ಗೃಹಲಕ್ಷ್ಮೀ ಯೋಜನೆಯಡಿ ಈ ಮಹಿಳೆಯರಿಗೆ ಮಾತ್ರವೇ ಸಿಗಲಿದೆ 6000 ರೂ.

Gruha lakshmi scheme : ಕರ್ನಾಟಕ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಪ್ರತೀ ತಿಂಗಳು ಮನೆಯ ಯಜಮಾನಿಗೆ 2000 ರೂಪಾಯಿ ಹಣವನ್ನು ನೇರ ವರ್ಗಾವಣೆ ಮಾಡುತ್ತಿದೆ.

Gruha lakshmi scheme : ಕರ್ನಾಟಕ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಪ್ರತೀ ತಿಂಗಳು ಮನೆಯ ಯಜಮಾನಿಗೆ 2000 ರೂಪಾಯಿ ಹಣವನ್ನು ನೇರ ವರ್ಗಾವಣೆ ಮಾಡುತ್ತಿದೆ. ಕೋಟ್ಯಾಂತರ ಮಹಿಳೆಯರು ಈಗಾಗಲೇ ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಆದರೆ ಕೆಲವು ಮಹಿಳೆಯರಿಗೆ ಇದುವರೆಗೂ ಗೃಹಲಕ್ಷ್ಮೀ ಯೋಜನೆಯ ಲಾಭ ದೊರಕಿಲ್ಲ.

Karnataka Only these women will get Rs 6000 under the gruha lakshmi scheme
Image Credit to Original Source

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಪ್ರತೀ ಕುಟುಂಬದ ಮಹಿಳೆಯರಿಗೂ ಪ್ರತೀ ತಿಂಗಳು ಹಣ ವರ್ಗಾವಣೆ ಮಾಡಲು ಕಾಂಗ್ರೆಸ್‌ ಸರಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಲವು ಕಾರ್ಯಗಳನ್ನು ಮಾಡುತ್ತಿವೆ. ಆದರೂ ಯಾವುದೂ ಫಲಕೊಡುತ್ತಿಲ್ಲ. ಇದೀಗ ಗೃಹಲಕ್ಷ್ಮೀ ಯೋಜನೆ ಯ ಅರ್ಜಿದಾರರ ಮನೆ ಬಾಗಿಲಿಗೆ ಅಧಿಕಾರಿಗಳನ್ನು ಕಳುಹಿಸಿದೆ ಸರಕಾರ.

ಈ ನಡುವಲ್ಲೇ ಮತ್ತೊಂದು ಗುಡ್‌ನ್ಯೂಸ್‌ ಹೊರಬಿದ್ದಿದ್ದು, ಕೆಲವು ಮಹಿಳೆಯರ ಖಾತೆಗೆ ಈ ತಿಂಗಳು 6000  ರೂಪಾಯಿ ಜಮೆ ಆಗಲಿದೆ. ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಕೆಲವು ಮಹಿಳೆಯರಿಗೆ ಇದುವರೆಗೂ ಗೃಹಲಕ್ಷ್ಮೀ ಯೋಜನೆಯ ಹಣ ಸಿಗದೇ ಇದ್ರೆ, ಇನ್ನೂ ಕೆಲವು ಮಹಿಳೆಯರಿಗೆ ಇಕೆವೈಸಿ, ಆಧಾರ್‌ ಸೀಡಿಂಗ್‌ ಕಾರ್ಯ ಮಾಡದೇ ಇರುವ ಕಾರಣಕ್ಕೆ ಹಣ ಜಮೆ ಆಗಿಲ್ಲ.

