ಆಭರಣ ಪ್ರಿಯರ ಗಮನಕ್ಕೆ : ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ನವದೆಹಲಿ : ದೇಶದಾದ್ಯಂತ ಜನರು ಹೋಳಿ ಹಬ್ಬದ ಬಣ್ಣದ ರಂಗಿನ ಖುಷಿಯಲ್ಲಿದ್ದಾರೆ. ಇವರ ಖುಷಿಗೆ ಇನ್ನಷ್ಟು ಮೆರುಗು ನೀಡಲಿದೆ. ಯಾಕೆಂದರೆ ಇಂದು (ಮಾರ್ಚ್‌ 8) ಬುಧವಾರ ಚಿನ್ನದ ಬೆಲೆಯಲ್ಲಿ (Gold price today in India) ಭಾರೀ ಕುಸಿತ ಕಂಡಿದ್ದು, ಆಭರಣ ಪ್ರಿಯರಿಗೆ ಸಿಹಿ ಸುದ್ದಿಯಾಗಿ ಪರಿಣಮಿಸಿದೆ. ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಏರಿಳಿತವನ್ನು ಕಂಡಿತ್ತು. ಆದ್ರೀಗ ಏರಿಳಿತದ ನಡುವೆ ಚಿನ್ನಾಭರಣದ ಬೆಲೆ ಹಬ್ಬದ ದಿನದಂದು ಇಳಿಕೆಯನ್ನು ಕಂಡಿದೆ. ಮದುವೆ ಹಾಗೂ ಹಬ್ಬದ ವೇಳೆ ಜನರು ಚಿನ್ನ ಖರೀದಿಗೆ ಆಸಕ್ತಿ ತೋರಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು ಎಂಬುದನ್ನು ಆಭರಣ ಪ್ರಿಯರಿಗಾಗಿ ಇಲ್ಲಿ ನೀಡಲಾಗಿದೆ.

ಭಾರತದಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 51,000 ರೂ. ಆಗಿದ್ದು, ನಿನ್ನೆ 51,650 ರೂ.ವರೆಗೆ ಬೆಲೆ ಇತ್ತು. ಇಂದು ಅದೇ ಪ್ರಮಾಣದ 24 ಕ್ಯಾರೆಟ್ ಚಿನ್ನದ ಬೆಲೆ ರೂ.55,630 ಆಗಿದ್ದು, ನಿನ್ನೆ ರೂ.56,350 ಬೆಲೆಯಾಗಿದ್ದು, ನಿನ್ನೆ ಬೆಲೆಗೆ ಹೋಲಿಸಿದರೆ ಇಂದು ಇಳಿಕೆ ಆಗಿದೆ. ಗುಡ್‌ ರಿರ್ಟನ್ಸ್ ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಇಂದು (ಮಾರ್ಚ್‌ 8) ರಂದು ಟಾಪ್ ಭಾರತದ ವಾಣಿಜ್ಯ ನಗರಗಳಲ್ಲಿ ಚಿನ್ನದ ಬೆಲೆಗಳು ಈ ಕೆಳಗಿನಂತೆ ಇರುತ್ತದೆ.

ಭಾರತದ ಪ್ರಮುಖ ನಗರಗಳಲ್ಲಿ 22ಕ್ಯಾರೆಟ್ ಚಿನ್ನದ ಹಾಗೂ 24 ಕ್ಯಾರೆಟ್ ಚಿನ್ನದ ದರಗಳ ವಿವರ :

