ಆಭರಣ ಪ್ರಿಯರಿಗೆ ಶಾಂಕಿಂಗ್‌ ನ್ಯೂಸ್‌ : ಮತ್ತೆ ಚಿನ್ನದ ಬೆಲೆ ಏರಿಕೆ, ಬೆಳ್ಳಿ ಬೆಲೆಯಲ್ಲಿ ಸ್ಥಿರತೆ

ಬೆಂಗಳೂರು : ಮದುವೆ ಸಮಾರಂಭಗಳ ಮಾಸ ಪ್ರಾರಂಭವಾಗಿದ್ದರಿಂದ ಚಿನ್ನಾಭರಣಗಳಿಗೆ ಬೇಡಿಕೆ (Gold silver price today) ಹೆಚ್ಚಾಗಿದೆ. ಆದರೆ ನಿನ್ನೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಇಂದು ಏರಿಕೆ ಕಂಡಿದೆ. ಇನ್ನು ಬೆಳ್ಳಿ ಎರಡು ದಿನದಿಂದ ಏರಿಳಿತಗೊಳ್ಳದೇ ಸ್ಥಿರತೆಯನ್ನು ಕಾಯ್ದಿರಿಸಿಕೊಂಡಿದೆ. ದೇಶದಲ್ಲಿ ಆರ್ಥಿತ ಸ್ಥಿತಿ ಅತಂತ್ರದಲ್ಲಿರುವುದ್ದರಿಂದ ಹೂಡಿಕೆದಾರರಿಗೆ ಯಾವುದರ ಮೇಲೆ ತಮ್ಮ ಆದಾಯವನ್ನು ಹೂಡಿಕೆ ಮಾಡಬೇಕನ್ನುವ ಗೊಂದಲ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಮುಂದೆಯೂ ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ ಆಗಿದೆ.

ಮಾಹಿತಿಗಳ ಪ್ರಕಾರ, ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 61,850 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,810 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 56,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,270 ರುಪಾಯಿಯಲ್ಲಿ ಇದೆ. ವಿವಿಧ ನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆಗಳ ವಿವರಗಳನ್ನು ಈ ಕೆಳಗೆ ತಿಳಿಸಲಾಗಿದೆ.

ವಿವಿಧ ನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆಗಳ ವಿವರ :

22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​) ವಿವರ :
ಬೆಂಗಳೂರು : ರೂ. 56,750
ಚೆನ್ನೈ : ರೂ. 57,200
ಮುಂಬೈ : ರೂ. 56,700
ದೆಹಲಿ : ರೂ. 56,850
ಕೋಲ್ಕತಾ : ರೂ. 56,700
ಕೇರಳ : ರೂ. 56,700
ಅಹ್ಮದಾಬಾದ್ : ರೂ. 56,750
ಜೈಪುರ್ : ರೂ. 56,850
ಲಕ್ನೋ : ರೂ. 56,850
ಭುವನೇಶ್ವರ್ : ರೂ. 56,700

ಬೆಳ್ಳಿ ಬೆಲೆ (100 ಗ್ರಾಮ್​) ವಿವರ :
ಬೆಂಗಳೂರು : ರೂ. 8,270
ಚೆನ್ನೈ : ರೂ. 8,270
ಮುಂಬೈ : ರೂ. 7,810
ದೆಹಲಿ : ರೂ. 7,810
ಕೋಲ್ಕತಾ : ರೂ. 7,810
ಕೇರಳ : ರೂ. 8,270
ಅಹ್ಮದಾಬಾದ್ : ರೂ. 7,810
ಜೈಪುರ್ : ರೂ. 7,810
ಲಕ್ನೋ : ರೂ. 7,810
ಭುವನೇಶ್ವರ್ : ರೂ. 8,270

ಇದನ್ನೂ ಓದಿ : MAadhaar App Update : QR ಕೋಡ್ ಬಳಸಿ ನಿಮ್ಮ ಆಧಾರ್ ನಂಬರ್‌ನ್ನು ಹೀಗೆ ಪರಿಶೀಲಿಸಿ

ಇನ್ನು ಅನ್ವಯವಾಗುವ ಎಲ್ಲಾ ತೆರಿಗೆಗಳು ಮತ್ತು ಶುಲ್ಕಗಳು ಸೇರಿದಂತೆ ನಿಜವಾದ ದರಗಳನ್ನು ಪಡೆಯಲು ಗ್ರಾಹಕರು ತಮ್ಮ ಸ್ಥಳೀಯ ಆಭರಣ ಅಂಗಡಿಗಳಿಗೆ ಭೇಟಿ ನೀಡಲು ಸಲಹೆ ನೀಡಲಾಗುತ್ತದೆ. ಗ್ರಾಹಕರು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಪಾವತಿಸಬೇಕಾದ ಅಂತಿಮ ಬೆಲೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಭಾರತದಲ್ಲಿ ಚಿನ್ನದ ಬೆಲೆಗಳು ಮಾರುಕಟ್ಟೆಯನ್ನು ಅವಲಂಬಿಸಿವೆ. ಬಾಷ್ಪಶೀಲ ನೀತಿಗಳು, ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಯುಎಸ್ ಡಾಲರ್ ಎದುರು ರೂಪಾಯಿಯ ಬಲ ಸೇರಿದಂತೆ ಹಲವಾರು ಅಂಶಗಳಿಂದ ಬೆಲೆಗಳನ್ನು ನಿರ್ಧರಿಸಲಾಗುತ್ತದೆ.

Gold silver price today: Gold price rise again, stability in silver price

Comments are closed.