ಇದನ್ನೂ ಓದಿ : ಉಚಿತ ಬಸ್‌ ಶಕ್ತಿ ಯೋಜನೆ; ಮಹಿಳೆಯರಿಗೆ ಮತ್ತೊಂದು ಭರ್ಜರಿ ಗುಡ್‌ನ್ಯೂಸ್‌ ಕೊಟ್ಟ ಸರಕಾರ

ಅಷ್ಟೇ ಅಲ್ಲದೇ ಕೆಲವು ಗೃಹಿಣಿಯರು ನಿಷ್ಕ್ರೀಯವಾಗಿರುವ ಬ್ಯಾಂಕ್‌ ಖಾತೆಯನ್ನು ನೀಡಿರುವ ಕಾರಣದಿಂದಲೇ ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಕಾಲಾವಕಾಶವನ್ನು ನೀಡಿತ್ತು. ಹೀಗಾಗಿ ಈ ತಿಂಗಳು ಎಲ್ಲಾ ದಾಖಲೆಗಳು ಸರಿಯಾಗಿದ್ದ ಮಹಿಳೆಯರ ಖಾತೆಗೆ ಇದುವರೆಗೆ ನೀಡಲಾಗಿರುವ ಎಲ್ಲಾ ಕಂತಿನ ಹಣವನ್ನು ಒಮ್ಮೆಲೆ ವರ್ಗಾವಣೆ ಮಾಡಲಿದೆ.

Karnataka Only these women will get Rs 6000 under the gruha lakshmi scheme
Image Credit to Original Source

ಇದುವರೆಗೂ ಗೃಹಲಕ್ಷ್ಮೀ ಯೋಜನೆಯ ಹಣ ಸಿಗದೇ ಇರುವವರು ಚಿಂತೆ ಮಾಡುವ ಅಗತ್ಯವಿಲ್ಲ. ಯಾಕೆಂದ್ರೆ ಇದುವರೆಗೆ ಸರಕಾರ ನೀಡಿರುವ ಎಲ್ಲಾ ಕಂತಿನ ಹಣವನ್ನು ಸರಕಾರ ಒಮ್ಮೆಲೆ ನೀಡಲಿದೆ. ನಿಮಗೂ ಯಾವುದಾದ್ರೂ ಕಾರಣಕ್ಕೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗದೇ ಇದ್ರೆ ಕೂಡಲೇ ಅಂಗನವಾಡಿ ಸಹಾಯಕಿಯರು ಅಥವಾ ಆಶಾ ಕಾರ್ಯಕರ್ತರನ್ನು ಸಂಪರ್ಕ ಮಾಡಬಹುದಾಗಿದೆ.

ಇದನ್ನೂ ಓದಿ : ಕೇವಲ 500 ರೂ.ಗೆ ಎಲ್‌ಪಿಜಿ ಗ್ಯಾಸ್, ನಾಳೆಯಿಂದಲೇ ಉಚಿತ ವಿದ್ಯುತ್ : ಸರಕಾರದಿಂದ ಹೊಸ ಘೋಷಣೆ

ಒಂದೊಮ್ಮೆ ನಿಮ್ಮ ಬ್ಯಾಂಕ್‌ ಖಾತೆಯ ಇಕೆವೈಸಿ (eKyc) ಆಗಿಲ್ಲ ಅಂತಾದ್ರೆ ಕೂಡಲೇ ಮಾಡಿಸಿ, ಜೊತೆಗೆ ಬ್ಯಾಂಕ್‌ ಖಾತೆ (Bank Account) ನಿಷ್ಕ್ರೀಯವಾಗಿದ್ರೆ ಕೂಡಲೇ ಬೇರೊಂದು ಖಾತೆಯನ್ನು ಅಧಿಕಾರಿಗಳಿಗೆ ಸಲ್ಲಿಸಿ. ಬ್ಯಾಂಕ್‌ ಖಾತೆ ಮಾತ್ರವಲ್ಲದೇ ಅಂಚೆ ಇಲಾಖೆಯ ಖಾತೆಯ ಸಂಖ್ಯೆಯನ್ನೂ ಕೂಡ ಗೃಹಲಕ್ಷ್ಮೀ ಯೋಜನೆ ಸಲ್ಲಿಕೆ ಮಾಡಬಹುದಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಹಣ ವರ್ಗಾವಣೆ ಹೊಸ ಸೂತ್ರ, ಹಣ ಸಿಗದೇ ಇರುವವರಿಗೂ ಇಲ್ಲಿದೆ ಗುಡ್‌ನ್ಯೂಸ್‌

Karnataka Only these women will get Rs 6000 under the gruha lakshmi scheme

Comments are closed.