ನಗರದ ಹೆಸರು 22 ಕ್ಯಾರೆಟ್ 24 ಕ್ಯಾರೆಟ್

  • ಚೆನ್ನೈ ರೂ. 52,000 ರೂ. 56,730
  • ಮುಂಬೈ ರೂ. 51,150 ರೂ.55,630
  • ದೆಹಲಿ ರೂ. 51,150 ರೂ. 55,780
  • ಕೋಲ್ಕತ್ತಾ ರೂ. 51,000 ರೂ. 55,630
  • ಬೆಂಗಳೂರು ರೂ. 51,050 ರೂ. 55,680
  • ಹೈದರಾಬಾದ್ ರೂ. 51,000 ರೂ. 55,630
  • ಸೂರತ್ ರೂ. 51,050 ರೂ. 55,680
  • ಪುಣೆ ರೂ. 51,000 ರೂ. 55,630
  • ವಿಶಾಖಪಟ್ಟಣಂ ರೂ. 51,000 ರೂ. 55,630
  • ಅಹಮದಾಬಾದ್ ರೂ. 51,050 ರೂ. 55,680
  • ಲಕ್ನೋ ರೂ. 51,150 ರೂ. 55,780
  • ನಾಸಿಕ್ ರೂ. 51,030 ರೂ. 56,660

ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರದ ವಿವರ :

ನಗರದ ಹೆಸರು ಬೆಳ್ಳಿ (ಪ್ರತಿ ಕೆಜಿಗೆ)

  • ನವ ದೆಹಲಿ ರೂ. 67,000
  • ಮುಂಬೈ ರೂ. 67,000
  • ಕೋಲ್ಕತ್ತಾ ರೂ. 67,000
  • ಚೆನ್ನೈ ರೂ. 70,000

ಇದನ್ನೂ ಓದಿ : ಪಿಂಚಣಿದಾರರ ಗಮನಕ್ಕೆ : ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಮೇ 3 ರವರೆಗೆ ಅವಧಿ ವಿಸ್ತರಿಸಿದ ಇಪಿಎಫ್‌ಒ

ಇದನ್ನೂ ಓದಿ : ಇಪಿಎಫ್‌ಒ ಬಡ್ಡಿದರದ ಬಗ್ಗೆ ಸಿಬಿಟಿಯಿಂದ ಮಾರ್ಚ್ 25ಕ್ಕೆ ಮಹತ್ವದ ಘೋಷಣೆ

ಇದನ್ನೂ ಓದಿ : ಗ್ರಾಹಕರ ಗಮನಕ್ಕೆ : ಗೃಹಸಾಲ ಬಡ್ಡಿದರ ಇಳಿಕೆ ಯಾವ ಬ್ಯಾಂಕ್‌ ಗೊತ್ತಾ ?

ಸ್ಥಳೀಯ ಬೆಲೆಗಳು ಇಲ್ಲಿ ತೋರಿಸಿದ್ದಕ್ಕಿಂತ ಭಿನ್ನವಾಗಿರಬಹುದು. ಪಟ್ಟಿಮಾಡಲಾದ ಕೋಷ್ಟಕವು TDS, GST ಮತ್ತು ಇತರ ತೆರಿಗೆಗಳನ್ನು ಸೇರಿಸದೆಯೇ ಡೇಟಾವನ್ನು ತೋರಿಸುತ್ತದೆ. ಮೇಲೆ ತಿಳಿಸಿದ ಪಟ್ಟಿಯು ಭಾರತದಾದ್ಯಂತ ವಿವಿಧ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ ಮತ್ತು 24-ಕ್ಯಾರೆಟ್ ಚಿನ್ನಕ್ಕೆ ದಿನದ ಚಿನ್ನದ ಬೆಲೆಗಳು ಆಗಿರುತ್ತದೆ. ಅಬಕಾರಿ ಸುಂಕ, ಮೇಕಿಂಗ್ ಶುಲ್ಕಗಳು ಮತ್ತು ರಾಜ್ಯ ತೆರಿಗೆಗಳಂತಹ ಕೆಲವು ನಿಯತಾಂಕಗಳನ್ನು ಆಧರಿಸಿ ದೇಶದ ವಿವಿಧ ಪ್ರದೇಶಗಳಿಗೆ ಚಿನ್ನದ ಬೆಲೆ ಬದಲಾಗುತ್ತದೆ.

Gold price today in India : Attention of jewelery lovers : Huge decrease in gold price

Comments are closed.