monsoon Rain) ಜೂನ್‌ ಆರಂಭದಲ್ಲೇ ಆಗಮನವಾಗುತ್ತದೆ. ಅದ್ರಲ್ಲೂ ಕೇರಳಕ್ಕೆ ಮುಂಗಾರು ಆಗಮನದ ನಂತರವೇ ಕರ್ನಾಟಕದಲ್ಲಿ ಮಳೆಗಾಲ ಆರಂಭವಾಗುವುದು ವಾಡಿಕೆ. ಆದರೆ ಈ ಬಾರಿ ಕೇರಳದಲ್ಲಿ ಮುಂಗಾರು ಮಳೆಯ ಆಗಮನದಲ್ಲಿ ವಿಳಂಭವಾಗುವ ಸಾಧ್ಯತೆಯಿದೆ. ಪ್ರತಿ ವರ್ಷ ಜೂನ್‌ 1 ರ ಹೊತ್ತಿಗೆ ಆಗಮಿಸುವ ಮುಂಗಾರು ಮಳೆ ಈ ಬಾರೀ ಜೂನ್‌ 4ರಂದು ಬರುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಹೇಳಿದೆ.

ವರ್ಷಂಪ್ರತಿ ಮುಂಗಾರು ಮಳೆ ಜೂನ್‌ 1 ರಂದು ಕೇರಳ ಪ್ರವೇಶಿಸುತ್ತದೆ. ಅಲ್ಲಿ ಮಳೆ ಸುರಿದ ಮೂರು ಅಥವಾ ನಾಲ್ಕು ದಿನಗಳಲ್ಲಿ ಕರ್ನಾಟಕದಲ್ಲಿ ಮಳೆಯಾಗುತ್ತದೆ. ಈ ಸಲ ಮಳೆ ವಿಳಂಬದಿಂದ ರೈತರಿಗೆ ತೊಡಕಾಗಬಹುದು. ಇನ್ನೇನು ಮುಂದಿನ ವರ್ಷದ ಭತ್ತದ ಬೆಳೆಗೆ ಬಿತ್ತನೆ ಕೆಲಸ ಶುರು ಮಾಡಲಿದ್ದು, ವರುಣನ ಆಗಮನಕ್ಕಾಗಿ ಮುಗಿಲು ನೋಡುತ್ತಿದ್ದಾರೆ. ಇನ್ನುಳಿದಂತೆ ರೈತರು ಅದಕ್ಕಾಗಿಯೇ ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ಮಾನ್ಸೂನ್‌ ಮಾರುತದ ವಿಳಂಬವಾಗುವ ನಿರೀಕ್ಷೆ ಇರುವುದರಿಂದ ಜೂನ್‌ 4ರಂದು ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ನೈಋತ್ಯ ಮುಂಗಾರು ಸಾಮಾನ್ಯವಾಗಿ ಜೂನ್‌ 1 ರಂದು ಕೇರಳ ಪ್ರವೇಶಿಸುತ್ತದೆ ಮತ್ತು ಸುಮಾರು ಒಂದು ವಾರ ಏರುಪೇರು ಆಗುವ ಸಾಧ್ಯತೆ ಕೂಡ ಇರುತ್ತದೆ.

ಇದನ್ನೂ ಓದಿ : ವಿಧಾನಸೌಧದ ಅಂಗಳದಲ್ಲೇ ಇದ್ಯಾ ಸರಕಾರದ ಅವಧಿ ನಿರ್ಧರಿಸೋ ಶಕ್ತಿ: ಇದು ರಾಜಕಾರಣದ EXCLUSIVE STORY

ಇದನ್ನೂ ಓದಿ : Exclusive : ಸಿಎಂ ಜೊತೆ ಸಚಿವರ ಪಟ್ಟಿಯೂ ಫೈನಲ್‌ : 27 ಜಿಲ್ಲೆ 49 ಸಂಭಾವ್ಯ ಸಚಿವರು

ಅದರಲ್ಲೂ ನಮ್ಮ ದೇಶ ಕೃಷಿ ಆಧರಿತವಾಗಿದ್ದು, ಭಾರತದ ಆರ್ಥಿಕತೆಯು ಮಳೆಯನ್ನು ಅವಲಂಬಿಸಿದೆ. ದೇಶದ ಒಟ್ಟಾರೆ ವಾರ್ಷಿಕ ಮಳೆ ಪ್ರಮಾಣದಲ್ಲಿ ಶೇ.75ರಷ್ಟು ಮುಂಗಾರು ಮಳೆ ಒಳಗೊಂಡಿದೆ. ಹೀಗಾಗಿ ಈ ಮಳೆಯೇ ಸಕಾಲದಲ್ಲಿ ಬರದೇ ಇದ್ದಲ್ಲಿ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾದ್ಯತೆ ಇದೆ ಎಂದು ಮೂಲಗಳು ವರದಿ ಮಾಡಿದೆ.

ಇದನ್ನೂ ಓದಿ : ಚಿಕ್ಕಮಗಳೂರು : ಕೆಎಸ್‌ಆರ್‌ಟಿಸಿ ಬಸ್ಸಿನಲ್ಲೇ ಗರ್ಭಿಣಿಗೆ ಹೆರಿಗೆ ಮಾಡಿಸಿದ ಮಹಿಳಾ ಕಂಡಕ್ಟರ್‌

Monsoon Rain: Arrival of Monsoon Rain on June 4: What does the weather report say about rain delay?

Comments are closed.