The Kashmir Files Controversy : ಕನ್ನಡಿಗರ ತೆರಿಗೆ ಹಣ ಹಿಂದಿ ಸಿನಿಮಾಕ್ಕೆ : ಸಿಎಂ ನಿರ್ಧಾರಕ್ಕೆ ಕನ್ನಡಿಗರ ಆಕ್ರೋಶ

ಬೆಂಗಳೂರು : ಒಂದೆಡೆ ಕಾಶ್ಮೀರಿ ಫೈಲ್ಸ್ ಸಿನಿಮಾ ಯಶಸ್ವಿ ಪ್ರದರ್ಶನ‌ ಕಾಣುತ್ತಿದ್ದು, ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆಯುತ್ತಿದೆ. ಇನ್ನೊಂದೆಡೆ ಸಿನಿಮಾಕ್ಕೆ ಸೋಷಿಯಲ್ ಮೀಡಿಯಾದಲ್ಲೂ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು ವಾದ ಪ್ರತಿವಾದದ ವೇದಿಕೆಯಾಗಿ ಸೋಷಿಯಲ್ ಮೀಡಿಯಾ ಬದಲಾಗುತ್ತಿದೆ. ಈ ಮಧ್ಯೆ ಬಿಜೆಪಿ ಪಕ್ಷದ ಮಟ್ಟದಲ್ಲಿ ಸಿನಿಮಾ ಬೆಂಬಲಿಸುವಂತೆ ಸೂಚನೆ ನೀಡಿದ್ದು, ಕರ್ನಾಟಕದಲ್ಲಂತೂ ಸಿನಿಮಾ ಗೆ ತೆರಿಗೆ ವಿನಾಯ್ತಿಯೇ ಘೋಷಣೆಯಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಈಗ ಕನ್ನಡಪರ ಸಂಘಟನೆಗಳ ವಿರೋಧ (The Kashmir Files Controversy) ವ್ಯಕ್ತವಾಗಿದೆ.

ರವಿವಾರ ಸಂಜೆ ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಕಾರ್ಯಬಾಹುಳ್ಯದ ನಡುವೆಯೂ ದಿ‌ ಕಾಶ್ಮೀರಿ ಫೈಲ್ಸ್ ( The Kashmir Files) ಸಿನಿಮಾ ವೀಕ್ಷಣೆಗೆ ತೆರಳಿದ್ದರು. ಅಲ್ಲದೇ ಹೈಕಮಾಂಡ್ ಸೂಚನೆ ಮೇರೆಗೆ ಸಿನಿಮಾ ವೀಕ್ಷಣೆಗೆ ತೆರಳುತ್ತಿರೋದಾಗಿ ಹೇಳಿಕೊಂಡಿದ್ದರು. ಸಿನಿಮಾ ನೋಡಿದ ಬಳಿಕ ಟ್ವೀಟ್ ಮಾಡಿದ್ದ ಸಿಎಂ ಬೊಮ್ಮಾಯಿ ಈ ಸಿನಿಮಾ ಕಾಶ್ಮೀರದಲ್ಲಿ ನಡೆದ ಹಿಂಸಾತ್ಮಕ ಸಂಗತಿಯನ್ನು ಬಿಚ್ಚಿಟ್ಟಿದೆ. ಇದು ರಕ್ತ ಕುದಿಯುವಂತೆ ಮಾಡುವಂತಿದೆ. ಈ ಸಿನಿಮಾವನ್ನು ಎಲ್ಲ ಕನ್ನಡಿಗರು ನೋಡಬೇಕು. ಹೀಗಾಗಿ ಈ ಸಿನಿಮಾಗೆ ತೆರಿಗೆ ವಿನಾಯ್ತಿ ಘೋಷಿಸುತ್ತಿದ್ದೇನೆ ಎಂದಿದ್ದರು.

