ಬೆಂಗಳೂರು : ಉಕ್ರೇನ್ ಹಾಗೂ ರಷ್ಯಾ ಸಂಘರ್ಷದ ನಡುವಲ್ಲೇ ಏರಿಕೆ ಕಂಡಿದ್ದ ಚಿನ್ನಾಭರಣದ ಬೆಲೆಯಲ್ಲಿ ಇದೀಗ ದಿಢೀರ್ ಇಳಿಕೆ ಕಂಡಿದೆ. ಭಾರತದಲ್ಲಿ ಒಂದೇ ದಿನದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆ (Silver Price) ಇಂದು 4,700 ರೂ. ಇಳಿಕೆ ಕಂಡು ದಾಖಲೆ ಬರೆದಿದೆ. ಅಲ್ಲದೇ ಚಿನ್ನದ ದರದಲ್ಲಿಯೂ ಇಳಿಕೆಯಾಗಿದ್ದು, 10 ಗ್ರಾಂ ಚಿನ್ನಕ್ಕೆ 340 ರೂ. ಕುಸಿತವಾಗಿದೆ. ಹಾಗಾದ್ರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ (Gold Price Today) ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಅನ್ನೋ ಮಾಹಿತಿ ಇಲ್ಲಿದೆ.
ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ, ಕೋಲ್ಕತ್ತಾ, ಹೈದ್ರಾಬಾದ್ ಸೇರಿದಂತೆ ಹಲವು ಮಹಾನಗರಗಳಲ್ಲಿ ಚಿನ್ನಾಭರಣದ (Gold Price Today) ದರವು ಇಳಿಕೆಯನ್ನು ಕಂಡಿದೆ. ದೆಹಲಿ- 48,100 ರೂ, ಕೊಲ್ಕತ್ತಾ- 48,100 ರೂ, ಬೆಂಗಳೂರು- 48,100 ರೂ, ಹೈದರಾಬಾದ್- 48,100 ರೂ, ಕೇರಳ- 48,100 ರೂ, ಪುಣೆ- 48,200 ರೂ, ಚೆನ್ನೈ- 48,690 ರೂ. ಮುಂಬೈ- 48,100 ರೂ, ಮಂಗಳೂರು- 48,100 ರೂ, ಮೈಸೂರು- 48,100 ರೂ.ಗಳಿಗೆ ಇಳಿಕೆಯನ್ನು ಕಂಡಿದೆ. ಇನ್ನು 24 ಕ್ಯಾರೆಟ್ ಚಿನ್ನದ (Gold Price Today)ದರವನ್ನು ಗಮನಿಸುವುದಾದ್ರೆ, ಚೆನ್ನೈ- 53,120 ರೂ, ಮುಂಬೈ- 52,470 ರೂ, ದೆಹಲಿ- 52,470 ರೂ, ಕೊಲ್ಕತ್ತಾ- 52,470 ರೂ, ಬೆಂಗಳೂರು- 52,470 ರೂ, ಹೈದರಾಬಾದ್- 52,470 ರೂ, ಕೇರಳ- 52,470 ರೂ, ಪುಣೆ- 52,570 ರೂ, ಮಂಗಳೂರು- 52,470 ರೂ, ಮೈಸೂರು- 52,470 ರೂ.ಗಳಿಗೆ ಇಳಿಕೆಯಾಗಿದೆ.
ಚಿನ್ನದ ಜೊತೆಗೆ ಬೆಳ್ಳಿಯ ದರದಲ್ಲಿಯೂ ಇಳಿಕೆ ಕಂಡಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 74,700 ರೂ. ಇದ್ದುದು 70,000 ರೂ. ಆಗಿದೆ. ದಾಖಲೆಯ ಮಟ್ಟಕ್ಕೇರಿದ್ದ ಬೆಳ್ಳಿ ಬೆಲೆ ಒಂದೇ ದಿನದಲ್ಲಿ ಭಾರೀ ಕುಸಿತ ಕಂಡಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು (Gold Price Today) ಗಮನಿಸುವುದಾದರೆ, ಬೆಂಗಳೂರು- 74,200 ರೂ, ಮೈಸೂರು- 74,200 ರೂ., ಮಂಗಳೂರು- 74,200 ರೂ., ಮುಂಬೈ- 70,000 ರೂ, ಚೆನ್ನೈ- 74,200 ರೂ, ದೆಹಲಿ- 70,000 ರೂ, ಹೈದರಾಬಾದ್- 74,200 ರೂ, ಕೊಲ್ಕತ್ತಾ- 70,000 ರೂ. ಇದೆ.
ಇದನ್ನೂ ಓದಿ : ಐಸಿಐಸಿಐ ಬ್ಯಾಂಕ್ ಬಡ್ಡಿದರ ಪರಿಷ್ಕರಣೆ : ಗ್ರಾಹಕರಿಗೆ ಇಲ್ಲಿದೆ ಗುಡ್‌ನ್ಯೂಸ್
ಇದನ್ನೂ ಓದಿ : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಮಾರ್ಚ್‌ನಲ್ಲೇ 7 ದಿನ ಬ್ಯಾಂಕ್ ರಜೆ
( Good News : Gold Price Today March 15 Gold and Silver Rates )