ನವದೆಹಲಿ : (Gold Price Low) ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ. ಚಿನ್ನ ಹಾಗೂ ಬೆಳ್ಳಿಯ ದರ ಇಂದು (ಜೂನ್ 13 ) ಮಂಗಳವಾರದಂದು ಬಾರೀ ಇಳಿಕೆ ಕಂಡಿದೆ. ಕಳೆದೆರಡು ತಿಂಗಳಲ್ಲಿ ಮದುವೆ ಸಮಾರಂಭಗಳು ಹೆಚ್ಚಾಗಿರುವುದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಕಂಡು ಬಂದಿದೆ. ಇದೀಗ ಮದುವೆ ಸಮಾರಂಭಗಳು ಕಡಿಮೆಯಾಗುತ್ತಾ ಬಂದಿರುವುದರಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದೆ. ಇನ್ನು ಚಿನ್ನ ಹಾಗೂ ಬೆಳ್ಳಿಯ ಮೇಲೆ ತಮ್ಮ ಹಣವನ್ನು ಹೂಡಿಕೆ ಮಾಡುವವರಿಗೆ ಸಹಾಯವಾಗಲಿದೆ.
ಇನ್ನು ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಈ ವಾರದ ಆರಂಭದಿಂದಲೇ ಇಳಿಕೆ ಕಂಡಿದೆ. ಸದ್ಯ ದೇಶದಲ್ಲಿ 10 ಗ್ರಾಮ್‌ನ 22 ಕ್ಯಾರೆಟ್ ಚಿನ್ನದ ಬೆಲೆ 55500 ರೂಪಾಯಿ ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 60550 ರೂಪಾಯಿ ಆಗಿದೆ. 100 ಗ್ರಾಮ್‌ನ ಬೆಳ್ಳಿ ಬೆಲೆ 7450 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 55550 ರೂಪಾಯಿ ಆಗಿದೆ. ಬೆಳ್ಳಿ ಬೆಲೆ 100 ಗ್ರಾಮ್‌ಗೆ 7575 ರೂಪಾಯಿ ಇರುತ್ತದೆ. ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಈ ಕೆಳಗಿನಂತಿದೆ.
ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿರುವ 22 ಕ್ಯಾರೆಟ್ ಚಿನ್ನದ ಬೆಲೆ (10ಗ್ರಾಮ್) ವಿವರ :
- ಬೆಂಗಳೂರು : ರೂ. 55450
- ಚೆನ್ನೈ : ರೂ. 55800
- ಮುಂಬೈ : ರೂ. 55400
- ದೆಹಲಿ : ರೂ. 55450
- ಕೋಲ್ಕತ್ತಾ : ರೂ. 55400
- ಕೇರಳ : ರೂ. 55400
- ಅಹ್ಮದಬಾದ್ : ರೂ. 55450
- ಜೈಪುರ : ರೂ. 55550
- ಲಕ್ನೋ : ರೂ. 55550
- ಭುವನೇಶ್ವರ್ : ರೂ. 55400
ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿ ಬೆಳ್ಳಿ ಬೆಲೆ (100ಗ್ರಾಮ್) ವಿವರ :
- ಬೆಂಗಳೂರು : ರೂ. 7575
- ಚೆನ್ನೈ : ರೂ. 7930
- ಮುಂಬೈ : ರೂ. 7430
- ದೆಹಲಿ : ರೂ. 7430
- ಕೋಲ್ಕತ್ತಾ : ರೂ. 7430
- ಕೇರಳ : ರೂ. 7930
- ಅಹ್ಮದಾಬಾದ್ : ರೂ. 7430
- ಜೈಪುರ : ರೂ. 7430
- ಲಕ್ನೋ : ರೂ. 7430
- ಭುವನೇಶ್ವರ್ : ರೂ. 7930
ಇದನ್ನೂ ಓದಿ : UPI Payment In Gulf Countries : ಗಲ್ಫ್ ರಾಷ್ಟ್ರಗಳಿಗೂ ವಿಸ್ತರಣೆಯಾಗಲಿದೆ UPI ಪಾವತಿ : ಅನಿವಾಸಿಗರಿಗೆ ಹಣ ಪಾವತಿ ಇನ್ನು ಸುಲಭ
ಇನ್ನು ಅನ್ವಯವಾಗುವ ಎಲ್ಲಾ ತೆರಿಗೆಗಳು ಮತ್ತು ಶುಲ್ಕಗಳು ಸೇರಿದಂತೆ ನಿಜವಾದ ದರಗಳನ್ನು ಪಡೆಯಲು ಗ್ರಾಹಕರು ತಮ್ಮ ಸ್ಥಳೀಯ ಆಭರಣ ಅಂಗಡಿಗಳಿಗೆ ಭೇಟಿ ನೀಡಲು ಸಲಹೆ ನೀಡಲಾಗುತ್ತದೆ. ಗ್ರಾಹಕರು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಪಾವತಿಸಬೇಕಾದ ಅಂತಿಮ ಬೆಲೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಭಾರತದಲ್ಲಿ ಚಿನ್ನದ ಬೆಲೆಗಳು ಮಾರುಕಟ್ಟೆಯನ್ನು ಅವಲಂಬಿಸಿವೆ. ಬಾಷ್ಪಶೀಲ ನೀತಿಗಳು, ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಯುಎಸ್ ಡಾಲರ್ ಎದುರು ರೂಪಾಯಿಯ ಬಲ ಸೇರಿದಂತೆ ಹಲವಾರು ಅಂಶಗಳಿಂದ ಬೆಲೆಗಳನ್ನು ನಿರ್ಧರಿಸಲಾಗುತ್ತದೆ.
Gold Price Low: Sweet news for jewelery lovers: Gold and silver prices have come down heavily