Gold price down today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನದ ಬೆಲೆಯಲ್ಲಿ ಬಾರೀ ಇಳಿಕೆ

ನವದೆಹಲಿ:(Gold price down today) ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆದಿದೆ. 2 ದಿನಗಳಿಂದ ಭಾರತದಲ್ಲಿ(Gold Rate) ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಹಳದಿಲೋಹದ ಬೆಲೆಯಲ್ಲಿ ವ್ಯತ್ಯಾಸವಿದೆ. ಚಿನ್ನ ಹೆಣ್ಮಕ್ಕಳ ನೆಚ್ಚಿನ ಆಭರಣ. ಚಿನ್ನ ಖರೀದಿಸುವವರು ಮಾತ್ರವಲ್ಲ ಎಲ್ಲರಿಗೂ ಕೂಡ ಇಂದಿನ ದಿನದ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯುವ ಕುತೂಹಲ ಇದ್ದೇ ಇದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿಯ ದರ ಎಷ್ಟಿದೆ ಅನ್ನೋದನ್ನು ಆಭರಣ ಪ್ರಿಯರಿಗಾಗಿ ಇಲ್ಲಿ ಕೊಡಲಾಗಿದೆ.

(Gold price down today) ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ₹ 5,062 ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರಕ್ಕೆ ₹ 5,067 ನಿಗದಿಯಾಗಿದೆ. 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹ 46,450 ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 50,670 ರೂಪಾಯಿ ದಾಖಲಾಗಿದೆ.

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ(Gold Rate) ಹೀಗಿದೆ:

  • ಬೆಂಗಳೂರು: ₹ 46,450 (22 ಕ್ಯಾರಟ್‌) – ₹ 50,670 (24 ಕ್ಯಾರಟ್‌)
  • ಚೆನ್ನೈ: ₹ 46,950 (22 ಕ್ಯಾರಟ್‌) – ₹ 51,220 (24 ಕ್ಯಾರಟ್‌)
  • ದಿಲ್ಲಿ: ₹ 46,550 (22 ಕ್ಯಾರಟ್‌) – ₹ 50,780 (24 ಕ್ಯಾರಟ್‌)
  • ಹೈದರಾಬಾದ್‌: ₹ 46,400 (22 ಕ್ಯಾರಟ್‌) – ₹ 50,620 (24 ಕ್ಯಾರಟ್‌)
  • ಕೋಲ್ಕತಾ: ₹46,400 (22 ಕ್ಯಾರಟ್‌) – ₹50,620 (24 ಕ್ಯಾರಟ್‌)
  • ಮಂಗಳೂರು: ₹46,450 (22 ಕ್ಯಾರಟ್‌) – ₹50,670 (24 ಕ್ಯಾರಟ್‌)
  • ಮುಂಬಯಿ: ₹46,400 (22 ಕ್ಯಾರಟ್‌) – ₹50,620 (24 ಕ್ಯಾರಟ್‌)
  • ಮೈಸೂರು: ₹46,450 (22 ಕ್ಯಾರಟ್‌) – ₹50,670 (24 ಕ್ಯಾರಟ್‌)

ಬೆಳ್ಳಿ ಬೆಲೆ(Silver Rate):

ಇನ್ನು ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ ₹ 52,300 ರೂಪಾಯಿ ದಾಖಲಾಗಿದ್ದು, ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹58,000 ಇದ್ದು, ಶುಕ್ರವಾರದಷ್ಟೇ ಮೊತ್ತ ದಾಖಲಾಗಿದೆ. ದೇಶಾದ್ಯಂತ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏರಿಕೆ ಹಾಗೂ ಕೆಲವೆಡೆ ಇಳಿಕೆ ಕಂಡು ಬಂದಿದೆ. ಚೆನ್ನೈ, ಹೈದರಾಬಾದ್, ಕೇರಳ, ಕೊಯಮತ್ತೂರು, ಮೈಸೂರು, ಮಂಗಳೂರಿನಲ್ಲೂ ₹58,000 ನಿಗದಿಯಾಗಿದೆ.

ಇದನ್ನೂ ಓದಿ: SBI ನಲ್ಲಿ ಮಕ್ಕಳ ಉಳಿತಾಯ ಬ್ಯಾಂಕ್ ಖಾತೆ ತೆರೆಯುವುದರ ಬಗ್ಗೆ ಪ್ರಯೋಜನಗಳು ಮತ್ತು ಇತರ ವಿವರಗಳು

ಇದನ್ನೂ ಓದಿ: ಸೂಪರ್ ಸಂಡೇ ಭಾರತ Vs ಪಾಕಿಸ್ತಾನ ಸೂಪರ್ -4 ಕದನ… ಹೀಗಿರಲಿದೆ ಟೀಮ್ ಇಂಡಿಯಾ (Team India)ಪ್ಲೇಯಿಂಗ್ XI

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದರೆ, ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಎಂದಿನಂತೆ ಬೆಳಗ್ಗೆ ಹನ್ನೊಂದು ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಾಸವಾಗುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

Good news for gold lovers Gold price downa today

Comments are closed.