ಸಿಎಂ ಈ‌ ನಿರ್ಧಾರಕ್ಕೆ ಈಗ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಮಾಜದ ಸ್ವಾಸ್ಥ್ಯ ಕದಡುವ ಕಿಡಿಗೇಡಿ ಸಿನಿಮಾಗಳಿಗೆ ತೆರಿಗೆ ವಿನಾಯ್ತಿ ನೀಡಬಾರದು ಎಂದು ಕರ್ನಾಟಕ ರಣಧೀರ ಪಡೆ ಆಕ್ರೋಶ ವ್ಯಕ್ತಪಡಿಸಿದೆ. ದಿ ಕಾಶ್ಮೀರಿ ಫೈಲ್ಸ್ ( The Kashmir Files) ಎಂಬ ಸಿನಿಮಾ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನದ ಸಿನಿಮಾ. ಇದಕ್ಕೆ ತೆರಿಗೆ ವಿನಾಯ್ತಿ‌ ನೀಡಲು ಇದು, ಸಾಮಾಜಿಕ ಸಾಂಸ್ಕೃತಿಕ ಕ್ರಾಂತಿಯ ಸಿನಿಮಾವಲ್ಲ.ಜನರ ನಡುವೆ ಅಪನಂಬಿಕೆ ಮೂಡಿಸುವ ಹಾಗೂ ಕೋಮು ಸಾಮರಸ್ಯ ಕದಡುವಂತಿರೋ ಈ ಸಿನಿಮಾಗೆ ತೆರಿಗೆ ವಿನಾಯ್ತಿ ನೀಡಿರೋದು ಕನ್ನಡಿಗರಿಗೆ ಮಾಡ್ತಿರೋ ದ್ರೋಹ ಎಂದು ರಣಧೀರ ಪಡೆ ಅರೋಪಿಸಿದೆ.

ಕೊರೋನಾ ನಂತರ ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ. ಕಾರ್ಮಿಕರು,ತಂತ್ರಜ್ಞರು ಕಷ್ಟದಲ್ಲಿದ್ದಾರೆ. ಆದರೆ ಕನ್ನಡ ಸಿನಿಮಾಗಳಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ‌ ಸ್ಪಂದಿಸಲು ಸಿಎಂಗೆ ಮನಸ್ಸಾಗಲಿಲ್ಲ. ಆದರೆ ಈ ಹಿಂದಿ ಸಿನಿಮಾಗೆ ಸಿಎಂ ತೆರಿಗೆ ವಿನಾಯ್ತಿ ನೀಡಿರೋದರ ಹಿಂದೆ ಪಕ್ಷದ ಹೈಕಮಾಂಡ್ ಹಾಗೂ ಆರ್.ಎಸ್.ಎಸ್. ಮನವೊಲಿಸೋ ಹುನ್ನಾರವಿದೆ ಎಂದು ರಣಧೀರ್ ಪಡೆ ಹಾಗೂ ಹಲವು ಕನ್ನಡಪರ ಸಂಘಟನೆ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಸಿಎಂ ಕನ್ನಡಿಗರ ತೆರಿಗೆ ಹಣವನ್ನು ಹೀಗೆ ವ್ಯಯಿಸೋದು ಸರಿಯಲ್ಲ. ಮುಂದೇ ಹೀಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜ್ಯದ ಹಿತ ಬಲಿಕೊಟ್ಟರೇ ಹೋರಾಟ ಎದುರಿಸಬೇಕಾಗುತ್ತದೆ ಎಂದು ರಣಧೀರ್ ಪಡೆ ಎಚ್ಚರಿಸಿದೆ.

ಇದನ್ನೂ ಓದಿ : ದಿ‌ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ : ಸಿಎಂ ಬಸವರಾಜ್‌ ಬೊಮ್ಮಾಯಿ

ಇದನ್ನೂ ಓದಿ : The Kashmir Files : ದಿ ಕಾಶ್ಮೀರಿ ಫೈಲ್ಸ್‌ ಮೂರು ದಿನದಲ್ಲೇ ದಾಖಲೆಯ ಗಳಿಕೆ

(The Kashmir Files Controversy film Subsidy Kannadiga’s outrage over CM decision)

Comments are closed.