ಬೆಂಗಳೂರು : ಕಳೆದ ಕೆಲವು ದಿನಗಳಿಂದ ಇಳಿಕೆಯನ್ನು ಕಾಣುತ್ತಿದ್ದ ಚಿನ್ನದ ದರ ಇದೀಗ ಮತ್ತೆ ಏರಿಕೆ ಕಂಡಿದೆ. ಈ ಮೂಲಕ ಆಭರಣ ಪ್ರಿಯರಿಗೆ ಚಿನಿವಾರು ಮಾರುಕಟ್ಟೆಯಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಶುಕ್ರವಾರ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಚಿನ್ನದ ಬೆಲೆ 4,690 ರೂ. ದಾಖಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 43,810 ರೂ. ಮತ್ತು 10 ಗ್ರಾಂ ಅಪರಂಜಿ ಚಿನ್ನದ ( 24 ಕ್ಯಾರಟ್) ಬೆಲೆ 47,790 ರೂ. ದಾಖಲಾಗಿದೆ. ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ 61,200 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 61,200 ರೂ. ಇದೆ.
ಇದನ್ನೂ ಓದಿ: Petrol, Diesel prices hike : ಮೂರು ದಿನಗಳಿಂದ ಗಗನದತ್ತ ಸಾಗುತ್ತಿದೆ ಪೆಟ್ರೋಲ್, ಡೀಸೆಲ್ ಬೆಲೆ
ಬೆಂಗಳೂರು: 43,810ರೂ. (22 ಕ್ಯಾರಟ್), 47,790ರೂ. ( 24 ಕ್ಯಾರಟ್), ಮಂಗಳೂರು: 43,810ರೂ. (22 ಕ್ಯಾರಟ್) 47,790 ರೂ. (24 ಕ್ಯಾರಟ್) ಮತ್ತು ಮೈಸೂರು: 43,810ರೂ. (22 ಕ್ಯಾರಟ್) 47,790ರೂ. (24 ಕ್ಯಾರಟ್) ದಾಖಲಾಗಿದೆ.
(Shock: Gold price up again)