ಅದೃಷ್ಟದ ಮನೆಯಲ್ಲಿ BSY ಆಪ್ತನಿಗೆ ಐಟಿ ಡ್ರಿಲ್‌ : ಅರವಿಂದ ಮನೆಯಲ್ಲಿ ಶೋಧ ಕಾರ್ಯ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಿಎ ಉಮೇಶ್‌ ಆಪ್ತರ ಮನೆಯ ಮೇಲೆ ಐಟಿ ದಾಳಿ ಮುಂದುವರಿದಿದೆ. ವಾಸ್ತು, ಅದೃಷ್ಟವೆಂದು ಬಾಡಿಗೆಗೆ ಉಳಿದುಕೊಂಡಿದ್ದ ಮನೆಯಲ್ಲೇ ಐಟಿ ಡ್ರಿಲ್‌ ನಡೆದಿದ್ದು, ಇದೀಗ ಉಮೇಶ್‌ ಆಪ್ತನ ಮನೆಯ ಮೇಲೆ ದಾಳಿ ಮುಂದುವರಿದಿದೆ. ಈ ನಡುವಲ್ಲೇ ಉಮೇಶ್‌ ಐಟಿ ಅಧಿಕಾರಿಗಳ ಮುಂದೆ ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ.

ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ಸರ್ಕಲ್‌ನಲ್ಲಿರುವ ಮಾಜಿ ಸಿಎಂ ಬಿಎಸ್‌ವೈ ಆಪ್ತ ಉಮೇಶ್‌ ಮನೆಯ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಸುದೀರ್ಘ ಆರು ಗಂಟೆಗೂ ಅಧಿಕ ಕಾಲ ಶೋಧ ಕಾರ್ಯವನ್ನು ಮಾಡಿದ್ದರು. ಅಲ್ಲದೇ ಇಂದು ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆಯೂ ನೋಟೀಸ್‌ ನೀಡಿದ್ದರು. ಆದ್ರಿಂದು ಉಮೇಶ್‌ ಆಪ್ತನಾಗಿರುವ ಅರವಿಂದ್‌ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ. ಅರವಿಂದ ಉಳಿದುಕೊಂಡಿರುವ ವಸಂತನಗರದ ಏಂಬೆಸಿ ಅಪಾರ್ಟ್ಮೆಂಟ್ ನ 19 ಬ್ಲಾಕ್ ಮನೆಯ ಮೇಲೆ ಐಟಿ ದಾಳಿ ನಡೆಸಿದೆ. ಅಪಾರ್ಟ್‌ಮೆಂಟ್‌ನ 1903 ಮನೆಯಲ್ಲಿ ಅರವಿಂದ್ ತಂದೆ, ತಾಯಿ, ಹೆಂಡತಿ‌ ಮಕ್ಕಳು ವಾಸವಾಗಿದ್ದಾರೆ.

