ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ದೂರಸಂಪರ್ಕ ಕಂಪನಿಗಳಿಗೆ ಕೇಂದ್ರ ಸರ್ಕಾರ (Union Government) ಮಹತ್ವದ ಸೂಚನೆಯೊಂದನ್ನು ಹೊರಡಿಸಿದೆ. ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರು ಅಥವಾ ಬಳಕೆದಾರರ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿರುವ ಕುರಿತು ಪ್ರಕಟಿಸಿರುವ ಈ ಸೂಚನೆ ದೇಶದ ಜನರ ಖಾಸಗಿತನವನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಮುಖವೆನಿಸಿದೆ. ಈ ಸೂಚನೆಯ ಪ್ರಕಾರ ದೂರಸಂಪರ್ಪ ಅಥವಾ ಟೆಲಿಕಾಂ ಕಂಪನಿಗಳು (telecom companies) ಇಂಟರ್ನೆಟ್ ಆಧಾರಿತ ದೂರವಾಣಿ ಸೇವೆ, ಮೊಬೈಲ್ ಅಪ್ಲಿಕೇಷನ್ಸ್, ವೈಫೈ ಬಳಕೆಯ ಮಾಹಿತಿ. ಇಮೇಲ್ ವಿನಿಮಯದ ವಿವರ ಎರಡು ವರ್ಷ ಕಾಯ್ದಿಡಬೇಕಿದೆ.
ದೇಶ ಮತ್ತು ದೇಶವಾಸಿಗಳ ಭದ್ರತೆಯ ದೃಷ್ಟಿಯಿಂದ ದೂರವಾಣಿ ಗ್ರಾಹಕರ ಕರೆ ಮತ್ತು ಅಂತರ್ಜಾಲಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೂರಸಂಪರ್ಕ ಕಂಪನಿಗಳು ಒಂದು ವರ್ಷದ ಬದಲು ಕನಿಷ್ಠ ಎರಡು ವರ್ಷವಾದರೂ ಕಡ್ಡಾಯವಾಗಿ ಸಂಗ್ರಹಿಸಿ ಇರಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ದೂರವಾಣಿ ಜಾಲ ಮತ್ತು ಅಂತರ್ಜಾಲ ಬಳಸಿಕೊಂಡು ದೇಶದ ಭದ್ರತೆ ಮತ್ತು ಜನರ ಖಾಸಗಿತಕ್ಕೆ ಧಕ್ಕೆಯುಂಟು ಮಾಡುತ್ತಿರುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಈ ಡೇಟಾಗಳು ಅವಶ್ಯಕವಾದ ಕಾರಣ ಇವುಗಳ ಸಂಗ್ರಹದ ಮಿತಿಯನ್ನು ಒಂದು ವರ್ಷದಿಂದ ಎರಡು ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ದೂರಸಂಪರ್ಕ ಇಲಾಖೆ (ಡಿಒಟಿ) ಹೇಳಿದೆ.
ಹೊಸ ತಿದ್ದುಪಡಿಗೆ ಒಳಪಟ್ಟಂತೆ ಟೆಲಿಕಾಂ ಕಂಪನಿಗಳಿಗೆ ಡಿಸೆಂಬರ್ 21ರಿಂದ ಪರವಾನಗಿ ಅಥವಾ ಪರವಾನಗಿ ನವೀಕರಣವನ್ನು ನೀಡಲಾಗುತ್ತಿದೆ. ಇದರ ಅನ್ವಯ, ಗ್ರಾಹಕರ ದೂರವಾಣಿ ಕರೆ ವಿನಿಯಮದ ಮಾಹಿತಿ ಅಂದರೆ ಯಾರಿಂದ ಎಲ್ಲಿಗೆ ಯಾವಾಗ ಕರೆ ಮಾಡಲಾಗಿತ್ತು ಎಂಬ ವಿವರ. ದೂರವಾಣಿಯ ಐಪಿ ಮಾಹಿತಿ, ಅಂತರ್ಜಾಲ ಬಳಕೆದಾರರು ಪ್ರತಿಸಾರಿ ಲಾಗಿನ್ ಮತ್ತು ಲಾಗ್ ಔಟ್ ಆದ ಸಮಯದ ಸಹಿತ ಇಂಟರ್ನೆಟ್ ಬಳಕೆಯ ಡೇಟಾ ಮತ್ತು ನೆಟ್ವರ್ಕ್ ವಿನಿಮಯದ ಮಾಹಿತಿಯನ್ನು ಎರಡು ವರ್ಷದವರೆಗೆ ಸಂಗ್ರಹಿಸುವುದು ಕಡ್ಡಾಯವಾಗಲಿದೆ. ಇಂಟರ್ನೆಟ್ ಆಧಾರಿತ ದೂರವಾಣಿ ಸೇವೆ, ಮೊಬೈಲ್ ಅಪ್ಲಿಕೇಷನ್ಸ್, ವೈಫೈ ಬಳಕೆಯ ಮಾಹಿತಿ. ಇಮೇಲ್ ವಿನಿಮಯದ ವಿವರ ಎರಡು ವರ್ಷ ಕಾಪಿಡಬೇಕು. ಎರಡು ವರ್ಷದ ನಂತರ ಸರ್ಕಾರದಿಂದ ಯಾವುದೇ ನಿರ್ದೇಶನ ಬಾರದಿದ್ದಲ್ಲಿ ಅಂತಹ ಮಾಹಿತಿಯನ್ನು ಸಂಗ್ರಹದಿಂದ ತೆಗೆದುಹಾಬಹುದು ಎಂದು ದೂರಸಂಪರ್ಕ ಇಲಾಖೆಯು ತಿಳಿಸಿದೆ.
ಇದನ್ನೂ ಓದಿ: Google Search Tricks : ಗೂಗಲ್ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು
(Govt mandates telecom companies to keep call data, internet usage record for minimum 2 years)