
ಬೆಂಗಳೂರು : ಚಿನಿವಾರುಪೇಟೆಯಲ್ಲಿ ಕುಸಿತವನ್ನು ಕಂಡಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಗಗನಕ್ಕೇರುತ್ತಿದೆ. ಕಳೆದೊಂದು ವಾರದಿಂದಲೂ ಚಿನ್ನದ ಬೆಲೆ ಇಳಿಕೆಯನ್ನು ಕಾಣುತ್ತಿರುವುದು ಗ್ರಾಹಕರಿ ಖುಷಿಕೊಟ್ಟಿತ್ತು. ಆದ್ರೀಗ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತೆ ಅನ್ನುವ ಮಾತುಗಳು ಕೇಳಿಬರುತ್ತಿದೆ.

ಚಿನಿವಾರು ಮಾರುಕಟ್ಟೆಯಲ್ಲಿ ಆಭರಣ ಚಿನ್ನ ಬೆಲೆ 10 ಗ್ರಾಂಗೆ 30 ರೂಪಾಯಿ ಏರಿಕೆ ಕಂಡಿದ್ದು, ಈ ಮೂಲಕ ಬೆಲೆ 49,700 ರೂಪಾಯಿ ಏರಿಕೆಯಾಗಿದೆ.

ಇನ್ನು 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರದಲ್ಲಿಯೂ 30 ರೂಪಾಯಿ ಏರಿಕೆ ಕಂಡಿದ್ದು, 24 ಕ್ಯಾರೆಟ್ ಚಿನ್ನದ ದರ 54,220 ರೂಪಾಯಿ ಆಗಿದೆ.

ಚಿನ್ನ ಮಾತ್ರವಲ್ಲ ಬೆಳ್ಳಿ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬೆಳ್ಳಿ ದರ ಕೆಜಿಗೆ 890 ರೂಪಾಯಿ ಏರಿಕೆ ಕಾಣುವ ಮೂಲಕ 68,900 ರೂಪಾಯಿ ಆಗಿದೆ. ಚಿನ್ನದ ದರ ಇಳಿಕೆ ಕಾಣುತ್ತಿರುವ ಸಂದರ್ಭದಲ್ಲೂ ಬೆಳ್ಳಿ ದರದಲ್ಲಿ ಏರಿಕೆ ಕಾಣುತ್ತಲೇ ಇತ್ತು.

ಒಂದೆಡೆ ಕೊರೊನಾ ಮಹಾಮಾರಿಯ ಆರ್ಭಟ ಆರ್ಥಿಕತೆಯ ಮೇಲೆ ಭಾರೀ ಹೊಡೆತವನ್ನೇ ಕೊಟ್ಟಿದೆ. ಇದು ಚಿನ್ನದ ಬೆಲೆ ಏರಿಕೆಯ ಮೇಲೆ ಗಂಭೀರ ಪರಿಣಾಮವನ್ನು ಬೀರಿದ್ದು, ಆಭರಣದ ಚಿನ್ನದ ದರ ಶೀಘ್ರದಲ್ಲಿಯೇ 55 ಸಾವಿರದ ಗಡಿದಾಟುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.