ಮೇ 2 ರಿಂದ ಬೆಳಗ್ಗೆ 7.30ಕ್ಕೆ ತೆರೆಯಲಿವೆ ಸರಕಾರಿ ಕಚೇರಿ

ಪಂಜಾಬ್‌ : ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತಮ್ಮ ಸರಕಾರವು ಮುಂದಿನ ತಿಂಗಳಿನಿಂದ (Government Office Timings)‌ ಕಚೇರಿ ಸಮಯವನ್ನು ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 2 ರವರೆಗೆ ಬದಲಾಯಿಸಲು ನಿರ್ಧರಿಸಿದೆ ಎಂದು ಶನಿವಾರ ಹೇಳಿದ್ದಾರೆ. ಪ್ರಸ್ತುತ, ರಾಜ್ಯ ಸರಕಾರಿ ಇಲಾಖೆಗಳ ಕಚೇರಿಯ ಸಮಯವು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಇರುತ್ತದೆ. ಆದರೆ ಮುಂದಿನ ತಿಂಗಳಲ್ಲಿ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಲಿದೆ ಎಂದಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, “ಮೇ 2 ರಿಂದ ಎಲ್ಲಾ ಸರಕಾರಿ ಕಚೇರಿಗಳು ಬೆಳಿಗ್ಗೆ 7.30 ಕ್ಕೆ ತೆರೆದು ಮಧ್ಯಾಹ್ನ 2 ಗಂಟೆಗೆ ಮುಚ್ಚಲು ಪಂಜಾಬ್ ಸರಕಾರ ನಿರ್ಧರಿಸಿದೆ” ಎಂದು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ಹಾಗಯೇ ಹೊಸ ಕಚೇರಿ ಸಮಯ ಜುಲೈ 15 ರವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದರು. ರಾಜ್ಯ ಸರಕಾರಿ ನೌಕರರು ಸೇರಿದಂತೆ ಹಲವರ ಜತೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.

ಇದನ್ನೂ ಓದಿ : SIM ಕಾರ್ಡ್‌ಗಳಿಗಾಗಿ ಡಿಜಿಟಲ್ KYC ಪರಿಶೀಲನೆ : ಶೀಘ್ರದಲ್ಲೇ

ಇದನ್ನೂ ಓದಿ : ಇಪಿಎಫ್‌ಒ ಖಾತೆಗೆ ಇ-ನಾಮನಿರ್ದೇಶನ ಸಲ್ಲಿಸುವುದು ಹೇಗೆ ? ಇಲ್ಲಿದೆ ಹಂತ ಹಂತ ಮಾರ್ಗದರ್ಶಿ

ಬೇಸಿಗೆಯಲ್ಲಿ ಕಚೇರಿ ಸಮಯ ಬದಲಾವಣೆಯು ವಿದ್ಯುತ್ ಬೇಡಿಕೆಯ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು. “ಪವರ್ ಯುಟಿಲಿಟಿ ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್, ಪೀಕ್ ಲೋಡ್ (ವಿದ್ಯುತ್) ಮಧ್ಯಾಹ್ನ 1.30 ರ ನಂತರ ಪ್ರಾರಂಭವಾಗುತ್ತದೆ ಮತ್ತು ಸರಕಾರಿ ಕಚೇರಿಗಳನ್ನು ಮಧ್ಯಾಹ್ನ 2 ಗಂಟೆಗೆ ಮುಚ್ಚಿದರೆ, ಅದು 300 ರಿಂದ 350 ಮೆಗಾವ್ಯಾಟ್ ಪೀಕ್ ಲೋಡ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು. ನಾನೂ ಕೂಡ ಬೆಳಗ್ಗೆ 7.30ಕ್ಕೆ ಕಚೇರಿ ತಲುಪುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ : ದೇಶೀಯ ಅನಿಲ ಬೆಲೆಯಲ್ಲಿ ಪರಿಷ್ಕರಣೆ : ಸಿಎನ್‌ಜಿ, ಪಿಎನ್‌ಜಿ ಬೆಲೆಗಳಲ್ಲಿ ಭಾರೀ ಇಳಿಕೆ

Government Office Timings: Government office will be opened from May 2 at 7.30 am

Comments are closed.