ಇದೀಗ ಐಟಿ ದಾಳಿಯನ್ನು ನಡೆಸಿದ್ದು ಮಹತ್ವದ ದಾಖಲೆಗಳ ಪರಿಶೀಲನೆಯನ್ನು ನಡೆಸುತ್ತಿದೆ. ಆದರೆ‌ ಐದು ದಿನಗಳ ಹಿಂದೆಯಷ್ಟೇ ಅರವಿಂದ್‌ ದುಬೈಗೆ ತೆರಳಿದ್ದು, ಕೂಡಲೇ ಬೆಂಗಳೂರಿಗೆ ಬರುವಂತೆ ಐಟಿ ಅಧಿಕಾರಿಗಳು ಅರವಿಂದ್‌ಗೆ ಸೂಚನೆಯನ್ನು ನೀಡಿದ್ದಾರೆ. ಇನ್ನು ಅರವಿಂದ್‌ ಮನೆಯಲ್ಲಿ ಮಹತ್ವದ ದಾಖಲೆಗಳನ್ನು ಸೀಜ್‌ ಮಾಡಲಾಗಿದ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ ಬಾಷ್ಯಂ ಸರ್ಕಲ್‌ನಲ್ಲಿ ಉಮೇಶ್‌ ಉಳಿದುಕೊಂಡಿರುವ ಮನೆ ಅದೃಷ್ಟದ ಮನೆಯಂತೆ. ಈ ಮನೆಗೆ ಬಂದ ನಂತರದಲ್ಲಿಯೇ ಉಮೇಶ್‌ಗೆ ಅದೃಷ್ಟ ಕೂಡಿಬಂದಿತ್ತಂತೆ. ಬೆಂಗಳೂರಿನಲ್ಲಿಯೇ ಸ್ವತಃ ಮನೆಯಿದ್ದರೂ ಕೂಡ ಉಮೇಶ್‌ ಕಳೆದ ಕೆಲವು ವರ್ಷಗಳಿಂದಲೂ ಇದೇ ಮನೆಯಲ್ಲಿಯೇ ವಾಸವಾಗಿದ್ದಾರೆ. ಈ ಹಿಂದೆ ಮಾಜಿ ಸಚಿವರಾಗಿದ್ದ ಮಾಲೂರು ಕೃಷ್ಣಯ್ಯ ಶೆಟ್ಟಿ ಇದೇ ಮನೆಯಲ್ಲಿ ಉಳಿದುಕೊಂಡಿದ್ದರು. ಮನೆಯ ಮಾಲೀಕರು ಮಂಜುನಾಥ್‌ ಅವರ ತಂದೆ ಮಾಜಿ ಸಿಎಂ ಓರ್ವರ ಬಳಿಯಲ್ಲಿ ಆಪ್ತ ಸಹಾಯಕರಾಗಿದ್ದರು. ಈ ಹೀಗಾಗಿ ಈ ನಂಟು ಬೆಳೆದು ಬಾಡಿಗೆಗೆ ಉಳಿದುಕೊಂಡಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ : BSY ಆಪ್ತ ಉಮೇಶ್ ಆಸ್ತಿ ನೋಡಿ ಬೆಚ್ಚಿಬಿದ್ದ ಐಟಿ‌ ಅಧಿಕಾರಿಗಳು ! ಪತ್ತೆಯಾಯ್ತು 100 ಕೋಟಿ ಆಸ್ತಿ

ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿಯನ್ನು ನಡೆಸಿ ಮನೆಯಲ್ಲಿ ದಾಖಲೆಯನ್ನು ಪರಿಶೀಲನೆ ನಡೆಸಿದ್ದ ಐಟಿ ಅಧಿಕಾರಿಗಳ ಆರು ಮಂದಿಯ ತಂಡ ರಾತ್ರಿ ಮನೆಗೆ ಮತ್ತೆ ಎಂಟ್ರಿ ಕೊಟ್ಟಿತ್ತು. ನೀರಾವರಿ ಇಲಾಖೆಯಲ್ಲಿ ಬರೋಬ್ಬರಿ ೧೮ ಸಾವಿರ ಕೋಟಿ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಪ್ರಮುಖವಾಗಿ ರಾತ್ರಿಯ ದಾಳಿಯ ವೇಳೆಯಲ್ಲಿ ಉಮೇಶ್‌ ಯಾರೊಂದಿಗೆಲ್ಲಾ ಸಂರ್ಪಕದಲ್ಲಿದ್ದಾರೆ ಅನ್ನೋ ಬಗ್ಗೆಯೂ ಮಾಹಿತಿ ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸುವ ಕಾರ್ಯವನ್ನು ಮಾಡಿತ್ತು. ಮುಂಜಾನೆ ಐದು ಗಂಟೆಯ ಸುಮಾರಿಗೆ ಕೆಲ ದಾಖಲಗಳನ್ನು ವಶಕ್ಕೆ ಪಡೆದು ಮೂವರು ಅಧಿಕಾರಿಗಳು ತೆರಳಿದಿದ್ದರು. ಮನೆತಲ್ಲಿ ನೀರಾವರಿ ಟೆಂಡರ್‌ಗೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಅಂತಾ ಹೇಳಲಾಗುತ್ತಿದೆ.

ಇದನ್ನೂ ಓದಿ : IT RAID : ಐಟಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ : ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ

(IT raid continue in Bangalore )

Comments are closed.