ಗೃಹಲಕ್ಷ್ಮೀ ಯೋಜನೆ ಬಿಗ್‌ ಅಪ್ಡೇಟ್ಸ್ : ಕೊನೆಗೂ ಜಮೆಯಾಯ್ತು ಬಾಕಿ ಹಣ, ಇಂದೇ ಬ್ಯಾಲೆನ್ಸ್ ಚೆಕ್‌ ಮಾಡಿ

Gruha Lakshmi Scheme : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಈಗಾಗಲೇ ಐದು ಕಂತಿನ ಹಣ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಆಗಿದೆ. 6ನೇ ಕಂತಿನ ಹಣ ಪಾವತಿಗಾಗಿ ಇಲಾಖೆ ಸಿದ್ದತೆ ನಡೆಸಿದೆ. ಈ ನಡುವಲ್ಲೇ ಇದುವರೆಗೂ ಗೃಹಲಕ್ಷ್ಮೀ ಹಣ ಸಿಗದೇ ಇರುವವರಿಗೆ ಸರಕಾರ ಗುಡ್‌ನ್ಯೂಸ್‌ ಕೊಟ್ಟಿದೆ.

Gruha Lakshmi Scheme : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಈಗಾಗಲೇ ಐದು ಕಂತಿನ ಹಣ ಬ್ಯಾಂಕ್‌ (DBT) ಖಾತೆಗೆ ನೇರವಾಗಿ ಜಮೆ ಆಗಿದೆ. 6ನೇ ಕಂತಿನ ಹಣ ಪಾವತಿಗಾಗಿ ಇಲಾಖೆ ಸಿದ್ದತೆ ನಡೆಸಿದೆ. ಈ ನಡುವಲ್ಲೇ ಇದುವರೆಗೂ ಗೃಹಲಕ್ಷ್ಮೀ ಹಣ ಸಿಗದೇ ಇರುವವರಿಗೆ ಸರಕಾರ ಗುಡ್‌ನ್ಯೂಸ್‌ ಕೊಟ್ಟಿದೆ. ದಾಖಲೆ ಸರಿಯಾಗಿದ್ದವರ ಖಾತೆಗೆ ಹಣ ಜಮೆ ಮಾಡುತ್ತಿದೆ.

ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಿದ್ದವರ ಪೈಕಿ 8 ಲಕ್ಷ ಮಹಿಳೆಯರ ಖಾತೆಗೆ ಇನ್ನೂ ಗೃಹಲಕ್ಷ್ಮೀ ಯೋಜನೆಯ ಒಂದೇ ಒಂದು ಕಂತಿನ ಹಣ ಕೂಡ ಜಮೆ ಆಗಿಲ್ಲ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ( Lakshmi Hebbalkar) ( ಹೇಳಿಕೆಯೊಂದನ್ನು ನೀಡಿದ್ದು, ಇದುವರೆಗೂ ಹಣ ಪಾವತಿ ಆಗದೇ ಇರುವ ಗೃಹಿಣಿಯರ ಖಾತೆಗಳಿಗೆ ಶೀಘ್ರದಲ್ಲಿಯೇ ಹಣ ಪಾವತಿಸುವ ಭರವಸೆಯನ್ನು ನೀಡಿದ್ದರು.

Gruha Lakshmi Scheme Big Updates Finally DBT balance, how to check
Image Credit To Original Source

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಇದುವರೆಗೂ ಗೃಹಿಣಿಯರು 5 ಕಂತುಗಳ ಹಣವನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆ 10 ಸಾವಿರ ರೂಪಾಯಿ ನೇರವಾಗಿ ಮನೆಯ ಯಜಮಾನಿಯರ ಖಾತೆಗೆ ಜಮೆ ಆಗಿದೆ. ಇದೀಗ 6ನೇ ಕಂತಿನ ಹಣ ಫೆಬ್ರವರಿ ಅಂತ್ಯದ ಒಳಗಾಗಿ ಜಮೆ ಆಗಲಿದೆ. ಇದುವರೆಗೂ ಗೃಹಲಕ್ಷ್ಮೀ ಯೋಜನೆಯ ಹಣ ಸಿಗದೇ ಇರುವುದಕ್ಕೆ ತಾಂತ್ರಿಕ ಸಮಸ್ಯೆಯೇ ಕಾರಣ ಎನ್ನಲಾಗುತ್ತಿದೆ.

ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಿದವರ ಪೈಕಿ ಅದೆಷ್ಟೋ ಮಂದಿ ಅರ್ಹ ಫಲಾನುಭವಿಗಳು ಇದ್ದಾರೆ. ಈಗಾಗಲೇ ಅಂತವರ ಖಾತೆಗಳಿಗೆ ಹಣ ವರ್ಗಾವಣೆ (Money Transfer) ಆಗಬೇಕಿತ್ತು. ಆದರೆ ಇಂದಿಗೂ ಒಂದೇ ಒಂದು ಕಂತಿನ ಹಣವೂ ಬ್ಯಾಂಕ್‌ ಖಾತೆಗೆ (Bank Account) ಜಮೆ ಆಗಿಲ್ಲ. ಹಣ ಜಮೆ ಆಗಿಲ್ಲ ಅನ್ನೋ ಚಿಂತೆ ಬಿಟ್ಟು ಸಣ್ಣದೊಂದು ಕೆಲಸ ಮಾಡಿದ್ರೆ ಸಾಕು ನಿಮ್ಮ ಖಾತೆಗೆ ಬಾಕಿ ಇರುವ ಎಲ್ಲಾ ಮೊತ್ತವು ಒಟ್ಟಿಗೆ ಜಮೆ ಆಗಲಿದೆ.

ಇದನ್ನೂ ಓದಿ : ರಾಜ್ಯ ಸರಕಾರಿ ನೌಕರರಿಗೆ 7ನೇ ವೇತನ ಜಾರಿ : ಗುಡ್‌ನ್ಯೂಸ್‌ ಕೊಟ್ಟ ಸಿಎಂ ಸಿದ್ದರಾಮಯ್ಯ

ಆಧಾರ್ ಕಾರ್ಡ್‌, ರೇಷನ್‌ ಕಾರ್ಡ್‌ ಹಾಗೂ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿರುವ ಸ್ವೀಕೃತಿ ಪತ್ರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನೀಡುವ ಮೂಲಕ ಹಣ ಜಮೆ ಆಗದೇ ಇರುವುದಕ್ಕೆ ಎದುರಾಗಿರುವ ಸಮಸ್ಯೆಯನ್ನು ತಿಳಿದುಕೊಳ್ಳಬಹುದು. ತಾಂತ್ರಿಕ ಸಮಸ್ಯೆ ಎದುರಾಗಿದ್ದರೆ, ಅಧಿಕಾರಿಗಳು ಕೂಡ ಸಮಸ್ಯೆಯನ್ನು ಪರಿಹರಿಸಿ ಕೊಡಲಿದ್ದಾರೆ.

Gruha Lakshmi Scheme Big Updates Finally DBT balance, how to check
Image Credit To Original Source

ಒಂದೊಮ್ಮೆ ನಿಮ್ಮ ಅರ್ಜಿ ಅನುಮೋದನೆಗೆ ಬಾಕಿ ಉಳಿದಿದ್ದರೆ ಅಂತಹ ಸಂದರ್ಭದಲ್ಲಿ ಸಿಡಿಪಿಓ ಅವರು ನಿಮ್ಮ ಖಾತೆಯ ಕೆವೈಸಿ (KYC)ಪ್ರಕ್ರಿಯೆ, ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಯೋಜನೆಯ ಲಾಭ ದೊರೆಯುವಂತೆ ಮಾಡುತ್ತಾರೆ. ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಕೆವೈಸಿ ಕಾರ್ಯ ಪೂರ್ಣಗೊಳ್ಳದೇ ಇರುವ ಬಹುತೇಕರಿಗೆ ಹಣ ಬ್ಯಾಂಕ್‌ ಖಾತೆಗೆ ಜಮೆ ಆಗಿಲ್ಲ.

ಇದನ್ನೂ ಓದಿ : ಬಿಪಿಎಲ್‌ ಕಾರ್ಡುದಾರರಿಗೆ 6 ಲಕ್ಷ, ಎಪಿಎಲ್‌ಗೆ 2 ಲಕ್ಷ : ಕೇಂದ್ರ ಸರಕಾರದ ಈ ಯೋಜನೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ನಿಮಗೆ ಹಣ ಬಂದಿಲ್ಲವಾದ್ರೆ ನೀವು ಕೂಡಲೇ ಬ್ಯಾಂಕ್‌ ಕೆವೈಸಿ, ಆಧಾರ್‌ ಕೆವೈಸಿ (Aadhaar KYC), ಎನ್‌ಪಿಸಿಐ ಕೆವೈಸಿ (NCPI KYC) ಆಗಿದೆಯೇ ಅನ್ನೋದನ್ನು ಒಮ್ಮೆ ಖಚಿತಪಡಿಸಿಕೊಳ್ಳಿ. ಎಲ್ಲಾ ಸಮಸ್ಯೆಗಳು ಪರಿಹಾರವಾದ ಕೂಡಲೇ ನಿಮ್ಮ ಬ್ಯಾಂಕ್‌ ಖಾತೆ ಅಥವಾ ಪೋಸ್ಟ್‌ ಆಫೀಸ್‌ನ ಖಾತೆಗಳಿಗೆ ಹಣ ಜಮೆ ಆಗಲಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಗೃಹಿಣಿಯರಿಗೆ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್‌

Gruha Lakshmi Scheme Big Updates: Finally DBT balance, how to check ?

Comments are closed.