Gold Rate Today : ಬಂಗಾರ ಪ್ರಿಯರಿಗೆ ಶಾಕ್‌ ; 53,000 ರೂ. ಕ್ಕೇರಿದ ಚಿನ್ನದ ದರ

ನವದೆಹಲಿ : ಭಾರತದಲ್ಲಿ ಚಿನ್ನದ ದರ (Gold Rate Today) ಇಂದು 24 ಕ್ಯಾರೆಟ್‌ ಚಿನ್ನದ ಬೆಲೆ ಕೆಜಿಗೆ 52,800 ರೂ. ಹಳದಿ ಲೋಹದ ಬೆಲೆಯಲ್ಲಿ ಬಾರೀ ಏರಿಕೆ ಕಂಡಿದೆ. ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷವೇ ಕಾರಣ ಎನ್ನಲಾಗುತ್ತಿದೆ. ಕಾರಣ. ಭಾರತದಲ್ಲಿ 22-ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 49,700 ರೂ ಮತ್ತು 24 ಕ್ಯಾರೆಟ್‌ಗೆ 54,220 ರೂಪಾಯಿಗೆ ಏರಿಕೆ ಕಂಡಿದೆ.

ಉಕ್ರೇನ್‌ ಸಂಘರ್ಷ ಆರಂಭವಾಗುತ್ತಿದ್ದಂತೆಯೇ ಹೂಡಿಕೆದಾರರು ಷೇರಿನ ಮೇಲೆ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಮಹಾ ಪತನವಾಗಿದ್ದು, ನಿಷ್ಟಿಯಲ್ಲಿ ಬಾರೀ ಇಳಿಕೆ ಕಂಡಿದೆ. ಷೇರು ಮಾರುಕಟ್ಟೆಯ ಮೇಲೆ ಹೂಡಿಕೆ ಮಾಡಲು ಹಿಂಜರಿಯುತ್ತಿರುವ ಹೂಡಿಕೆದಾರರು ಇದೀಗ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವುದೇ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಯುದ್ದದ ಹಿನ್ನೆಲೆಯಲ್ಲಿ ಈಗಾಗಲೇ ಅಮೇರಿಕಾ, ಬ್ರಿಟನ್‌ ಸೇರಿದಂತೆ ಹಲವು ರಾಷ್ಟ್ರಗಳು ಆರ್ಥಿಕ ದಿಗ್ಬಂದನ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ರಷ್ಯಾದಿಂದ ಚಿನ್ನ ರಫ್ತು ಆಗುತ್ತಿಲ್ಲ. ಜೊತೆಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಯೂ ಚಿನ್ನದ ದರದಲ್ಲಿ ಏರಿಕೆ ಕಾಣುತ್ತಿದೆ.

Gold Rate Today : ನಿಮ್ಮ ನಗರದ ಚಿನ್ನದ ದರ ಇಲ್ಲಿ ಪರಿಶೀಲಿಸಿ

ನಗರ 22 ಕ್ಯಾರೆಟ್ ಚಿನ್ನ 24 ಕ್ಯಾರೆಟ್ ಚಿನ್ನ

ಚೆನ್ನೈ 49,700 54,220
ಮುಂಬೈ 48,400 52,800
ದೆಹಲಿ 48,400 52,800
ಕೋಲ್ಕತ್ತಾ 48,400 52,800
ಬೆಂಗಳೂರು 48,400 52,800
ಹೈದರಾಬಾದ್ 48,400 52,800
ಕೇರಳ 48,400 52,800
ಪುಣೆ 48,450 52,850
ಬರೋಡ 48,500 52,900
ಅಹಮದಾಬಾದ್ 48,480 52,880
ಜೈಪುರ 48,550 52,950
ಲಕ್ನೋ 48,550 52,950
ಕೊಯಮತ್ತೂರು 49,700 54,220
ಮಧುರೈ 49,700 54,220
ವಿಜಯವಾಡ 48,400 52,800
ಪಾಟ್ನಾ 48,450 52,850
ನಾಗ್ಪುರ 48,500 52,900
ಚಂಡೀಗಢ 48,550 52,950
ಸೂರತ್ 48,480 52,880
ಭುವನೇಶ್ವರ್ 48,400 52,800
ಮಂಗಳೂರು 48,400 52,800
ವಿಶಾಖಪಟ್ಟಣಂ 48,400 52,800
ನಾಸಿಕ್ 48,450 52,850
ಮೈಸೂರು 48,400 52,800

ಇದನ್ನೂ ಓದಿ : Jio World Centre : ಮಾಯಾನಗರಿಯಲ್ಲಿ ತಲೆ ಎತ್ತಲಿದೆ ಜಿಯೋ ವರ್ಲ್ಡ್ ಸೆಂಟರ್ : ಏನಿದರ ವಿಶೇಷತೆ ಗೊತ್ತಾ !

ಇದನ್ನೂ ಓದಿ : Cooking Oil Price : ಕೈ ಸುಡುತ್ತಿದೆ ಅಡುಗೆ ಎಣ್ಣೆ, 200 ರೂಪಾಯಿ ಗಡಿದಾಟಿದ ಕುಕ್ಕಿಂಗ್ ಆಯಿಲ್

(Gold Rate Today Gold Prices Near Rs 53000 Check Latest Gold Rates In Your City)

Comments are closed.