ಆಸ್ಪತ್ರೆಯಲ್ಲೇ ಕೊರೊನಾ ಸೋಂಕಿತನನ್ನು ವಿವಾಹವಾದ ಯುವತಿ !

0

ಮದುವೆ ಅನ್ನೋದು ಸ್ವರ್ಗದಲ್ಲಿಯೇ ನಿಶ್ವಯವಾಗಿರುತ್ತೆ ಅನ್ನೋ ಮಾತಿದೆ. ಅದ್ರಲ್ಲೂ ಮದುವೆಯ ಖುಷಿಯನ್ನು ಸ್ಮರಣೀಯವಾಗಿಸಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಆದರೆ ಜೀವನದಲ್ಲಿ ನಡೆಯೋ ಅನಿರೀಕ್ಷಿತ ಘಟನೆಗಳಿಮದಾಗಿ ವಿಚಿತ್ರ ಸನ್ನಿವೇಶ ಸೃಷ್ಟಿಯಾಗುತ್ತದೆ. ಅಂತೆಯೇ ಇಲ್ಲೊಂದು ಜೋಡಿ ಕೊರೊನಾ ಆಸ್ಪತ್ರೆಯಲ್ಲಿಯೇ ಮದುವೆಯಾಗಿದ್ದಾರೆ. ಅದ್ರಲ್ಲೂ ಯುವತಿ ಕೊರೊನಾ ಸೋಂಕಿತನನ್ನು ವರಿಸಿದ್ದಾಳೆ.

ಅಷ್ಟಕ್ಕೂ ಈ ಘಟನೆ ನಡೆದಿರೋ ಅಮೇರಿಕಾದ ಸ್ಯಾನ್ ಆಂಟೋನಿಯೊದ ಮೆಥೋಡಿಸ್ಟ್ ಆಸ್ಪತ್ರೆಯಲ್ಲಿ. ಟೆಕ್ಸಾಸ್‌ನ ನಿವಾಸಿಯಾಗಿರುವ ಕಾರ್ಲೋಸ್ ಮುನಿಜ್ ಹಾಗೂ ಗ್ರೇಸ್ ಲೀಮನ್ ಹಲವು ಸಮಯಗಳಿಂದಲೂ ಪ್ರೀತಿಸುತ್ತಿದ್ದರು. ಈಗಾಗಲೇ ನಿಶ್ಚಿತಾರ್ಥವನ್ನು ಮುಗಿಸಿಕೊಂಡಿದ್ದ ಜೋಡಿಯ ವಿವಾಹಕ್ಕೂ ಜುಲೈ ತಿಂಗಳಿನಲ್ಲಿ ದಿನ ನಿಗದಿ ಮಾಡಲಾಗಿತ್ತು.

ಆದ್ರೆ ಜುಲೈ 15ರಂದು ಕಾರ್ಲೋಸ್ ಮುನಿಜ್ ಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಥೋಡಿಸ್ಟ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆ ದಾಖಲಾದ ಒಂದೆರಡು ದಿನಗಳಲ್ಲಿ ಮುನಿಜ್ ಆರೋಗ್ಯ ಹದಗೆಟ್ಟಿತ್ತು. ಈ ನಡುವಲ್ಲೇ ಮದುವೆ ನಡೆಯಲಿಲ್ಲ ಅನ್ನೋ ಕೊರಗು ಜೋಡಿಯನ್ನು ಕಾಡಿತ್ತು.

ಆಸ್ಪತ್ರೆಯ ಅಧಿಕಾರಿಗಳಿಗೆ ಮದುವೆ ನಿಶ್ಚವಾಗಿರುವ ವಿಚಾರವನ್ನು ಜೋಡಿ ಹೇಳಿಕೊಂಡಿದ್ದರು. ಈ ನಡುವಲ್ಲೇ ಈ ಜೋಡಿಯ ವಿವಾಹವನ್ನು ಆಸ್ಪತ್ರೆಯಲ್ಲಿಯೇ ನೆರವೇರಿಸಲು ನಿರ್ಧರಿಸಿದ್ದಾರೆ. ಐಸಿಯುನಲ್ಲಿ ಜೀವರಕ್ಷಕ ಸಾಧನಗಳನ್ನು ಬಳಸಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಮುನಿಜ್ ಹಾಗೂ ಗ್ರೇಸ್ ಲೀಮನ್ ಮದುವೆಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ಮುನಿಜ್ ಅವರನ್ನು ಬೆಡ್ ನಲ್ಲಿಯೇ ಆಸ್ಪತ್ರೆಯ ಕಾರಿಡಾರ್ ಗೆ ಕರೆತರಲಾಗಿತ್ತು. ಗ್ರೇಸ್ ಲೀಮನ್ ಮದುವೆಯ ಡ್ರೆಸ್ ತೊಟ್ಟು ಕಂಗೊಳಿಸುತ್ತಿದ್ದರು. ಮುನಿಜ್ ಕೊರೊನಾ ಬೆಡ್ ನಲ್ಲಿಯೇ ಚಿಕಿತ್ಸೆ ಪಡೆಯುತ್ತಲೇ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿಗಳು ಅಪರೂಪದ ಮದುವೆಗೆ ಸಾಕ್ಷಿಯಾಗಿದ್ದಾರೆ. ಸದ್ಯ ಈ ಅಪರೂಪದ ಜೋಡಿಯ ಅಪರೂಪದ ಮದುವೆಯ ವಿಡಿಯೋ ವೈರಲ್ ಆಗಿದ್ದು, ಜೋಡಿಯ ಮದುವೆಯನ್ನು ಕಂಡವರು ಶುಭ ಹಾರೈಕೆ ಮಾಡುತ್ತಿದ್ದಾರೆ.

Leave A Reply

Your email address will not be published.