Gruha Lakshmi Money : ಕರ್ನಾಟಕದಲ್ಲಿ ಈಗಾಗಲೇ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿದೆ. ಈಗಾಗಲೇ ಗೃಹಿಣಿಯರು ಐದು ಕಂತುಗಳ ಮೂಲಕ 10 ಸಾವಿರ ರೂಪಾಯಿ ಹಣವನ್ನು ಪಡೆದುಕೊಂಡಿದ್ದಾರೆ. ಈ ನಡುವಲ್ಲೇ ಗೃಹಲಕ್ಷ್ಮೀ ಯೋಜನೆಯ ಹಣವು ಅತ್ತೆ ಮತ್ತು ಸೊಸೆಗೆ ಸಿಗುತ್ತೆ ಅನ್ನೋ ಸುದ್ದಿ ಹರಿದಾಡಿದ್ದು, ಈ ಕುರಿತು ಸ್ವತ: ಕರ್ನಾಟಕ ಸರಕಾರ ಸ್ಪಷ್ಟನೆಯನ್ನು ನೀಡಿದೆ.

ಮನೆಯ ಯಜಮಾನಿ ಮಹಿಳೆಯ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಕರ್ನಾಟಕ ಸರಕಾರ ನೇರ ವರ್ಗಾವಣೆ ಮಾಡುತ್ತಿದೆ. ಇದೀಗ ೬ನೇ ಕಂತಿನ ಹಣ ವರ್ಗಾವಣೆಗಾಗಿ ಸರಕಾರ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಗೃಹಿಣಿಯರು ಕೂಡ ತಮ್ಮ ಮಾಸಿಕ ಕಂತಿನ ಹಣವನ್ನು ಪಡೆಯಲು ಕಾದು ಕುಳಿತಿದ್ದಾರೆ. ಈ ನಡುವಲ್ಲೇ ಅತ್ತೆಯ ಜೊತೆಗೆ ಸೊಸೆಗೂ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.
ಗೃಹಲಕ್ಷ್ಮೀ ಯೋಜನೆಯನ್ನು ಮನೆಯ ಯಜಮಾನಿಗೆ ನೀಡಲಾಗುತ್ತದೆ. ಪಡಿತರ ಕಾರ್ಡಿನಲ್ಲಿ ಯಾರನ್ನು ಮನೆಯ ಯಜಮಾನಿ ಎಂದು ನಮೂದಿಸಲಾಗಿ ಇರುತ್ತದೆಯೋ ಅವರಿಗೆ ಮಾತ್ರವೇ ಗೃಹಲಕ್ಷ್ಮೀ ಯೋಜನೆಯ ಹಣ ದೊರೆಯಲಿದೆ. ಸದ್ಯ ಬಹುತೇಕ ಮನೆಗಳಲ್ಲಿನ ಅತ್ತೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ದೊರೆಯುತ್ತಿದೆ. ಸದ್ಯ ಅತ್ತೆಯ ಜೊತೆಗೆ ಸೊಸೆಗೂ ಹಣ ಸಿಗುವ ಸಾಧ್ಯತೆಯಿಲ್ಲ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯಡಿ ಈ ಮಹಿಳೆಯರಿಗೆ ಮಾತ್ರವೇ ಸಿಗಲಿದೆ 6000 ರೂ.
ಒಂದೊಮ್ಮೆ ಅತ್ತೆಯ ಕಾಲಾ ನಂತರದಲ್ಲಿ ಸೊಸೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲದೇ ಅತ್ತೆ ಮೃತಪಟ್ಟರೆ ಅಂತಹ ಸಂದರ್ಭದಲ್ಲಿ ಸೊಸೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯಬಹುದು. ಆದರೆ ಮನೆಯ ರೇಷನ್ ಕಾರ್ಡ್‌ನಲ್ಲಿ ಸೊಸೆಯನ್ನು ಮನೆಯ ಯಜಮಾನಿ ಎಂದು ಘೋಷಿಸಿರಬೇಕು. ಅತ್ತೆ ಮೃತಪಟ್ಟ ನಂತರದಲ್ಲಿ ಹೊಸದಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅತ್ತೆಯ ಮರಣ ಪ್ರಮಾಣವನ್ನು ಸಲ್ಲಿಕೆ ಮಾಡಿದ ನಂತರವೇ ಪಡಿತರ ಕಾರ್ಡ್‌ನಲ್ಲ ತಿದ್ದುಪಡಿಯನ್ನು ಮಾಡಿಸಿಕೊಂಡು ಗೃಹಲಕ್ಷ್ಮೀ ಯೋಜನೆಗೆ ಹೊಸದಾಗಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಆದರೆ ಸದ್ಯಕ್ಕೆ ಅತ್ತೆಯ ಜೊತೆಗೆ ಸೊಸೆಗೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ವರ್ಗಾವಣೆ ಮಾಡುವ ಯೋಜನೆ ಸರಕಾರದ ಮುಂದಿಲ್ಲ.
ಇದನ್ನೂ ಓದಿ : ಪ್ರತೀ ಕುಟುಂಬಕ್ಕೆ ಸಿಗಲಿದೆ 5000 ರೂ. : ಕಾಂಗ್ರೆಸ್‌ನಿಂದ ಮತ್ತೊಂದು ಗ್ಯಾರಂಟಿ ಘೋಷಣೆ
ಇದುವರೆಗೂ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯದೇ ಇರುವ ಗೃಹಿಣಿಯರಿಗೆ ರಾಜ್ಯ ಸರಕಾರ ಈಗಾಗಲೇ ಗುಡ್‌ನ್ಯೂಸ್ ಕೊಟ್ಟಿದೆ. ಸಲ್ಲಿಕೆಯಾಗಿರುವ ಅರ್ಜಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಕಾಲಾವಕಾಶವನ್ನು ನೀಡಲಾಗಿದೆ. ಈಗಾಗಲೇ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯುತ್ತಿದ್ದವರು, ಎನ್‌ಪಿಸಿಐ ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಎನ್‌ಪಿಸಿಐ (National Payment Corporation of india) ಮಾಡಿಸಬೇಕು. ಜೊತೆಗೆ ಆಧಾರ್ ಕೆವೈಸಿ (Aadhaar eKYC) ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿದ್ರೆ ಮಾತ್ರವೇ ನೇರವಾಗಿ (DBT) ಗೃಹಲಕ್ಷ್ಮೀ ಯೋಜನೆಯ ಹಣ ವರ್ಗಾವಣೆ ಆಗಲಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಹಣ ವರ್ಗಾವಣೆ ಹೊಸ ಸೂತ್ರ, ಹಣ ಸಿಗದೇ ಇರುವವರಿಗೂ ಇಲ್ಲಿದೆ ಗುಡ್‌ನ್ಯೂಸ್
Gruha Lakshmi Money Will the mother-in-law and daughter-in-law get ? Karnataka government gave good news