Janardhana Reddy couple : ಆಸ್ತಿ ಜಪ್ತಿಗೆ ಸಿಬಿಐ ವಿಶೇಷ ಕೋರ್ಟ್ ಆದೇಶ : ಮತ್ತೆ ಸಂಕಷ್ಟದಲ್ಲಿ ಜನಾರ್ದನ ರೆಡ್ಡಿ ದಂಪತಿ

ಬೆಂಗಳೂರು : (Janardhana Reddy couple) ಗಣಿದಣಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮೀ ಅರುಣಾ ರೆಡ್ಡಿ ಅವರಿಗೆ ಸೇರಿದ ಆಸ್ತಿ ಜಪ್ತಿ ಮಾಡುವಂತೆ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದ್ದು, ಕ್ರಿಮಿನಲ್‌ ಕೇಸ್‌ ಮುಗಿಯುವವರೆಗೂ ಒಟ್ಟು 77 ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದೆ. ಈ ಮೂಲಕ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮೀ ಅರುಣಾ ರೆಡ್ಡಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ವರ್ಷ ಸಿಬಿಐ ತೆಲಂಗಾಣ, ಆಂಧ್ರಪ್ರದೇಶದಲ್ಲಿರುವ ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿಯನ್ನು ಕೇಳಿತ್ತು. ಆದರೆ ಕರ್ನಾಟಕ ಸರಕಾರ ಆಸ್ರಿ ಜಪ್ತಿಗೆ ಅನುಮತಿಯನ್ನು ನೀಡದ ಹಿನ್ನೆಲೆಯಲ್ಲಿ ಸಿಬಿಐ ಕೋರ್ಟ್‌ ಮೆಟ್ಟಿಲೇರಿತ್ತು. ಆದರೆ ಹೈಕೋರ್ಟ್‌ ಚಾಟಿ ಬೀಸಿದ ನಂತರದಲ್ಲಿ ಬಸವರಾಜ್‌ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರ 2023ರ ಜನವರಿ 12 ರಂದು ಜನಾರ್ದನ ರೆಡ್ಡಿ ಅವರ ಆಸ್ತಿ ಜಪ್ತಿಗೆ ಅನುಮತಿಯನ್ನು ನೀಡಿತ್ತು.

ನ್ಯಾಯಾಲಯದ ಆದೇಶದ ಬೆನ್ನಲ್ಲೇ ರಾಜ್ಯ ಗೃಹ ಇಲಾಖೆ ಜನಾರ್ದನ ರೆಡ್ಡಿ ಅವರ ಆಸ್ತಿ ಜಪ್ತಿಗೆ ಅನುಮತಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ ರೆಡ್ಡಿ ಅವರಿಗೆ ಸೇರಿದ ಒಟ್ಟು 124 ಆಸ್ತಿ ಜಪ್ತಿಗೆ ಅನುಮತಿ ಕೋರಿದ್ದರೂ ಕೂಡ ಸಿಬಿಐ ವಿಶೇಷ ನ್ಯಾಯಾಲಯ ಇದೀಗ 77 ಆಸ್ತಿಗಳ ಜಪ್ತಿಗೆ ಅನುಮತಿಯನ್ನು ನೀಡಿ ಆದೇಶ ಹೊರಡಿಸಿದೆ.

ಅಕ್ರಮ ಗಣಿಗಾರಿಗೆ ಆರೋಪದ ಹಿನ್ನೆಲೆಯಲ್ಲಿ ಜೈಲುಪಾಲಾಗಿದ್ದ ಜನಾರ್ದನ ರೆಡ್ಡಿ ಅವರು ತಮ್ಮ ಮೇಲಿರುವ ಹಲವು ಪ್ರಕರಣಗಳಲ್ಲಿ ಗೆಲುವು ಕಂಡಿದ್ದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಜನಾರ್ದನ ರೆಡ್ಡಿ ಜೈಲು ಸೇರುತ್ತಲೇ ಪಕ್ಷದಿಂದ ಬಿಜೆಪಿ ವಜಾಗೊಳಿಸಿತ್ತು. ಕಳೆದ ಎರಡು ಚುನಾವಣೆಗಳಿಂದಲೂ ದೂರ ಉಳಿದಿದ್ದ ಜನಾರ್ದನ ರೆಡ್ಡಿ ಈ ಬಾರಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ದರು. ಅಲ್ಲದೇ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಜನಾರ್ದನ ರೆಡ್ಡಿ ಗೆಲ್ಲುವ ಮೂಲಕ ಮತ್ತೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ.

ಇದನ್ನೂ ಓದಿ : Telangana Murder Case : ಬಾಲಕಿ ಕಣ್ಣಿಗೆ ಸ್ಕ್ರೂಡ್ರೈವರ್, ಗಂಟಲು ಸೀಳಿ ಕೊಲೆಗೈದ ಅಪರಿಚಿತ ವ್ಯಕ್ತಿ

ಅಕ್ರಮಗಣಿಗಾರಿಕೆ, ಓಬಳಾಪುರಂ ಮೈನಿಂಗ್‌ ಕಂಪೆನಿ ಪ್ರಕಣದಲ್ಲಿ ಜಾಮೀನು ಪಡೆಯಲು ಲಂಚ ಆಮಿಷ ಆರೋಪದ ಗುರುತರ ಆರೋಪವಿದ್ದರೂ ಕೂಡ ಜನರ್ದನ ರೆಡ್ಡಿ ಅವರು ತಮ್ಮ ಮಗಳ ಬ್ರಾಹ್ಮಿಣಿಯ ವಿವಾಹವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಆಚರಿಸುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಜನಾರ್ದನ ರೆಡ್ಡಿ ಅವರು ಬರೋಬ್ಬರಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ತಮ್ಮ ಮಗಳ ಮದುವೆಯನ್ನು ನೆರವೇರಿಸಿದ್ದರು.

CBI special court order for confiscation of property: Janardhana Reddy couple in trouble again

Comments are closed.