ಸೋಮವಾರ, ಜೂನ್ 16, 2025
HomebusinessLPG ಗ್ರಾಹಕರಿಗೆ ಸಂತಸದ ಸುದ್ದಿ: 750 ರೂಪಾಯಿಗೆ ಪಡೆಯಿರಿ ಗ್ಯಾಸ್‌ ಸಿಲಿಂಡರ್‌

LPG ಗ್ರಾಹಕರಿಗೆ ಸಂತಸದ ಸುದ್ದಿ: 750 ರೂಪಾಯಿಗೆ ಪಡೆಯಿರಿ ಗ್ಯಾಸ್‌ ಸಿಲಿಂಡರ್‌

- Advertisement -

ನವದೆಹಲಿ: (LPG Cylinder just rs 750) ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆಮ್ಮದಿಯ ಸುದ್ದಿಯೊಂದು ಹೊರ ಬಿದ್ದಿದೆ. ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ಕೂಡ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ (Indane Composite Cylinder) ಕೇವಲ 750 ರೂ.ಗೆ ದೊರೆಯಲಿದೆ. ಇದೇನಪ್ಪಾ ಇಷ್ಟೊಂದು ಕಡಿಮೆ ಬೆಲೆಗೆ ಗ್ಯಾಸ್‌ ಸಿಲಿಂಡರ್‌ ದೊರೆಯುತ್ತಾ ಅನ್ನೋ ಕುತೂಹಲವಿದ್ರೆ ಈ ಸ್ಟೋರಿ ಓದಿ.

ಸಾರ್ವಜನಿಕರಿಗಾಗಿ ಸರ್ಕಾರಿ ತೈಲ ಕಂಪನಿಯು ವಿಶೇಷ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ ಗ್ರಾಹಕರು ಅಗ್ಗದ ದರದಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಪಡೆಯಬಹುದಾಗಿದೆ. ಈ ಸೌಲಭ್ಯದ ಅಡಿಯಲ್ಲಿ, LPG ಗ್ರಾಹಕರು ಕೇವಲ 750 ರೂ.ಗೆ ಗ್ಯಾಸ್ LPG ಸಿಲಿಂಡರ್ ಅನ್ನು ಪಡೆಯಬಹುದು. ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ಬೆಲೆಗಳು ಗಗನಕ್ಕೇರುತ್ತಿರುವ ಸಮಯದಲ್ಲಿ ಇಂಡೇನ್ ಈ ಸೌಲಭ್ಯವನ್ನು ಪರಿಚಯಿಸಿದೆ. ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರಿದ್ದು,ಇಂಡೇನ್ ನೀಡಿರುವ ಈ ಅಪರೂಪದ ಅವಕಾಶದಿಂದ ಅದರ ಗ್ರಾಹಕರು ಸಂತಸಗೊಂಡಿದ್ದಾರೆ.

ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1053 ರೂ. ಈ ಪರಿಸ್ಥಿತಿಯಲ್ಲಿ ಸರ್ಕಾರಿ ಸಂಸ್ಥೆ ಇಂಡೇನ್‌ 750 ರೂ. ಇಂಡೇನ್ ಕಾಂಪೋಸಿಟ್ ಸಿಲಿಂಡರ್ (Indane Composite Cylinder )ಸೌಲಭ್ಯವನ್ನು ಆರಂಭಿಸಿದ್ದು, ಗ್ರಾಹಕರು ರೂ.750ಕ್ಕೆ ಸಿಲಿಂಡರ್ ಪಡೆಯಬಹುದಾಗಿದೆ. ಈ ಸಿಲಿಂಡರ್ ಖರೀದಿಸಲು ಕೇವಲ 750 ರೂಪಾಯಿ ಖರ್ಚು ಮಾಡಬೇಕು. ಈ ಎಲ್‌ಪಿಜಿ ಸಿಲಿಂಡರ್‌ನ ವಿಶೇಷತೆ ಎಂದರೆ ಇದನ್ನು ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬಹುದಾಗಿದೆ. ಈ ಸಿಲಿಂಡರ್ ಸಾಮಾನ್ಯ ಸಿಲಿಂಡರ್ಗಿಂತ ಕಡಿಮೆ ತೂಕವನ್ನು ಹೊಂದಿದೆ ಎಂದು ತಿಳಿಯಬೇಕು. ಸಿಲಿಂಡರ್‌ಗಳ ಇತ್ತೀಚಿನ ಬೆಲೆಗಳನ್ನು ಪರಿಶೀಲಿಸಿ-

ದೆಹಲಿ – 750
ಮುಂಬೈ – 750
ಕೋಲ್ಕತ್ತಾ – 765
ಚೆನ್ನೈ – 761
ಲಕ್ನೋ – 777

ಈ LPG ಸಿಲಿಂಡರ್ ಎಲ್ಲಾ ನಗರಗಳಲ್ಲಿ ಲಭ್ಯವಿದೆ. ಈ ಸಿಲಿಂಡರ್‌ಗಳು ತೂಕದಲ್ಲಿ ಹಗುರವಾಗಿರುತ್ತವೆ ಮತ್ತು ಕೇವಲ 10 ಕೆಜಿ ಗ್ಯಾಸ್ ಲಭ್ಯವಿದೆ ಎಂದು ನಾವು ನಿಮಗೆ ತಿಳಿಸುತ್ತೇವೆ. ಈ ಕಾರಣದಿಂದ ಈ ಸಿಲಿಂಡರ್‌ಗಳ ಬೆಲೆ ಕಡಿಮೆಯಾಗಿದೆ. ಈ ಸಿಲಿಂಡರ್ ಗಳು ಪಾರದರ್ಶಕವಾಗಿ ಇರುವುದು ವಿಶೇಷ. ಪ್ರಸ್ತುತ, ಈ ಸಿಲಿಂಡರ್ 28 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ, ಆದರೆ ಕಂಪನಿಯು ಈ ಸಿಲಿಂಡರ್ ಅನ್ನು ಶೀಘ್ರದಲ್ಲೇ ಎಲ್ಲಾ ನಗರಗಳಲ್ಲಿ ಲಭ್ಯವಾಗುವಂತೆ ಮಾಡಲು ಕೆಲಸ ಮಾಡುತ್ತಿದೆ.

ಇದನ್ನೂ ಓದಿ : Town hall rental rates reduced : ರಂಗಕರ್ಮಿಗಳು, ಕಲಾವಿದರಿಗೆ ಸಿಹಿಸುದ್ದಿ: ಸೆ.1 ರಿಂದ ಟೌನ್ ಹಾಲ್ ಬಾಡಿಗೆ ದರ ಇಳಿಕೆ

ಇದನ್ನೂ ಓದಿ : KMF Milk Price Hike Karnataka : ರೈತರಿಗೆ ಸಿಹಿ ಗ್ರಾಹಕರಿಗೆ ಕಹಿ : ಶೀಘ್ರದಲ್ಲೇ ಹಾಲಿನ ದರ ಏರಿಕೆ ಸುಳಿವುಕೊಟ್ಟ ಕೆಎಂಎಫ್

Good news LPG Customer Now get LPG Cylinder for just rs 750 Indane Composite Cylinder

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular