Gold Silver Price : ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡ ಚಿನ್ನದ ಬೆಲೆ : ಬೆಳ್ಳಿ ಬೆಲೆ ತುಸು ಅಗ್ಗ

ಬೆಂಗಳೂರು : ಆಭರಣ ಪ್ರಿಯರಿಗೆ ಚಿನ್ನ, ಬೆಳ್ಳಿ (Gold Silver Price) ಖರೀದಿಗೆ ಯಾವ ಸಮಯಕ್ಕಿಂತ ಹೆಚ್ಚಾಗಿ ಬೆಲೆ ಇಳಿಕೆ ಮುಖ್ಯವಾಗಿರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ಥಿರತೆಯನ್ನು ಕಾಪಾಡಿಕೊಂಡಿದ್ದು, ಬೆಳ್ಳಿ ಬೆಲೆ ಇತರ ದಿನಗಳಿಗಿಂತ ಅಗ್ಗವಾಗಿದೆ. ಮದುವೆ ಸಮಾರಂಭಗಳು ಮುಗಿದ್ದು, ಹಬ್ಬ ಹರಿದಿನಗಳು ಶುರುವಾಗಲಿದೆ. ಈ ಹೊತ್ತಲ್ಲಿ ಚಿನ್ನಾಭರಣ ಖರೀದಿದಾರರಿಗೆ ಸೂಕ್ತ ಸಮಯವಾಗಿದೆ.

ಭಾರತದಲ್ಲಿ 10 ಗ್ರಾಮ್‌ನ 22 ಕ್ಯಾರೆಟ್‌ ಚಿನ್ನದ ಬೆಲೆ 55150 ರೂ. ಆಗಿದ್ದು, 24 ಕ್ಯಾರೆಟ್‌ ಚಿನ್ನದ ಬೆಲೆ 60160 ರೂ. ಆಗಿದೆ. ಇನ್ನು 100 ಗ್ರಾಮ್‌ ಬೆಳ್ಳಿ ಬೆಲೆ 7750 ರೂಪಾಯಿ ಇರುತ್ತದೆ. ಬೆಂಗಳೂರಿನಲ್ಲಿ 10 ಗ್ರಾಮ್‌ಗೆ 55150 ರೂ. ಆಗಿದ್ದು, 100 ಗ್ರಾಮ್‌ ಬೆಳ್ಳಿಗೆ 7600 ರೂಪಾಯಿಗಳಲ್ಲಿ ದೊರೆಯಲಿದೆ. ಇನ್ನು ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಈ ಕೆಳಗೆ ತಿಳಿಸಲಾಗಿದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರೆಟ್‌ ಚಿನ್ನದ ಬೆಲೆ ( 10 ಗ್ರಾಮ್‌ಗೆ) :

  • ಬೆಂಗಳೂರು : 55150
  • ಚೆನ್ನೈ : 56550
  • ಮುಂಬೈ : 55150
  • ದೆಹಲಿ : 55300
  • ಕೋಲ್ಕತ್ತಾ : 55150
  • ಕೇರಳ : 55150
  • ಅಹ್ಮದಾಬಾದ್‌ : 55200
  • ಜೈಪುರ : 55300
  • ಲಕ್ನೋ : 55300
  • ಭುವನೇಶ್ವರ್‌ : 55150

ವಿವಿಧ ನಗರಗಳ ಬೆಳ್ಳಿ ಬೆಲೆ ವಿವರ :

  • ಬೆಂಗಳೂರು : 7600
  • ಚೆನ್ನೈ : 8050
  • ಮುಂಬೈ : 7750
  • ದೆಹಲಿ : 7750
  • ಕೋಲ್ಕತ್ತಾ : 7750
  • ಕೇರಳ : 8050
  • ಅಹ್ಮದಾಬಾದ್‌ : 7750
  • ಜೈಪುರ : 7750
  • ಲಕ್ನೋ : 7750
  • ಭುವನೇಶ್ವರ್‌ : 8050

ಇದನ್ನೂ ಓದಿ : Twitter logo design : ಟ್ವಿಟ್ಟರ್ ಗೆ ಲೋಗೋ : ಹೊಸ ವಿನ್ಯಾಸ ಅನಾವರಣಗೊಳಿಸಿದ ಎಲಾನ್ ಮಸ್ಕ್

ಇದನ್ನೂ ಓದಿ : EPFO News‌ : ಇಪಿಎಫ್‌ಓ ಚಂದಾದಾರರಿಗೆ ಗುಡ್‌ ನ್ಯೂಸ್‌ : ಪ್ರೀಮಿಯಂ ಪಾವತಿಸದೆಯೇ 7 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ ಲಭ್ಯ

ಇನ್ನು ಅನ್ವಯವಾಗುವ ಎಲ್ಲಾ ತೆರಿಗೆಗಳು ಮತ್ತು ಶುಲ್ಕಗಳು ಸೇರಿದಂತೆ ನಿಜವಾದ ದರಗಳನ್ನು ಪಡೆಯಲು ಗ್ರಾಹಕರು ತಮ್ಮ ಸ್ಥಳೀಯ ಆಭರಣ ಅಂಗಡಿಗಳಿಗೆ ಭೇಟಿ ನೀಡಲು ಸಲಹೆ ನೀಡಲಾಗುತ್ತದೆ. ಗ್ರಾಹಕರು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಪಾವತಿಸಬೇಕಾದ ಅಂತಿಮ ಬೆಲೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಭಾರತದಲ್ಲಿ ಚಿನ್ನದ ಬೆಲೆಗಳು ಮಾರುಕಟ್ಟೆಯನ್ನು ಅವಲಂಬಿಸಿವೆ. ಬಾಷ್ಪಶೀಲ ನೀತಿಗಳು, ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಯುಎಸ್ ಡಾಲರ್ ಎದುರು ರೂಪಾಯಿಯ ಬಲ ಸೇರಿದಂತೆ ಹಲವಾರು ಅಂಶಗಳಿಂದ ಬೆಲೆಗಳನ್ನು ನಿರ್ಧರಿಸಲಾಗುತ್ತದೆ.

Gold Silver Price: Gold price stable in the market: Silver price is a little cheaper

Comments are closed.