AAP VS BJP : ಆಪ್ ಬಿಜೆಪಿ ಅಹೋರಾತ್ರಿ ಧರಣಿ ಕಾಳಗ

ನವದೆಹಲಿ : AAP VS BJP ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಆಢಳಿತಾರೂಢ ಆಪ್ ಮತ್ತು ವಿಪಕ್ಷ ಬಿಜೆಪಿ ನಡುವಿನದ ಕದನ ತಾರಕಕ್ಕೇರಿದೆ. ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕರು ಒಬ್ಬರಿಗೊಬ್ಬರು ಭ್ರಷ್ಟಾಚಾರದ ಆರೋಪ ಪ್ರತ್ಯಾರೋಪ ಮಾಡುತ್ತಾ ದೆಹಲಿ ವಿಧಾನಸಭೆ ಒಳಗೆ ಮತ್ತು ಹೊರಗೆ ಅಹೋರಾತ್ರಿ ಧರಣಿ ನಡೆಸಿವೆ. ಬಿಜೆಪಿ ಆಮ್ ಆದ್ಮಿ ಪಕ್ಷದ ಶಾಸಕರಿಗೆ ತಲಾ 20 ಕೋಟಿ ರೂಪಾಯಿ ನೀಡಿ ಖರೀದಿಸಲು ಮುಂದಾಗಿದೆ, ಆ ಮೂಲಕ ದೆಹಲಿ ಸರ್ಕಾರವನ್ನ ಕೆಡವಲು ಯತ್ನಿಸ್ತಿದೆ. ಅಂತಾ ಆರೋಪಿಸಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind kejriwal) ಬಿಜೆಪಿಗೆ ಕೌಂಟರ್ ಕೊಡೋದಕ್ಕಾಗಿ ತಮಗೆ ಬಹುಮತವಿದ್ದರೂ, ವಿಶ್ವಾಸ ಮತಯಾಚನೆ ಮಂಡಿಸಿದ್ರು.

ನಿನ್ನೆ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ನಿರ್ಣಯ ಮಂಡಿಸಿದ ಬಳಿಕ, ವಿಧಾನಸಭೆ ಸ್ಪೀಕರ್ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ರು. ಬಳಿಕ ಚರ್ಚೆ ವೇಳೆ ದೆಹಲಿ ಸಿಎಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಬಿಜೆಪಿ ಆಪರೇಷನ್ ಕಮಲ ಮಾಡೋದ್ರಲ್ಲಿ ವಿಫಲವಾಗಿದೆ. ನಮ್ಮ ಯಾವೊಬ್ಬ ಶಾಸಕನೂ ಬಿಜೆಪಿಯ ಆಮೀಷಕ್ಕೆ ಬಲಿಯಾಗಿಲ್ಲ ಅಂತಾ ವಿಧಾನಸಭೆಯಲ್ಲಿ ಹೇಳಿದ್ರು.

ಚರ್ಚೆ ವೇಳೆ ಬಿಜೆಪಿ ಸದಸ್ಯರು ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಿದ್ರು. ಈ ವೇಳೆ ಚರ್ಚೆ ಅರ್ಧಕ್ಕೆ ನಿಂತು ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ವೇಳೆ ಆಮ್ ಆದ್ಮಿ ಪಕ್ಷದ ನಾಯಕರು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಹೊಸ ಬಾಂಬ್ ಸಿಡಿಸಿದ್ರು.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ 2016ರಲ್ಲಿ ನೋಟು ಅಮಾನ್ಯೀಕರಣ ವೇಳೆ 1400 ಕೋಟಿ ರೂಪಾಯಿ ಬ್ಲ್ಯಾಕ್ ಮನಿಯನ್ನ ವೈಟ್ ಮನಿಯನ್ನಾಗಿ ಮಾಡಿಕೊಂಡಿದ್ರು ಆಗ ಅವರು KVIC ಖಾದಿ ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾಗಿದ್ರು. ಹೀಗಾಗಿ ಲೆಫ್ಟಿನೆಂಟ್ ಗವರ್ನರ್ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆಗೆ ಇಳಿದ್ರು. ಇತ್ತ ಬಿಜೆಪಿಯವರು ಮನೀಶ್ ಸಿಸೋಡಿಯಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ರು. ಗದ್ದಲ ಗಲಾಟೆ ತಾರಕ್ಕೇರ್ತಿದ್ದಂತೆ, ವಿಧಾನಸಭೆ ಕಲಾಪವನ್ನ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಮಂಗಳವಾರ ಬೆಳಗ್ಗೆ 11ಗಂಟೆಗೆ ಮುಂದೂಡಿದ್ರು.

ಇಷ್ಟಾದರೂ ಆಮ್ ಆದ್ಮಿ ಪಕ್ಷದ ನಾಯಕರ ಆಕ್ರೋಶ ತಣ್ಣಗಾಗಿರಲಿಲ್ಲ, ಬಳಿಕ ಆಪ್ ಸದಸ್ಯರು ಅಹೋರಾತ್ರಿ ಧರಣಿಗೆ ಮುಂದಾದ್ರು. ಅತ್ತ ಬಿಜೆಪಿ ಶಾಸಕರೂ ಸಹ ಅಹೋರಾತ್ರಿ ಧರಣಿ ನಡೆಸಿದ್ರು. ಇಂದು ಮತ್ತೆ ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗಲಿದ್ದು, ವಿಶ್ವಾಸ ಮತ ಯಾಚನೆ ಮೇಲಿನ ಚರ್ಚೆ ಮುಂದುವರಿಯಲಿದೆ. ಇಂದೂ ಸಹ ದೆಹಲಿ ವಿಧಾನಸಭೆ ಹೈಡ್ರಾಮಗಳಿಗೆ ಸಾಕ್ಷಿಯಾಗೋದು ಪಕ್ಕಾ ಆಗಿದೆ.

AAP VS BJP- overnight protest-demand LG’s resignation- Arvind kejriwal

Comments are closed.